ಪ್ರತಿ ವರ್ಷ ಮಳೆಗಾಲದಲ್ಲಿ ಅರಣ್ಯ ಇಲಾಖೆ ಗಿಡ ನೆಡುವ ಕಾರ್ಯಕ್ರಮ ನಡೆಸುತ್ತಿದ್ದು, ಮೂರು ವರ್ಷದ ಅವಧಿಯಲ್ಲಿ ನೆಟ್ಟ ಗಿಡಗಳೆಷ್ಟು? ಎಂದು 30 ದಿನದಲ್ಲಿ ಮಾಹಿತಿ ಒದಗಿಸುವಂತೆ ನ್ಯಾಯವಾದಿ ರವೀಂದ್ರ ನಾಯ್ಕ ಆಗ್ರಹಿಸಿದ್ದಾರೆ. ಸಾರ್ವಜನಿಕ ಹಿತಾಸಕ್ತಿ ಹಾಗೂ ಕಾನೂನು ಅಡಿಯಲ್ಲಿ ಸಾರ್ವತ್ರಿಕವಾಗಿ ಈ ವಿಷಯ ಪ್ರಕಟಿಸಬೇಕು ಎಂದು ಅವರು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಮೂಲಕ ಒತ್ತಾಯಿಸಿದ್ದಾರೆ.
ಈ ಕುರಿತು ಕೆನರಾ ಸರ್ಕಲ್ ನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಅವರು ಪತ್ರ ಬರೆದಿದ್ದಾರೆ. ನಡುತೋಪು ಕಾಮಗಾರಿಗೆ ಸಂಬAಧಪಟ್ಟAತೆ ಸಾರ್ವಜನಿಕವಾಗಿ ಸಾಕಷ್ಟು ಟೀಕೆಗಳು ಬರುವ ಬಗ್ಗೆ ಅವರು ಉಲ್ಲೇಖಿಸಿದ್ದು, ಮಾಹಿತಿ ಹಕ್ಕು ಕಾಯ್ದೆಯ ಅಡಿಯಲ್ಲಿಯೂ ಅವರು ಅರ್ಜಿ ಹಾಕಿದ್ದಾರೆ. ಐದು ವರ್ಷದಲ್ಲಿ ಜಿಲ್ಲೆಯಲ್ಲಿ ನಡುತೋಪು ವಿವಿಧ ಯೋಜನೆಯಲ್ಲಿ, ಜಿಲ್ಲೆಯಲ್ಲಿ ಪ್ರತಿವರ್ಷ ನೆಟ್ಟಿರುವ ಗಿಡಗಳ ಸಂಖ್ಯೆ, ನೆಟ್ಟಿರುವ ಒಟ್ಟು ಪ್ರದೇಶ ಹಾಗೂ ತಗಲಿರುವ ಸಂಪೂರ್ಣ ವೆಚ್ಚವನ್ನು ಪ್ರಕಟಿಸುವಂತೆ ಅವರು ಕೋರಿದ್ದಾರೆ. ನಡುತೋಪು ಗಿಡ ನೆಡುವ ಕ್ಷೇತ್ರದಲ್ಲಿ ಸೂಚನ ಫಲಕದಲ್ಲಿ ಗುತ್ತಿಗೆದಾರನ ಹೆಸರು ಮತ್ತು ಕಾಮಗಾರಿ ಮೊತ್ತ ಪ್ರಕಟಿಸದೇ ಇರುವ ಕಾರಣವನ್ನು ಪ್ರಚುರಪಡಿಸುವ ಕುರಿತು ಪ್ರಶ್ನಿಸಿದ್ದಾರೆ.
`ಇತ್ತೀಚಿಗೆ ಚಾಲ್ತಿಯಲ್ಲಿರುವ ದೆಹಲಿ ಕೇಂದ್ರ ವನ್ಯ ಜೀವಿ ನಿರ್ವಹಣಾ ಯೋಜನೆಯ ದೃಡೀಕರಣ ವರದಿ ಹಾಗೂ ಅಭಿಯಾರಣ್ಯದಲ್ಲಿ ದೆಹಲಿಯ ಕೇಂದ್ರ ವನ್ಯ ಜೀವಿ ನಿರ್ವಹಣಾ ಯೋಜನೆಯಿಂದ ಮತ್ತು ಕೇಂದ್ರ ಸರ್ಕಾರದ ಪೂರ್ವಾನುಮತಿಯಿಂದ ನಡುತೋಪು ಗಿಡ ನೆಡುವ ತಂತಿ ಬೇಲಿ, ಇಂಗು ಗುಂಡಿ ಹಾಗೂ ಇನ್ನಿತರ ಕಾಮಗಾರಿಗೆ ಅನುಮತಿ ಪಡೆದ ದಾಖಲೆಯನ್ನ ಸಾರ್ವತ್ರಿಕವಾಗಿ ಪ್ರಕಟಿಸುವಂತೆ ಅರಣ್ಯ ಇಲಾಖೆಗೆ ಕೇಳಲಾಗಿದೆ’ ಎಂದು ಅವರು ತಿಳಿಸಿದ್ದಾರೆ. ಜೊತೆಗೆ ಕಾಲಕಾಲಾಕ್ಕೆ `ಸ್ಥಳ ಅಧ್ಯಯಿಸಿ’ ಪ್ರಕಟಗೊಳ್ಳುವ ನೆಟ್ಟಿದ ಗಿಡಗಳಲ್ಲಿ ಬದುಕಿದ ಗಿಡಗಳ ಜೀವಂತಿಕೆ ಪರಿಶೀಲಿಸಿ, ಇತ್ತೀಚಿನ ಮೂರು ಪರಿಶೀಲನ ವರದಿ ಸಾರ್ವಜನಿಕವಾಗಿ ಪ್ರಕಟಿಸಬೇಕು. ಪ್ರಸಕ್ತ ವರ್ಷದ ನೆಡುತೋಪು ಗಿಡನೆಡುವ ಯೋಜನೆಯ ಮಾಹಿತಿಯನ್ನು ವಲಯ ಅರಣ್ಯ ಕಛೇರಿ ಮತ್ತು ಸ್ಥಳೀಯ ಗ್ರಾಮ ಪಂಚಾಯತ್ ಸೂಚನ ಫಲಕದಲ್ಲಿ ಸಾರ್ವತ್ರಿಕವಾಗಿ ಪ್ರತಿವರ್ಷ ಪ್ರಕಟಿಸಬೇಕು’ ಎಂದು ಆಗ್ರಹಿಸಿದ್ದಾರೆ