`ವಿಶ್ವ ಪರಂಪರೆಯ ಸಂರಕ್ಷಣೆಗಾಗಿ ಕಟ್ಟುನಿಟ್ಟಾಗಿ ನಿಯಮ ಪಾಲಿಸುವಂತೆ ಯುನಿಸ್ಕೋ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಿದ್ದು, ಇದರಿಂದ ಅಘನಾಶಿನಿ ನದಿ ಜೋಡಣೆಗೆ ಬಲ ಬಂದಿದೆ’ ಎಂದು ಜಿ ಪಂ ಮಜಿ ಸದಸ್ಯ ಎನ್ ವಿ ಹೆಗಡೆ ಮುತ್ತಿಗೆ ಅವರು ಹೇಳಿದ್ದಾರೆ.
ಸಿದ್ದಾಪುರದ ರಾಘವೇಂದ್ರ ಸಭಾ ಮಂಟಪದಲ್ಲಿ ಶುಕ್ರವಾರ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಅವರು ಆಯೋಜಿಸಿದ್ದ ಸಭೆಯಲ್ಲಿ ಅವರು ಮಾತನಾಡಿದ್ದು, `ಯಾವುದೇ ಅಭಿವೃದ್ದಿ ಅಥವಾ ನದಿ ಜೋಡಣೆ ಯೋಜನೆಯು ವಿಶ್ವ ಪರಂಪರೆಯ ಸಂರಕ್ಷಣಾ ಚೌಕಟ್ಟುಗಳ ಅಡಿಯಲ್ಲಿ ನಿಗದಿಪಡಿಸಿದ ಮಾನದಂಡಗಳನ್ನು ಅನುಸರಿಸಬೇಕು. ಪರಿಸರ ಸಮತೋಲನಕ್ಕೆ ಹಾನಿ ಮಾಡದ ಹಾಗೇ ಕೆಲಸ ನಿರ್ವಹಿಸಬೇಕು ಎಂದು ಯುನಿಸ್ಕೋ ಹೇಳಿದೆ. ಅಘನಾಶಿನಿ – ವೇದಾವತಿ ನದಿ ಜೋಡಣೆ ಯೋಜನೆಯನ್ನು ವಿರೋಧಿಸಿ ಯುನಿಸ್ಕೋ ವಿಶ್ವ ಪರಂಪರೆಯ ಕೇಂದ್ರವು 1972ರ ವಿಶ್ವ ಪರಂಪರೆಯ ಸಮಾವೇಶದ ಪ್ರಕಾರ ನೈಸರ್ಗಿಕ ಪರಂಪರೆಯ ರಕ್ಷಣೆ ಮತ್ತು ಸಂರಕ್ಷಣೆ ಆಯಾ ದೇಶಗಳ ಜವಬ್ದಾರಿಯಾಗಿದೆ’ ಎಂದು ಹೇಳಿದ್ದಾರೆ. ಯುನಿಸ್ಕೋ ಸಂಸ್ಥೆಯು ಪತ್ರದಲ್ಲಿ ಕೇಂದ್ರಕ್ಕೆ ವಾಗ್ದಂಡವನ್ನು ವಿಧಿಸಿರುವುದನ್ನು ಎನ್ ವಿ ಹೆಗಡೆ ಮುತ್ತಿಗೆ ಅವರು ಪ್ರದರ್ಶಿಸಿದ್ದಾರೆ.
`ಅಘನಾಶಿನಿ ನದಿ ಉಳುವಿಗೆ ತಾಂತ್ರಿಕ ಮತ್ತು ಕಾನೂನಾತ್ಮಕ ಹೋರಾಟವನ್ನು ಸಾಂಘಿಕ ಸಂಘಟನೆ ಮೂಲಕ ಮುಂದವರೆಸಿಕೊAಡು ಹೋಗಬೇಕು ಎಂದು ಸಭೆಯಲ್ಲಿ ನಿರ್ಣಯಿಸಲಾಗಿದೆ. ಯೋಜನೆಗಳ ಕುರಿತು ಎಮ್ ಎಸ್ ನಾಯ್ಕ ನರಮುಂಡಗಿ, ಸಂಕೇತ ನಾಯ್ಕ ಹಲಗೇರಿ, ವಿದ್ಯಾ ನಾಯ್ಕ ಹಾರ್ಸಿಕಟ್ಟ, ರಾಜು ನಾಯ್ಕ ಕ್ಯಾದಗಿ, ದಿವಾಕರ್ ನಾಯ್ಕ ಬಾಳೆಜಡ್ಡಿ ಮಾತನಾಡಿದ್ದಾರೆ. ಹರಿಹರ ನಾಯ್ಕ ತಂಡಾಗುAಡಿ, ಶ್ರೀಧರ ಹೆಗಡೆ ಕೆರೆಮನೆ, ಎಮ್ ಆರ್ ನಾಯ್ಕ ಬೇಡ್ಕಣಿ, ಉಪಸ್ಥಿತರಿದ್ದರು. ಸುಧಾಕರ ಮಡಿವಾಳ ಬಿಳಗಿ, ಮಂಜು ಹುತ್ಗಾರ, ರಾಮಚಂದ್ರ ನಾಯ್ಕ ತ್ಯಾಗಲಿ ಮನೆ, ತಿಮ್ಮಪ್ಪ ನಾಯ್ಕ ವಾಟಗಾರ, ಅಬ್ದುಲ್ ಸುಭಾನ ಅರೆಂದೂರು, ಉಮೇಶ ನಾಯ್ಕ ತ್ಯಾಗಲಿ, ತಾರ್ತಿಸ್ ಫರ್ನಾಂಡಿಸ್, ಚೌಡು ಗೌಡ ಕಿತ್ತೋಳ್ಳಿ, ದಿನೇಶ ನಾಯ್ಕ ಹಾರ್ಸಿಕಟ್ಟ, ರಾಜು ನಾಯ್ಕ ಕಿರೆಕೋಡ, ಮಂಜುನಾಥ ಶಿವಾನಂದ ಹೆಮ್ಮನಬೈಲ್, ಭಾಸ್ಕರ್ ನಾಯ್ಕ ಕುರಗೇತೋಟ, ಮಂಜುನಾಥ ನಾಯ್ಕ ಬಿದ್ರಖಾನ, ರವಿ ನಾಯ್ಕ ಹಂಜಗಿ, ಮಂಜುನಾಥ ಮಡಿವಾಳ ಕಿಲಾರ ಇತರರು ಅಭಿಪ್ರಾಯವ್ಯಕ್ತಪಡಿಸಿದ್ದಾರೆ. ಕೆ ಟಿ ನಾಯ್ಕ ಹಾಗೂ ಮಾಬ್ಲೇಶ್ವರ ನಾಯ್ಕ ಬೇಡ್ಕಣಿ ಕಾರ್ಯಕ್ರಮ ನಿರ್ವಹಿಸಿದ್ದಾರೆ.