ಕಾರವಾರದ ಅಂಜುದೀವ ದ್ವೀಪದ ಬಳಿ ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ದೋಣಿ ಮುಳುಗಡೆಯಾಗಿದೆ. ಆ ದೋಣಿಯಲ್ಲಿದ್ದ 24 ಜನ ಬೇರೆ ದೋಣಿಗೆ ಹಾರಿ ಜೀವ ಉಳಿಸಿಕೊಂಡಿದ್ದಾರೆ.
Advertisement. Scroll to continue reading.
ಬೆಳ್ಳoಬಾರ ಮೂಲದ ನೀಲಕಂಠ ಖಾರ್ವಿ ಅವರಿಗೆ ಸೇರಿದ ‘ಶ್ರೀ ಮಾತಾ’ ಮೀನುಗಾರಿಕಾ ಬೋಟ್ ಸಮುದ್ರದಲ್ಲಿ ಅವಘಡಕ್ಕೀಡಾಗಿದೆ. ದೋಣಿಯಲ್ಲಿ ನೀರು ತುಂಬುತ್ತಿರುವುದನ್ನು ನೋಡಿದ ಮೀನುಗಾರರು ತಕ್ಷಣ ಸಹಾಯ ಯಾಚಿಸಿದ್ದು, ಸಮೀಪವಿದ್ದ ಐದಾರು ದೋಣಿಗಳು ಮುಳುಗುವ ದೋಣಿಯನ್ನು ಸುತ್ತುವರೆದಿದೆ. ಆಗ, ಮುಳುಗುವ ದೋಣಿಯಲ್ಲಿದ್ದ ಜನ ಇನ್ನಿತರ ದೋಣಿಗೆ ಹಾರಿ ಪ್ರಾಣ ಉಳಿಸಿಕೊಂಡಿದ್ದಾರೆ.
Advertisement. Scroll to continue reading.
ಮುಳುಗಡೆಯಾಗುತ್ತಿದ್ದ ಬೋಟ್‌ನ್ನು ಉಳಿಸಿಕೊಳ್ಳಲು ಇತರೆ ಬೋಟ್‌ಗಳಿಗೆ ಹಗ್ಗ ಕಟ್ಟಿ ರಕ್ಷಣಾ ಕಾರ್ಯಾಚರಣೆ ನಡೆದಿದೆ. ಅದಾಗಿಯೂ, ಮೀನುಗಾರಿಕಾ ಪರಿಕ್ಕರಗಳು ನೀರು ಪಾಲಾಗಿ 80 ಲಕ್ಷ ರೂಪಾಯಿಗೂ ಅಧಿಕ ಹಾನಿ ನಡೆದಿದೆ.