ಎರಡು ತಿಂಗಳ ಹಿಂದೆ ತೆಂಗಿನ ಮರದಿಂದ ಬಿದ್ದು ಸೊಂಟ ಮುರಿದುಕೊಂಡಿದ್ದ ಶಿರಸಿಯ ರಾಮಾ ಮರಾಠಿ ಅವರು ಮೂರು ಆಸ್ಪತ್ರೆಗಳ ಅಲೆದಾಟ ಮಾಡಿದ್ದಾರೆ. ಆದರೂ, ಅವರ ಆರೋಗ್ಯದಲ್ಲಿ ಚೇತರಿಕೆಯಾಗದೇ ಸಾವನಪ್ಪಿದ್ದಾರೆ.
ಶಿರಸಿ ಹುಲೆಕಲ್ ಬಳಿಯ ಮರನಕೊಡ್ಲುವಿನಲ್ಲಿ ರಾಮ ಶಂಭಾ ಮರಾಠಿ (53) ಅವರು ವಾಸವಾಗಿದ್ದರು. ಕೃಷಿ, ಕೂಲಿ ಕೆಲಸದ ಜೊತೆ ಅವರು ಮರ ಹತ್ತುವ ಕೌಶಲ್ಯವನ್ನು ಮೈಗೂಡಿಸಿಕೊಂಡಿದ್ದರು. ಅದರಂತೆ, ಮಾರ್ಚ 29ರಂದು ಮನೆ ಮುಂದಿನ ತೆಂಗಿನ ಮರ ನೋಡಿದ ಅವರು ಅಲ್ಲಿದ್ದ ಕಾಯಿ ಕೊಯ್ಯಲು ನಿರ್ಧರಿಸಿದ್ದರು. ಮರ ಏರಿದ ಅವರು 35 ಅಡಿ ಎತ್ತರಕ್ಕೆ ಹೋದಾಗ ಕಾಲು ಜಾರಿದ್ದು, ರಭಸವಾಗಿ ನೆಲಕ್ಕೆ ಅಪ್ಪಳಿಸಿದರು.
ಅಷ್ಟು ಎತ್ತರದಿಂದ ಬಿದ್ದ ಪರಿಣಾಮ ರಾಮ ಮರಾಠಿ ಅವರ ಸೊಂಟ ಹಾಗೂ ಕೈಗೆ ಗಾಯವಾಯಿತು. ಕುಟುಂಬದವರು ಅವರನ್ನು ಪಂಡಿತ್ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ಚಿಕಿತ್ಸೆ ನೀಡಿದ ವೈದ್ಯರು ಉನ್ನತ ಚಿಕಿತ್ಸೆಗಾಗಿ ಬೇರೆ ಆಸ್ಪತ್ರೆಗೆ ಶಿಫಾರಸ್ಸು ಮಾಡಿದರು. ಕಾರವಾರ ಜಿಲ್ಲಾಸ್ಪತ್ರೆಯಲ್ಲಿ ರಾಮ ಮರಾಠಿ ಅವರಿಗೆ ಚಿಕಿತ್ಸೆ ನೀಡಲಾಯಿತು. ಏಪ್ರಿಲ್ 4ರವರೆಗೆ ಚಿಕಿತ್ಸೆ ಕಾರವಾರದಲ್ಲಿ ಚಿಕಿತ್ಸೆಪಡೆದರೂ ಸುಧಾರಿಸಿದ ಕಾರಣ ಮುಂದೆ ಮಂಗಳೂರು ವೆನ್ ಲಾಕ್ ಆಸ್ಪತ್ರೆಗೆ ಅವರನ್ನು ದಾಖಲಿಸಿ, ಆರೈಕೆ ಮಾಡಲಾಯಿತು.
ಆದರೆ, ಈ ಮೂರು ಆಸ್ಪತ್ರೆಯ ಓಡಾಟದಿಂದಲೂ ರಾಮ ಮರಾಠಿ ಅವರ ಆರೋಗ್ಯ ಸುಧಾರಿಸಲಿಲ್ಲ. ಮೇ 13ರಂದು ಅವರು ಸಾವನಪ್ಪಿದರು. ಪತಿಯ ಸಾವಿನ ಬಗ್ಗೆ ಮಹಾಲಕ್ಷಿ ಮರಾಠಿ ಅವರು ಮಾಹಿತಿ ನೀಡಿದ್ದು, ಶಿರಸಿ ಗ್ರಾಮೀಣ ಠಾಣೆ ಪೊಲೀಸರು ಮುಂದಿನ ಕ್ರಮ ಜರುಗಿಸಿದರು.