ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ `ಶ್ರಾವಣಿ ಸುಬ್ರಹ್ಮಣ್ಯ’ ಧಾರಾವಾಹಿ ತಂಡ ಶ್ರೀಕ್ಷೇತ್ರ ಗೋಕರ್ಣಕ್ಕೆ ಆಗಮಿಸಿದೆ. ಇಲ್ಲಿನ ವಿವಿಧ ಬೀದಿಗಳಲ್ಲಿ ಬುಧವಾರದಿಂದ ಧಾರವಾಹಿ ಚಿತ್ರಿಕರಣ ಶುರುವಾಗಿದೆ.
ಶ್ರಾವಣಿ ಸುಬ್ರಹ್ಮಣ್ಯ ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅತ್ಯಂತ ಜನಪ್ರಿಯ ದೈನಂದಿನ ಧಾರಾವಾಹಿ. 2024ರ ಮಾರ್ಚ 18ರಿಂದ ಈ ಧಾರಾವಾಹಿ ಪ್ರಸಾರವಾಗುತ್ತಿದ್ದು, ವಿಭಿನ್ನ ಬಗೆಯ ಕಥಾಹಂದರವನ್ನು ಹೊಂದಿದೆ. ಧಾರಾವಾಹಿಯ ಕಥೆಯು ಮುಖ್ಯವಾಗಿ ಅಪ್ಪ ಮತ್ತು ಮಗಳ ಭಾವನಾತ್ಮಕ ಸಂಬAಧದ ಸುತ್ತ ಸುತ್ತುವರೆದಿದೆ. ಇಷ್ಟು ದಿನಗಳ ಕಾಲ ಬೆಂಗಳೂರಿನಲ್ಲಿಯೇ ಚಿತ್ರಿಕರಣವಾಗುತ್ತಿದ್ದ ಈ ಧಾರಾವಾಹಿ ಸದ್ಯ ಗೋಕರ್ಣ ಹಾಗೂ ಸುತ್ತಲಿನ ಪ್ರದೇಶವನ್ನು ಆವರಿಸಿದೆ.
ಮಹಾಬಲೇಶ್ವರ ಮಂದಿರದ ಮುಂಭಾಗ, ಕೆಲ ಅಂಗಡಿ ಹಾಗೂ ಇನ್ನಿತರ ಕಡೆ ಈ ದಿನ ಚಿತ್ರಿಕರಣ ನಡೆದಿದೆ. ಕಿರುತರೆ ನಟ-ನಟಿಯರು ಗೋಕರ್ಣಕ್ಕೆ ಆಗಮಿಸಿದ್ದು, ಇಲ್ಲಿನ ಸೌಂದರ್ಯ ಆಹ್ವಾದಿಸಿದ್ದಾರೆ. ಖಾಸಗಿ ರೆಸಾರ್ಟಿನಲ್ಲಿ ಅವರು ವಸತಿ ಹೂಡಿದ್ದಾರೆ. ಇನ್ನು ಕೆಲ ದಿನಗಳ ಕಾಲ ಗೋಕರ್ಣ ಹಾಗೂ ಸುತ್ತಲಿನ ಪ್ರದೇಶದಲ್ಲಿ ಚಿತ್ರಿಕರಣ ನಡೆಯಲಿದೆ.