ಹಳಿಯಾಳದ ಕೆಸರೊಳ್ಳಿ ಕ್ರಾಸಿನ ಮುಂದಿರುವ ಪಾಟೀಲ್ ಪೆಟ್ರೊಲ್ ಬಂಕಿನ ಬಳಿ ಸ್ಕೂಟಿಯೊಂದು ಲಾರಿಗೆ ಗುದ್ದಿದೆ. ಪರಿಣಾಮ ಬೆಂಗಳೂರಿನ ವಿದ್ಯಾರ್ಥಿಯೊಬ್ಬರು ಸಾವನಪ್ಪಿದ್ದಾರೆ.
ಬೆಂಗಳೂರಿನ ಶ್ಯಾಂಪೂರ ರೇಲ್ವೆ ಟ್ರಾಕ್ ಬೇಕನ ಇಂಗ್ಲಿಶ್ ಮೀಡಿಯಂ ಸ್ಕೂಲ್ ಬಳಿಯ ಮೊಹಮದ್ ರಹೀಂ (22) ಅವರು ಮೇ 13ರಂದು ಹಳಿಯಾಳಕ್ಕೆ ಬಂದಿದ್ದರು. ಸ್ಕೂಟಿಯೊಂದರಲ್ಲಿ ಅವರು ಮೊಹ್ಮಮದ ಜೀಲಾನ ಅಬ್ದುಲ ವಾಜಿದ (21) ಅವರನ್ನು ಕೂರಿಸಿಕೊಂಡು ಹಳಿಯಾಳದಿಂದ ದಾಂಡೇಲಿ ಕಡೆ ಹೊರಟಿದ್ದರು. ಪಾಟೀಲ್ ಪೆಟ್ರೊಲ್ ಬಂಕಿನ ಬಳಿ ಅವರು ಎದುರಿಗಿದ್ದ ಲಾರಿ ಹಿಂದಿಕ್ಕುವ ನಿರ್ಧಾರ ಮಾಡಿದರು.
ಅದಕ್ಕಾಗಿ ಮೊಹಮದ್ ರಹೀಂ ಅವರು ವೇಗವಾಗಿ ಸ್ಕೂಟಿ ಓಡಿಸಿದರು. ಆದರೆ, ಲಾರಿಯ ಹಿಂಬದಿ ಚಕ್ರದ ಬಳಿ ಸ್ಕೂಟಿಯ ಮಡಗಾರ್ಡ ತಾಗಿತು. ಆ ಅವಘಡದಲ್ಲಿ ವೇಗವಾಗಿದ್ದ ಸ್ಕೂಟಿ ನೆಲಕ್ಕೆ ಅಪ್ಪಳಿಸಿತು. ಸ್ಕೂಟಿಯ ಸಹಸವಾರರಾಗಿದ್ದ ಮೊಹ್ಮಮದ ಜೀಲಾನ ಅಬ್ದುಲ ವಾಜಿದ ಅವರು ನೆಲಕ್ಕೆ ಬಿದ್ದು ಸಾವನಪ್ಪಿದರು. ಸ್ಕೂಟಿ ಸವಾರ ಮೊಹಮದ್ ರಹೀಂ ಸಹ ಗಂಭೀರ ಪ್ರಮಾಣದಲ್ಲಿ ಗಾಯಗೊಂಡರು.