ಗೋಕರ್ಣದಲ್ಲಿ ಟ್ಯಾಟು ಹಾಕುವ ಅಂಗಡಿಯಲ್ಲಿ ಕೆಲಸ ಮಾಡುವ ಮಹೇಶ ಲಮಾಣಿ ಗೋಗರ್ಭ ಗುಹೆಯ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದು, ಮಹೇಶ ಲಮಾಣಿ ಅವರನ್ನು ಪೊಲೀಸರು ಹಿಡಿದಿದ್ದಾರೆ. ಮಹೇಶ ಲಮಾಣಿ ಬಳಿಯಿದ್ದ ಗಾಂಜಾ, ಹಣ ಹಾಗೂ ಅವರ ಬೈಕನ್ನು ಜಪ್ತು ಮಾಡಿದ್ದಾರೆ.
ಹಾವೇರಿಯ ಸವಣೂರು ಕಲಿವಾಳದ ಮಹೇಶ ಶೇಖಪ್ಪ ಲಮಾಣಿ ಅವರು ಗೋಕರ್ಣ ಬಳಿಯ ತಾರಿಮಕ್ಕಿಯಲ್ಲಿ ವಾಸವಾಗಿದ್ದಾರೆ. 19 ವರ್ಷದ ಅವರು ಇಲ್ಲಿ ಟ್ಯಾಟೋ ಹಾಕುವ ಅಂಗಡಿಯಲ್ಲಿ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಆ ದುಡಿಮೆಯ ಜೊತೆ ಇನ್ನಷ್ಟು ಹಣ ಸಂಪಾದಿಸುವುದಕ್ಕಾಗಿ ಅವರು ಅಡ್ಡದಾರಿಹಿಡಿದಿದ್ದು, ಈ ವಿಷಯ ಪೊಲೀಸ್ ಅಧೀಕ್ಷಕ ದೀಪನ್ ಎಂ ಎನ್ ಅವರಿಗೆ ಗೊತ್ತಾಗಿದೆ. ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಂ ಕೃಷ್ಣಮೂರ್ತಿ, ಡಿವೈಎಸ್ಪಿ ಗಿರೀಶ್ ಬಿ ಅವರು ಈ ಬಗ್ಗೆ ಪಿಐ ಶ್ರೀಧರ ಅವರಿಗೆ ಫೋನ್ ಮಾಡಿದ್ದಾರೆ.
ಪಿಸೈ ಅನೀಲ ಬಿ ಎಂ ಅವರು ತಮ್ಮ ತಂಡದೊoದಿಗೆ ಗೋಗರ್ಭ ಗುಹೆ ಬಳಿ ಹೋಗಿದ್ದು, ಅಲ್ಲಿ ಅಲೆದಾಡುತ್ತಿದ್ದ ಮಹೇಶ ಲಮಾಣಿ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಆಗ, ಮಹೇಶ ಲಮಾಣಿ ಅವರ ಬಳಿ 29 ಗ್ರಾಂ ಗಾಂಜಾ, 2250ರೂ ಹಣ ಸಿಕ್ಕಿದೆ. ಅಲ್ಲಿದ್ದ ಬೈಕನ್ನು ಪೊಲೀಸರು ಜಪ್ತು ಮಾಡಿ ಮಹೇಶ ಲಮಾಣಿ ಅವರನ್ನು ಬಂಧಿಸಿದ್ದಾರೆ.