ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!
January 3, 2026
ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!
January 3, 2026
ರಂಜಿತಾ ಕೊಂದ ರಫೀಕ್ ಇನ್ನಿಲ್ಲ!
January 4, 2026
ಅಡಿಕೆ ಮರಕ್ಕೆ ಮದ್ದು ಸಿಂಪಡಿಸುತ್ತಿದ್ದ ಸಿದ್ದಾಪುರದ ಮಾಬ್ಲೇಶ್ವರ ಗೌಡ ಅವರು ಮರದಿಂದ ಬಿದ್ದು ಸಾವನಪ್ಪಿದ್ದಾರೆ. ಹಾವೀನಬೀಳು ಗ್ರಾಮದ ಚಿಟ್ಟಟ್ಟೆಮನೆ ಊರಿನ ಕೃಷ್ಣ ಗೌಡ ಅವರ ತೋಟದಲ್ಲಿ ಈ ಅವಘಡ ನಡೆದಿದೆ.
ಸಿದ್ದಾಪುರದ ಹೇರೂರು ತಾರಖಂಡದಲ್ಲಿ ಮಾಬ್ಲೇಶ್ವರ ಗಣಪಾ ಗೌಡ (52) ಅವರು ವಾಸವಾಗಿದ್ದರು. ಕೃಷಿ ಜೊತೆ ಕೂಲಿ ಕೆಲಸ ಮಾಡಿಕೊಂಡು ಅವರು ಬದುಕು ಕಟ್ಟಿಕೊಂಡಿದ್ದರು. ಮೇ 23ರಂದು ಅವರು ಹಾವೀನಬೀಳು ಗ್ರಾಮದ ಚಿಟ್ಟಟ್ಟೆಮನೆ ಊರಿನ ಕೃಷ್ಣ ಶಂಕರ ಗೌಡ ಅವರ ತೋಟಕ್ಕೆ ಹೋಗಿದ್ದರು. ದೋಟಿ, ಕಡಕಮಣೆ, ಹಗ್ಗದ ಸಹಾಯದಿಂದ ಅವರು ಮದ್ದು ಹೊಡೆಯುತ್ತಿದ್ದರು.
ಅಡಿಕೆ ಮರ ಮೇಲೆರಿದ್ದ ಮಾಬ್ಲೇಶ್ವರ ಗೌಡ ಅವರು 35 ಅಡಿಯಷ್ಟು ಎತ್ತರಕ್ಕೆ ಹೋದಾಗ ಅವರ ಕೈ ಜಾರಿತು. ಅದರಿಂದ ಅವರು ನೆಲಕ್ಕೆ ಬಿದ್ದು, ಕಿವಿ ಮೂಗಿಗೆ ಗಾಯವಾಗಿ ರಕ್ತ ಸುರಿಯಿತು. ಆ ನೋವಿನಲ್ಲಿಯೇ ಮಾಬ್ಲೇಶ್ವರ ಗೌಡ ಅವರು ಸಾವನಪ್ಪಿದರು. ಈ ಬಗ್ಗೆ ಮಾಬ್ಲೇಶ್ವರ ಗೌಡ ಅವರ ಮಗ ಮನೋಜ ಗೌಡ ಅವರು ಮಾಹಿತಿ ನೀಡಿದ್ದು, ಪೊಲೀಸರು ಕಾನೂನು ಕ್ರಮ ಜರುಗಿಸಿದರು.
You cannot copy content of this page