ಧಾರಾಕಾರವಾಗಿ ಸುರಿದ ಮಳೆಗೆ ಶಿರಸಿ ಗಾಂಧೀನಗರದ ರಾಮಚಂದ್ರ ನಾಯ್ಕ ಅವರ ಮನೆ ಬಳಿ ಕುಸಿತ ಉಂಟಾಗಿದೆ. ಮನೆ ಕಪ್ಪದ ಕಪೌಂಡ್, ಮನೆಯ ಗೋಡೆ ಸಹ ಕುಸಿದು ಬಿದ್ದಿದೆ. ಮಳೆ ಜೋರಾದರೆ ಇಲ್ಲಿ ಇನ್ನಷ್ಟು ಕುಸಿಯುವ ಆತಂಕ ಎದುರಾಗಿದೆ.
ರಾಮಚಂದ್ರ ನಾಯ್ಕ ಅವರು ಜ್ಯೋಮೆಟೋದಲ್ಲಿ ಪುಡ್ ಡಿಲೆವರಿ ಬಾಯ್ ಆಗಿ ಕೆಲಸ ಮಾಡಿಕೊಂಡಿದ್ದಾರೆ. ಕುಸಿತದ ಪರಿಣಾಮ ಅವರ ಬದುಕು ಇನ್ನಷ್ಟು ಸಂಕಷ್ಟ ಅನುಭವಿಸಿದ್ದು, ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಅನಂತಮೂರ್ತಿ ಹೆಗಡೆ ಅವರು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಆಲಿಸಿದ್ದಾರೆ. `ರಾತ್ರಿ ಏಕಾಏಕಿ ಜೋರು ಗಾಳಿ-ಮಳೆ ಶುರುವಾಗಿದ್ದು ಮನೆಯ ಕಂಪೌAಡ್ ಕುಸಿದು ಬಿದ್ದಿತು. ಮನೆಯ ಹಂಚು, ಗೋಡೆ, ನೀರಿನ ಟ್ಯಾಂಕ್ ಹಾನಿಯಾಯಿತು’ ಎಂದು ರಾಮಚಂದ್ರ ನಾಯ್ಕ ಅವರು ವಿವರಿಸಿದರು.
`ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಹಾನಿ ಪರಿಶೀಲನೆ ಮಾಡಬೇಕು. ಸಂತ್ರಸ್ತರಿಗೆ ಸೂಕ್ತ ಪರಿಹಾರ ಕೊಡಬೇಕು’ ಎಂದು ಅನಂತಮೂರ್ತಿ ಹೆಗಡೆ ಅವರು ಆಗ್ರಹಿಸಿದರು. ವೈಯಕ್ತಿಕವಾಗಿಯೂ ನೆರವು ನೀಡಿದರು. ಬಿಜೆಪಿ ನಗರ ಮಂಡಲ ಅಧ್ಯಕ್ಷ ಆನಂದ್ ಸಾಲೇರ್ ಅವರು ನಗರಸಭೆ ಅಧಿಕಾರಿಗಳಿಗೆ ಫೋನ್ ಮಾಡಿ ಪರಿಸ್ಥಿತಿಯ ಬಗ್ಗೆ ವರದಿ ಒಪ್ಪಿಸಿದರು. ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ನಾಗರಾಜ ನಾಯ್ಕ ಹಾಗೂ ನಗರಸಭೆ ಮಾಜಿ ಉಪಾಧ್ಯಕ್ಷ ರಮಾಕಾಂತ್ ಭಟ್ ಉಪಸ್ಥಿತರಿದ್ದರು.