ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಕಚೇರಿಯಲ್ಲಿನ ಒಂದು ಹುದ್ದೆಗೆ ಕೊಂಕಣಿ ಬರುವವರಿಂದ ಅರ್ಜಿ ಆಹ್ವಾನಿಸಲಾಗಿದೆ.
DA-JGUA ಯೋಜನೆ ಅಡಿ Integrated programme management unit (PMC) ಘಟಕ ಸ್ಥಾಪಿಸಲು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಕಚೇರಿ ಮುಂದಾಗಿದ್ದು, ಬುಡಕಟ್ಟು ಜನರ ಜೊತೆ ಬೆರೆಯುವವರಿಗೆ ಇಲ್ಲಿ ಉದ್ಯೋಗವಿದೆ. ಉತ್ತರ ಕನ್ನಡ ಜಿಲ್ಲೆಯ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಕಚೇರಿಯಲ್ಲಿನ ಒಂದು ಹುದ್ದೆಗೆ ಅರ್ಹರ ಹುಡುಕಾಟ ನಡೆದಿದ್ದು, ಸ್ಥಳೀಯ ಬುಡಕಟ್ಟು ಭಾಷೆ ಬರುವವರನ್ನು ಈ ಹುದ್ದೆಗೆ ನೇಮಕ ಮಾಡಲಾಗುತ್ತದೆ.
Masters Degree In Social Work, Livelihoods and Rural Development or B Sc. In Agriculture and Forestryರಲ್ಲಿ 2ರಿಂದ 5 ವರ್ಷದ ಅನುಭವಹೊಂದಿರಬೇಕು. ಕನ್ನಡ, ಇಂಗ್ಲೀಷ್, ಹಿಂದಿ ಜೊತೆ ಸ್ಥಳೀಯ ಬುಡಕಟ್ಟು ಭಾಷೆ ಕೊಂಕಣಿ ಭಾಷೆ ಗೊತ್ತಿರಬೇಕು. ಕಂಪ್ಯೂಟರ್ ಜ್ಞಾನ ಹಾಗೂ
ಕನ್ನಡ ಮತ್ತು ಇಂಗ್ಲೀಷ್ ಟೈಪಿಂಗ್ ಬಗ್ಗೆ ಅರಿವಿರಬೇಕು. ಜಿಲ್ಲೆಯ ಬಡಕಟ್ಟು ಗ್ರಾಮಗಳಲ್ಲಿ ಕೆಲಸ ಮಾಡುವ ಸಾಮರ್ಥ್ಯಹೊಂದಿರಬೇಕು. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಸಭೆಗಳಿಗೆ ಭಾಗವಹಿಸಿ ಮಾಹಿತಿ ನೀಡಲು ಕ್ಷಮತೆಯನ್ನು ಹೊಂದಿರಬೇಕು ಎಂಬ ನಿಯಮಗಳಿವೆ.
ಈ ಹುದ್ದೆಗೆ ಅರ್ಜಿ ಸಲ್ಲಿಸಲು ಜುಲೈ 12 ಕೊನೆ ದಿನ. ಈ ಹುದ್ದೆಯ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ಇಲ್ಲಿ ಫೋನ್ ಮಾಡಿ: 08382-226575.