ಉತ್ತರ ಕನ್ನಡಕ್ಕೆ ಭೇಟಿ ನೀಡಿದ್ದ ಆರೋಗ್ಯ ಸಚಿವ ಯು ಟಿ ಖಾದರ್ ಅವರ ಬೆಂಗಾವಲು ಜೀಪಿಗೆ ಸ್ಕೂಟಿ ಗುದ್ದಿದ್ದು, ಸ್ಕೂಟಿ ಚಾಲಕ ಮೊಬೈಲ್ ಬಳಸಿದ್ದೇ ಅಪಘಾತಕ್ಕೆ ಕಾರಣ ಎಂದು ಗೊತ್ತಾಗಿದೆ.
ಜುಲೈ 4ರಂದು ಆರೋಗ್ಯ ಸಚಿವ ಯು ಟಿ ಖಾದರ್ ಅವರು ಉತ್ತರ ಕನ್ನಡಕ್ಕೆ ಬಂದಿದ್ದರು. ಪ್ರಕೃತಿ ವಿಕೋಪದ ಉಸ್ತುವಾರಿಯೂ ಆಗಿರುವ ಅವರು ಕಾರವಾರದಲ್ಲಿ ಸಭೆ ನಡೆಸಿದ್ದರು. ಅಲ್ಲಿಂದ ಮರಳುವಾಗ ಅಂಕೋಲಾದ ವರದರಾಜ ಹೊಟೇಲ್ ಬಳಿ ಸಚಿವರ ಭದ್ರತೆಗೆ ನಿಯೋಜನೆಯಾಗಿದ್ದ ಪೊಲೀಸ್ ಜೀಪಿಗೆ ಸ್ಕೂಟಿ ಗುದ್ದಿತ್ತು. ಈ ಅಪಘಾತದಲ್ಲಿ ದೊಡ್ಡ ಅಲಗೇರಿಯ ಸಂದೀಪ್ ನಾಯಕ ಅವರು ಗಾಯಗೊಂಡಿದ್ದರು. ಯು ಟಿ ಖಾದರ್ ಅವರೇ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದ್ದರು.
ಪೊಲೀಸ್ ಜೀಪಿನ ಚಾಲಕ ಸಹದೇವ ಚೆನ್ನಮ್ಮನವರ್ ಅವರ ಹೇಳಿಕೆ ಆಧಾರದಲ್ಲಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸಿದರು. ಈ ವೇಳೆ ಬಾಳೆಗುಳಿ ಕ್ರಾಸಿನಿಂದ ಸಂದೀಪ ತಿಮ್ಮಪ್ಪ ನಾಯಕ ಅವರು ಮೊಬೈಲಿನಲ್ಲಿ ಮಾತನಾಡುತ್ತ ಸ್ಕೂಟಿ ಓಡಿಸಿಕೊಂಡು ಬಂದಿದ್ದರು. ಸ್ಕೂಟಿ ಓಡಿಸುವಾಗ ಸಂದೀಪ ನಾಯಕ ಅವರು ಹೆಲ್ಮೆಟ್ ಸಹ ಧರಿಸಿರಲಿಲ್ಲ. ರಸ್ತೆ ನಡುವಿನ ಡಿವೆಡೈರ್ ದಾಟಿ ಮುನ್ನುಗ್ಗಿದ ಅವರ ಸ್ಕೂಟಿಗೆ ಸಚಿವರ ಭದ್ರತೆಗಿದ್ದ ಜೀಪು ಗುದ್ದಿತು. ಗಾಯಗೊಂಡ ಸಂದೀಪ ನಾಯಕ ಅವರು ಆಸ್ಪತ್ರೆ ಸೇರಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
`ವಾಹನ ಚಾಲನೆ ಮಾಡುವಾಗ ಮೊಬೈಲ್ ಬಳಸಬೇಡಿ’