ಶಿರಸಿಯ ಚಿಪಗಿ ಬಳಿಯ ಶೋಭಾ ಆರೇರ್ ಅವರು ಆರು ವರ್ಷದ ಹಿಂದೆ ತಮ್ಮ 2 ಗುಂಟೆ ಜಾಗವನ್ನು ಮಾರಾಟ ಮಾಡಿದ್ದಾರೆ. ಆ ಜಾಗ ಖರೀದಿಸಿದ ಮೀನಾಕ್ಷಿ ಪಟಗಾರ ಹಾಗೂ ಅವರ ಕುಟುಂಬದವರೇ ಇದೀಗ ಶೋಭಾ ಆರೇರ್ ಅವರ ಕಷ್ಟಕ್ಕೆ ಕಾರಣರಾಗಿದ್ದಾರೆ.
ಶಿರಸಿ ಚಿಪಗಿ ಸಮೀಪದ ಕೆಳಗಿನ ಎಸಳೆಯಲ್ಲಿ ಶೋಭಾ ಲಕ್ಷö್ಮಣ ಆರೇರ್ ಅವರು ವಾಸವಾಗಿದ್ದಾರೆ. ಅವರು ತಮ್ಮ ಜಾಗವನ್ನು ಮೀನಾಕ್ಷಿ ರಾಘವೇಂದ್ರ ಪಟಗಾರ ಅವರಿಗೆ ಮಾರಾಟ ಮಾಡಿದ್ದು, ಅದೇ 2 ಗುಂಟೆ ಕ್ಷೇತ್ರದಲ್ಲಿ ಮೀನಾಕ್ಷಿ ಪಟಗಾರ ಅವರು ಮನೆ ಕಟ್ಟಿಕೊಂಡಿದ್ದಾರೆ. ಪಕ್ಕಲ್ಲಿ ಒಂದಷ್ಟು ಜಾಗ ಖಾಲಿ ಇದ್ದು, ಅದರಂಚಿನಲ್ಲಿ ಶೋಭಾ ಆರೇರ್ ಅವರ ಮನೆಯಿದೆ. ಹೀಗಿರುವಾಗ ಆ ಖಾಲಿ ಜಾಗದಲ್ಲಿ ಕಪೌಂಡ್ ಕಟ್ಟಲು ರೇತಿ-ಕಡಿ ದಾಸ್ತಾನು ನಡೆದಿದ್ದು, ಅಲ್ಲಿಯೇ ಮೀನಾಕ್ಷಿ ಪಟಗಾರ ಅವರು ನಿತ್ಯದ ಮುಸುರೆ ಚೆಲ್ಲುತ್ತಿದ್ದಾರೆ. ಆ ಮುಸುರೆ ವಾಸನೇ ಸಹಿಸಲಾಗದೇ ಶೋಭಾ ಆರೇರ್ ಕುಟುಂಬದವರು ಕೆಂಗಟ್ಟಿದ್ದಾರೆ.
ನಿತ್ಯವೂ ಮುಸರೆಯನ್ನು ಮನೆ ಪಕ್ಕ ಹಾಕುವ ಬಗ್ಗೆ ಶೋಭಾ ಆರೇರ್ ಅವರು ಪ್ರಶ್ನಿಸಿದ್ದಾರೆ. ಇದರಿಂದ ಮೀನಾಕ್ಷಿ ಪಟಗಾರ ಅವರು ಸಿಟ್ಟಾಗಿದ್ದಾರೆ. ಅವರಿಬ್ಬರ ನಡುವೆ ಇದೇ ವಿಷಯವಾಗಿ ವೈಮನಸ್ಸು ಮೂಡಿದ್ದು, ಅದು ಕುಟುಂಬದವರ ನಡುವಿನ ಹೊಡೆದಾಟಕ್ಕೂ ಕಾರಣವಾಗಿದೆ. ಈ ಹೊಡೆದಾಟಕ್ಕೆ ಕೈ ಜೋಡಿಸಿದ ಶಿರಸಿ ಬಚಗಾಂವಿನ ಜೈವಂತ ಪರಮೇಶ್ವರ ಮಡಿವಾಳ ಹಾಗೂ ಕುಮಟಾ ಹೆಗಡೆಯ ನೇತ್ರಾವತಿ ಮಣಿಕಂಠ ಅಂಬಿಗ ಸೇರಿ ಶೋಭಾ ಆರೇರ್ ಅವರ ಸೀರೆ ಬಿಚ್ಚಿದ್ದಾರೆ. ಮೇ 20ರಂದು ನಡೆದ ಗಲಾಟೆಯಲ್ಲಿ ನಕೂಲ್ ರಾಘವೇಂದ್ರ ಪಟಗಾರ ಅವರು ಜೊತೆಯಾಗಿದ್ದು, ಎಲ್ಲರೂ ಸೇರಿ ಶೋಭಾ ಆರೇರ್ ಅವರ ಕುತ್ತಿಗೆ ಹಿಸುಕಿದ್ದಾರೆ. ಅವರಿಂದ ತಪ್ಪಿಸಿಕೊಂಡ ಶೋಭಾ ಆರೇರ್ ಅವರು ನ್ಯಾಯಾಕ್ಕಾಗಿ ಪೊಲೀಸರ ಮೊರೆ ಹೋಗಿದ್ದಾರೆ.