ಶಿರಸಿ ಮಾರಿಕಾಂಬೆ ದೇವಸ್ಥಾನಕ್ಕೆ ಹೋಗುವ ಹೊರೆಯನ್ನಿಡುವ ಮುರಿನಕಟ್ಟೆ ಮುರಿದ ವಿಷಯವಾಗಿ ವಿಧಾನ ಪರಿಷತ್ ಶಾಸಕ ಗಣಪತಿ ಉಳ್ವೇಕರ್ ಅವರು ತೀವೃ ಬೇಸರವ್ಯಕ್ತಪಡಿಸಿದ್ದಾರೆ. ಭಟ್ಕಳದಲ್ಲಿ ಹಿಂದೂಗಳ ಧಾರ್ಮಿಕ ಭಾವನೆಗೆ ಅಡ್ಡಿಪಡಿಸಿದವರ ವಿರುದ್ಧ ಅವರು ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.
`ಕರಾವಳಿ ಭಾಗದಲ್ಲಿ ಅಭಿವೃದ್ಧಿಯ ಸಂಕೇತವಾಗಿ ಹೆದ್ದಾರಿ ಅಗಲೀಕರಣ ನಡೆಯುತ್ತಿದೆ. ಹೆದ್ದಾರಿ ನಡುವೆ ಇದ್ದ ಮುರಿನಕಟ್ಟೆಯನ್ನು ಸರ್ವರ ಸಮ್ಮತಿ ಮೇರೆಗೆ ಸರ್ಕಾರಿ ಜಾಗಕ್ಕೆ ಸ್ಥಳಾಂತರಿಸಲಾಗಿದ್ದು, ಅದನ್ನು ಸಹಿಸದೇ ಕೆಲ ಕಿಡಿಗೇಡಿಗಳು ಕಟ್ಟೆಯನ್ನು ಧ್ವಂಸ ಮಾಡಿದ್ದಾರೆ. ಇದನ್ನು ತಡೆಯಲು ಬಂದ ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ ನಡೆದಿದ್ದು ಶೋಚನೀಯ’ ಎಂದು ಗಣಪತಿ ಉಳ್ವೇಕರ್ ಅವರು ಹೇಳಿದ್ದಾರೆ.
`ಭಕ್ತಿ-ಭಾವದಿಂದ ನಿರ್ಮಿಸಿದ ಕಟ್ಟೆಯನ್ನು ಏಕಾಏಕಿ ಧ್ವಂಸ ಮಾಡಿದ್ದು ಸರಿಯಲ್ಲ. ಕಾನೂನು ಮೀರಿ ವರ್ತಿಸಿದ ಗುಂಡಾಗಳ ವಿರುದ್ಧ ಪೊಲೀಸರು ಕಠಿಣ ಕ್ರಮ ಜರುಗಿಸಬೇಕು. ಅಮಾಯಕ ಹಿಂದೂ ಕಾರ್ಯಕರ್ತರನ್ನು ವಶಕ್ಕೆಪಡೆಯುವ ಬದಲು ನೈಜ ಕಿಡಿಗೇಡಿಗಳನ್ನು ಬಂಧಿಸಬೇಕು. ಹಿಂದೂ ಸಮುದಾಯದವರ ಭಾವನೆಗೆ ಧಕ್ಕೆ ಆಗದ ಹೇಗೆ ಮುರಿನಕಟ್ಟೆ ಪುನಃ ಸ್ಥಾಪನೆಯಾಗಬೇಕು ದೇವಿಯ ಶಕ್ತಿಪೀಠದ ಕಟ್ಟೆಗೆ ಎಂದಿಗೂ ಸಮಸ್ಯೆ ಬಾರದ ರೀತಿ ಸರ್ಕಾರ ನಡೆದುಕೊಳ್ಳಬೇಕು’ ಎಂದು ಗಣಪತಿ ಉಳ್ವೇಕರ್ ಅವರು ಆಗ್ರಹಿಸಿದ್ದಾರೆ.