ಕರಾವಳಿಯಲ್ಲಿನ ಗಾಳಿ-ಮಳೆಗೆ ಸಮುದ್ರದ ಡಾಲ್ಪಿನ್ ಒಂದು ಬೆದರಿದ್ದು, ಸಾವನಪ್ಪಿದ ಡಾಲ್ಪಿನ್ ದೇಹ ಅಂಕೋಲಾದ ಬೆಳಂಬಾರ ದಡಕ್ಕೆ ಬಂದು ಬಿದ್ದಿದೆ. ಅರಣ್ಯಾಧಿಕಾರಿಗಳು ಡಾಲ್ಪನ್ ಶವ ಗಮನಿಸಿ, ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ಸಾಮಾನ್ಯವಾಗಿ ಕಪ್ಪು ಬಣ್ಣದಲ್ಲಿರುವ ಡಾಲ್ಪಿನ್ ಸಾವನಪ್ಪಿದ ನಂತರ ಬಿಳಿ ಬಣ್ಣಕ್ಕೆ ತಿರುಗಿದೆ. ಸಾವನಪ್ಪಿ ಕೆಲ ದಿನ ಕಳೆದಿರುವ ಬಗ್ಗೆಯೂ ಅನುಮಾನಗಳಿವೆ. ಸುಮಾರು 8 ಅಡಿ ಉದ್ದವಿರುವ ಡಾಲ್ಪಿನ್ ನೋಡಿದ ಜನ ಅರಣ್ಯ ಅಧಿಕಾರಿಗಳಿಗೆ ಫೋನ್ ಮಾಡಿದ್ದಾರೆ. ಸಾಗರ ವನ್ಯಜೀವಿ ವಿಭಾಗ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದಾರೆ. `ಓಶಿಯನ್ ಹಂಪ್‌ಬ್ಯಾಕ್’ ಎಂಬ ಪ್ರಬೇದಕ್ಕೆ ಸೇರಿದ ಡಾಲ್ಪಿನ್ ಇದಾಗಿದ್ದು, ಅದರ ಸಾವಿನ ನೈಜ ಕಾರಣದ ಹುಡುಕಾಟ ನಡೆದಿದೆ.
ಪ್ರಕ್ಷುಬ್ಧ ವಾತಾವರಣ, ಬಿರುಗಾಳಿ, ಕಡಲ ಅಲೆಗಳ ಅಬ್ಬರಕ್ಕೆ ಡಾಲ್ಪಿನ್ ಸಾವನಪ್ಪಿರುವ ಶಂಕೆ ಹೆಚ್ಚಾಗಿದೆ. ಎರಡು ದಿನಗಳ ಹಿಂದೆ ಕರಾವಳಿ ಭಾಗದಲ್ಲಿ ಸುರಿದ ಭಾರೀ ಮಳೆಯ ವೇಳೆ ಅಲೆಗಳು ಜೋರಾಗಿದ್ದು, ಅದರ ಅಬ್ಬರಕ್ಕೆ ಡಾಲ್ಪಿನ್ ಕಡಲಿನ ಕಲ್ಬಂಡೆಗೆ ಸಿಲುಕಿ ಸಆವನಪ್ಪಿರುವ ಶಂಕೆಯಿದೆ. ಡಾಲ್ಫಿನ್‌ಗಳು ಸಮುದ್ರ ಪರಿಸರ ವ್ಯವಸ್ಥೆಯ ಪ್ರಮುಖ ಜೀವಿಗಳಾಗಿದ್ದು, ಅವುಗಳ ಸಾವಿನ ಕಾರಣ ಪತ್ತೆಹಚ್ಚುವುದು ಸಮುದ್ರ ಪರಿಸರದ ಆರೋಗ್ಯದ ದೃಷ್ಟಿಯಿಂದಲೂ ಮಹತ್ವದ್ದಾಗಿದೆ