ಕಾರವಾರ ಕದ್ರಾದ ಡುಮ್ಮಿಂಗ್ ರೋಡಿಗ್ರಿಸ್ ಅವರು ಆಸ್ಪತ್ರೆಗೆ ದಾಖಲಾಗಿದ್ದು, ಅಲ್ಲಿ ಸರಾಯಿ ಸಿಗದ ಕಾರಣ ತಪ್ಪಿಸಿಕೊಂಡು ಮನೆಗೆ ಬಂದಿದ್ದಾರೆ. ಮನೆಯಲ್ಲಿಯೂ ಸರಾಯಿ ಕುಡಿಯಲು ಕೊಡದ ಕಾರಣ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಕಾರವಾರ ಕದ್ರಾದ ಚರ್ಚವಾಡದಲ್ಲಿ ಡುಮ್ಮಿಂಗ್ ಮನ್ವೇಲ್ ರೋಡಿಗ್ರಿಸ್ ಅವರು (49) ವಾಸವಾಗಿದ್ದರು. ರಿಕ್ಷಾ ಚಾಲಕರಾಗಿ ಅವರು ಕೆಲಸ ಮಾಡಿಕೊಂಡಿದ್ದರು. ತಮ್ಮ ದುಡಿಮೆಯ ಎಲ್ಲಾ ಹಣವನ್ನು ಅವರು ಸರಾಯಿ ಅಂಗಡಿಗೆ ಕೊಡುತ್ತಿದ್ದರು. ವಿಪರೀತ ಪ್ರಮಾಣದಲ್ಲಿ ಸರಾಯಿ ಕುಡಿದ ಕಾರಣ ಅವರಿಗೆ ಲಿವರ್ ಸಮಸ್ಯೆ ಕಾಡಿತು.
ಅನಾರೋಗ್ಯಕ್ಕೆ ಒಳಗಾದ ಡುಮ್ಮಿಂಗ್ ರೋಡಿಗ್ರಿಸ್ ಅವರನ್ನು ಕುರ್ನಿಪೇಟೆಗೆ ಕರೆತರಲಾಯಿತು. ಅಲ್ಲಿದ್ದ ಡಾ ಸುರೇಶ್ ಅವರ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆಯಲ್ಲಿ (ಆಯುರ್ವೇದ) ಅವರನ್ನು ದಾಖಲಿಸಲಾಯಿತು. ಚಿಕಿತ್ಸೆ ನೀಡಿದ ವೈದ್ಯರು `ಸರಾಯಿ ಸೇವನೆ ಬಿಡಬೇಕು’ ಎಂದು ಸೂಚಿಸಿದರು. `ಸರಾಯಿ ಕುಡಿಯಲು ಕೊಡಬೇಡಿ’ ಎಂದು ಕುಟುಂಬದವರಿಗೆ ಸಹ ತಾಕೀತು ಮಾಡಿದರು. ಅದಾಗಿಯೂ, ಡುಮ್ಮಿಂಗ್ ರೋಡಿಗ್ರಿಸ್ ಅವರಿಗೆ ಸರಾಯಿ ಬಿಟ್ಟು ಬದುಕಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಸರಾಯಿ ತಂದುಕೊಡುವAತೆ ಅವರು ಪತ್ನಿ ಅನಿತಾ ರೋನಿ ರಜರತ್ ಅವರಲ್ಲಿ ಕೇಳಿದ್ದರು.
ಆದರೆ, ವೈದ್ಯರೇ ಸರಾಯಿ ಸೇವಿಸದಂತೆ ಸೂಚಿಸಿದ ಕಾರಣ ಅನಿತಾ ಅವರು ಪತಿಗೆ ಸರಾಯಿ ಪೂರೈಕೆ ಮಾಡಲಿಲ್ಲ. ಆಸ್ಪತ್ರೆಯಲ್ಲಿ ಸರಾಯಿ ಸಿಗದ ಕಾರಣ ಡುಮ್ಮಿಂಗ್ ರೋಡಿಗ್ರಿಸ್ ಅವರು ಅಲ್ಲಿಂದ ತಪ್ಪಿಸಿಕೊಂಡರು. ಮೇ 1ರಂದು ಮನೆಗೆ ಬಂದ ಅವರು ಅಲ್ಲಿ ಸರಾಯಿ ಹುಡುಕಿದರು. ಸಿಗದ ಕಾರಣ ಅಲ್ಲಿಯೇ ಆತ್ಮಹತ್ಯೆಗೆ ಶರಣಾದರು.
`ಆತ್ಮಹತ್ಯೆ ಅಪರಾಧ’