ಕಾರವಾರ ಲೈಟ್ ಹೌಸಿನ ಬಳಿ ಮೀನುಗಾರಿಕೆ ಮಾಡುತ್ತಿದ್ದ ಕುಮಟಾದ ವೆಂಕಟೇಶ ಹರಿಕಂತ್ರ ಅವರು ಸಮುದ್ರಕ್ಕೆ ಬಿದ್ದು ಸಾವನಪ್ಪಿದ್ದಾರೆ. 32ನೇ ವಯಸ್ಸಿನಲ್ಲಿಯೇ ವೆಂಕಟೇಶ ಹರಿಕಂತ್ರ ಅವರನ್ನು ಕಳೆದುಕೊಂಡ ಕುಟುಂಬದವರು ಕಣ್ಣೀರು ಸುರಿಸಿದ್ದಾರೆ.
Advertisement. Scroll to continue reading.
ಕುಮಟಾದ ಸಸಿಹಿತ್ಲುವಿನಲ್ಲಿ ವೆಂಕಟೇಶ ವೆಂಕಪ್ಪ ಹರಿಕಂತ್ರ ಅವರು ವಾಸವಾಗಿದ್ದರು. ನಿತ್ಯದ ದುಡಿಮೆಗಾಗಿ ಅವರು ಮೀನುಗಾರಿಕೆಯನ್ನು ನಂಬಿದ್ದರು. ಅಗಸ್ಟ 29ರಂದು ಅವರು ಮೀನುಗಾರಿಕೆಗಾಗಿ ಅರಬ್ಬಿ ಸಮುದ್ರಕ್ಕೆ ಹೋಗಿದ್ದರು. ಲೈಟ್ ಹೌಸಿನಿಂದ ಅನತಿ ದೂರದಲ್ಲಿ ಮೀನುಗಾರಿಕೆ ಮಾಡುವಾಗ ಆಯತಪ್ಪಿ ಸಮುದ್ರಕ್ಕೆ ಬಿದ್ದರು. ಅಲ್ಲಿಂದ ಮೇಲೆ ಬರಲು ಸಾಧ್ಯವಾಗದೇ ಅವರು ಸಾವನಪ್ಪಿದರು.
Advertisement. Scroll to continue reading.
ವೆಂಕಟೇಶ ಹರಿಕಂತ್ರ ಅವರು ಮೀನಿಗೆ ಬೀಸಿದ್ದ ಬಲೆಗಳನ್ನು ಎಳೆಯುವಾಗ ಕಾಲು ಜಾರಿ ಬಿದ್ದಿದ್ದು, ನಂತರ ಅವರ ಶವವನ್ನು ಕಾರವಾರದ ಬೈತಕೋಲ್ ದಕ್ಕೆಗೆ ತರಲಾಯಿತು. ತಮ್ಮನ ಸಾವಿನ ಬಗ್ಗೆ ಅರಿತ ರತ್ನಾಕರ ವೆಂಕಪ್ಪ ಹರಿಕಂತ್ರ ಅವರು ಪೊಲೀಸ್ ಪ್ರಕರಣ ದಾಖಲಿಸಿ, ಶವಪಡೆದರು.