ಲೈಕು-ಕಮೆಂಟಿನ ಆಸೆಗಾಗಿ 12 ಜನ ತೂಫಾನ್ ಕ್ರೂಸರ್ ಮೇಲೆ ಅಪಾಯಕಾರಿ ರೀತಿ ಕುಳಿತು ರೀಲ್ಸ್ ಮಾಡಿದ್ದಾರೆ. ನಂತರ ಪ್ರದೀಪ ಪೂಜಾರಿ ಎಂಬ ಇನಸ್ಟಾಗ್ರಾಂ ಖಾತೆಯಲ್ಲಿ ಆ ವಿಡಿಯೋ ಹರಿಬಿಟ್ಟಿದ್ದಾರೆ.
ಜೊಯಿಡಾದ ಪ್ರಧಾನಿ ಬಳಿಯಿರುವ ಇನ್ವಿಟಿ ಹೋಂ ಸ್ಟೇ ಬಳಿ ಈ ರೀಲ್ಸ್ ನಡೆಸಿರುವುದು ಗೊತ್ತಾಗಿದೆ. ಕೆಎ 24 ನೋಂದಣಿಯ ತೂಫಾನ್ ಕ್ರೂಸರ್ ವಾಹನದ ಮೇಲೆ ಪಡ್ಡೆ ಹುಡುಗರು ನೇತಾಡುತ್ತ ರೀಲ್ಸ್ ಮಾಡಿದ್ದಾರೆ. ದಾಂಡೇಲಿಯ ಪೊಲೀಸ್ ಸಿಬ್ಬಂದಿ
ಸುಭಾಸ್ ಸಾಲಮಂಟಪ ಅವರು ಈ ವಿಡಿಯೋ ನೋಡಿದ್ದು, ಅದಾದ ನಂತರ ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ. ನಿಯಮಗಳನ್ನು ಉಲ್ಲಂಘಿಸಿ ಅಪಾಯಕಾರಿ ರೀಲ್ಸ್ ಮಾಡಿದಲ್ಲದೇ ಬೇರೆಯವರು ಇಂಥ ರೀಲ್ಸ್ ಮಾಡಲು ಪ್ರೇರೇಪಿಸಿದ ಹಿನ್ನಲೆ ಪೊಲೀಸರು ಆ ತೂಫಾನ್ ಕ್ರೂಸರ್ ಸಂಖ್ಯೆ ಉಲ್ಲೇಖಿಸಿ ಪ್ರಕರಣ ದಾಖಲಿಸಿದ್ದಾರೆ.
ತೂಫಾನ್ ಕ್ರೂಸರಿನ ಬಾಯನೇಟ್ ಹಾಗೂ ಮೇಲ್ಬಾವಣಿಯಲ್ಲಿ ಕುಳಿತು ಸಂಚರಿಸಿದ ವಿಡಿಯೋ ವೈರಲ್ ಆಗಿದ್ದು, ಪೊಲೀಸರು ಇದಕ್ಕೆ ಅವಕಾಶ ನೀಡಿದ ಎಲ್ಲರ ವಿಚಾರಣೆಗೆ ಮುಂದಾಗಿದ್ದಾರೆ. ಆ ತೂಫಾನ್ ಕ್ರೂಸರಿನ ಚಾಲಕನನ್ನು ಹುಡುಕಿದ್ದಾರೆ. ಲೈಕು-ವೀವ್ಸ್-ಕಮೆಂಟ್ ಆಸೆಗಾಗಿ ಜೀವದ ಜೊತೆ ಚಲ್ಲಾಟವಾಡುವವರನ್ನು ಕಾನೂನಿನ ಅಡಿ ಶಿಕ್ಷಿಸುವುದಾಗಿ ಪೊಲೀಸರು ಎಚ್ಚರಿಕೆಯನ್ನು ನೀಡಿದ್ದಾರೆ.
`ಹುಚ್ಚು ಸಾಹಸಗಳನ್ನು ಮಾಡಬೇಡಿ’