ಚಿನ್ನದ ಕುಸುರಿ ಕೆಲಸ ಮಾಡುತ್ತಿದ್ದ ಕಾರವಾರದ ವೆಂಕಟರಾಯ ಕುಡ್ತರಕರ್ ಅವರು ನಿಗೂಢವಾಗಿ ಕಣ್ಮರೆಯಾಗಿದ್ದಾರೆ. `ಹಬ್ಬುವಾಡಕ್ಕೆ ಹೋಗಿ ಬರುವೆ’ ಎಂದು ಹೊರಟ ಅವರು ಮತ್ತೆ ಮನೆಗೆ ಮರಳಿಲ್ಲ.
ಕಾರವಾರದ ಸುಂಕೇರಿ ಕಠಿಣಕೋಣದ ಮೂರು ದೇವಸ್ಥಾನದ ಹತ್ತಿರ ವೆಂಕಟರಾಯ ನಾರಾಯಣ ಕುಡ್ತರಕರ್ (36) ಅವರು ವಾಸವಾಗಿದ್ದರು. ವೆಂಕಟರಾಯ್ ಕುಡ್ತರಕರ್ ಅವರ ಪತ್ನಿ ಪೂಜಾ ಕುಡ್ತರಕರ್ ಅವರು ಕೆನರಾ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದು, ಈಚೆಗೆ ಚಿನ್ನದ ಕುಸೂರಿ ಕೆಲಸದಲ್ಲಿ ವೆಂಕಟರಾಯ ಕುಡ್ತರಕರ್ ಅವರು ನಷ್ಟ ಅನುಭವಿಸಿದ್ದರು. ಜೊತೆಗೆ ಕಿಡ್ನಿ ಕಲ್ಲು ಸಮಸ್ಯೆ ಅವರನ್ನು ಕಾಡಿಸಿದ್ದು, ಅದರಿಂದಲೂ ಬೇಸರಿಸಿಕೊಂಡಿದ್ದರು.
ಏಪ್ರಿಲ್ 28ರ ರಾತ್ರಿ 10 ಗಂಟೆಗೆ ವೆಂಕಟರಾಯ್ ಕುಡ್ತಕರಕರ್ ಅವರು ತಮ್ಮ ಪತ್ನಿಗೆ ಫೋನ್ ಮಾಡಿದ್ದರು. ನನಗೆ ಹಬ್ಬುವಾಡದಲ್ಲಿ ಸ್ವಲ್ಪ ಕೆಲಸವಿದೆ. ಮುಗಿಸಿ ಮನೆಗೆ ಬರುವೆ’ ಎಂದಿದ್ದರು. ಆದರೆ, ಮರು ದಿನವಾದರೂ ಅವರು ಬರಲಿಲ್ಲ. ಆತಂಕಗೊAಡ ಪೂಜಾ ಕುಡ್ತರಕರ್ ಅವರು ಎಲ್ಲಾ ಕಡೆ ಹುಡುಕಾಟ ನಡೆಸಿದರು. ಆಗ, ಕಾರವಾರದ ಮಿತ್ರ ಸಮಾಜದ ಹತ್ತಿರ ಅವರ ಕಾರು ಪತ್ತೆಯಾಯಿತು. ಕಾರಿನ ಒಳಗೆ ಮೊಬೈಲ್ ಕಾಣಿಸಿತು. ಆದರೆ, ವೆಂಕಟರಾಯ ಕುಡ್ತರಕರ್ ಅವರು ಮಾತ್ರ ಎಲ್ಲಿಯೂ ಸಿಗಲಿಲ್ಲ. ಈ ಹಿನ್ನಲೆ ಪೂಜಾ ಕುಡ್ತರಕರ್ ಅವರು ಪೊಲೀಸ್ ದೂರು ನೀಡಿದ್ದು, ಪೊಲೀಸರು ಹುಡುಕಾಟ ನಡೆಸಿದ್ದಾರೆ.