ಕಾರವಾರದ ಅಮದಳ್ಳಿಯಲ್ಲಿರುವ ಪ್ರೇಮ ಆಶ್ರಮ ಚ್ಯಾರಿಟಬಲ್ ಟ್ರಸ್ಟಿನವರು ಅಸ್ನೋಟಿಯಲ್ಲಿ ಬಾಲಕಿಯರ ವಸತಿ ನಿಲಯ ಸ್ಥಾಪಿಸಿದ್ದು, ಅಲ್ಲಿನ ವಿದ್ಯಾರ್ಥಿನಿಯರು ಮಹತ್ವದ ಸಾಧನೆ ಮಾಡಿದ್ದಾರೆ. ಗುಡ್ಡಗಾಡು ಪ್ರದೇಶದ ಜನರಿಗೆ ಇಲ್ಲಿ ಆಶ್ರಯ ನೀಡಲಾಗಿದ್ದು, ಲಭ್ಯ ಅವಕಾಶ ಬಳಸಿಕೊಂಡ ವಿದ್ಯಾರ್ಥಿನಿಯರು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ದಾಖಲೆ ಬರೆದಿದ್ದಾರೆ.
ಜೋಯಿಡಾ ತಾಲೂಕಿನ ಗುಡ್ಡಗಾಡು ಪ್ರದೇಶದ ವಿದ್ಯಾರ್ಥಿನಿಯರಿಗಾಗಿಯೇ 2010ರಲ್ಲಿ ಅಸ್ನೋಟಿಯಲ್ಲಿ ಬಾಲಕಿಯರ ವಸತಿ ನಿಲಯ ಶುರುವಾಯಿತು. ಜಿ ಎಸ್ ನಾಯ್ಕ ಅವರು ಇದನ್ನು ತಮ್ಮ ಜೀವಿತಾವಧಿಯ ನಂತರವೂ ಸಾವಿರಾರು ವಿದ್ಯಾರ್ಥಿಗಳಿಗೆ ಅವರು ನೆರವಾಗುತ್ತಿದ್ದಾರೆ. ಗ್ರಾಮೀಣ ಪ್ರದೇಶದ ಬಾಲಕಿಯರು ಸೌಲಭ್ಯ ಕೊರತೆಯಿಂದ ಶಿಕ್ಷಣದಿಂದ ದೂರವಾಗಬಾರದು ಎಂಬ ಸಂಕಲ್ಪದೊoದಿಗೆ ಈ ವಸತಿ ನಿಲಯ ನಡೆಯುತ್ತಿದೆ. ಅಮದಳ್ಳಿಯಲ್ಲಿರುವ ಪ್ರೇಮ ಆಶ್ರಮ ಚ್ಯಾರಿಟಬಲ್ ಟ್ರಸ್ಟಿನವರು ಈ ನಿಲಯಕ್ಕೆ ಬೆನ್ನೆಲುಬಾಗಿದ್ದಾರೆ.
ಈ ವರ್ಷದ ಎಸ್ ಎಸ್ ಎಲ್ ಸಿ ಪರೀಕ್ಷಾ ಫಲಿತಾಂಶದಲ್ಲಿ ವಸತಿ ನಿಲಯದಲ್ಲಿದ್ದ ಅಶ್ವಿತಾ ದೇಸಾಯಿ ಶೇ 93 ,ನಾಗರತ್ನಾ ವೇಳಿಪ ಶೇ 92, ಚೈತಾಲಿ ಮಿರಾಶಿ ಶೇ 89, ನಮ್ರತಾ ವೇಳಿಪ ಶೇ 86, ಗಾಯತ್ರಿ ಆವಳ್ಕರ ಶೇ 84 ಸಾಧನೆ ಮಾಡಿದ್ದಾರೆ. ಜೊತೆಗೆ ಶ್ರದ್ದಾ ಮಿರಾಶಿ, ಸಂಗೀತಾ ಮಿರಾಶಿ, ಪ್ರೀಯಾ ಬಿರಂಗತ, ರತಿಕಾ ಮಸ್ಕಾರ, ಮನಿಷಾ ವೇಳಿಪ, ಚೈತ್ರಾ ವೇಳಿಪ,ಪ್ರತಿಕ್ಷಾ ಮಿರಾಶಿ ಅವರು ಉತ್ತಮ ಶ್ರೇಣಿಯಲ್ಲಿ ಪಾಸಾಗಿದ್ದಾರೆ. ಈ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಮತ್ತು ವಸತಿ ನಿಲಯದ ಮೇಲ್ವಿಚಾರಕಿ ಗೌರಿ ದೇಸಾಯಿ ಮತ್ತು ಶಿವಾಜಿ ವಿದ್ಯಾಮಂದಿರದ ಮುಖ್ಯಾಧ್ಯಾಪಕ-ಸಿಬ್ಬಂದಿ ಜೊತೆ ಪ್ರೇಮ ಆಶ್ರಮ ಚ್ಯಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಸೀತಾರಾಮ ಗಾಂವಕರ, ಕಾರ್ಯದರ್ಶಿ ದಿನೇಶ ಗಾಂವಕರ, ಟ್ರಸ್ಟಿ ಶ್ಯಾಮಕುಮಾರ ದೇಸಾಯಿ ಶಿಕ್ಷಣ ಪ್ರೇಮಿಗಳಾದ ಅನಿಲಕುಮಾರ ಗಾಂವಕರ, ಪ್ರಕಾಶ ಗಾಂವಕರ ಅವರು ಶುಭ ಹಾರೈಸಿದ್ದಾರೆ.