ಶಿರಸಿಯ ವಿನಾಯಕ ಭಟ್ಟ ಅಡ್ಲೇಮನೆ ಹಾಗೂ ರಾಮಚಂದ್ರ ಹೆಗಡೆ ಟೊಣ್ಣೆಮನೆ ಸೇರಿ 10 ಕೋಟಿಗೂ ಅಧಿಕ ಹಣ ದೋಚಿದ್ದಾರೆ. ಸೊಸೈಟಿ ಉದ್ಯೋಗದಲ್ಲಿದ್ದ ಅವರು ಅಲ್ಲಿ ಜನವಿರಿಸಿದ್ದ ಹಣವನ್ನು ಲೂಟಿ ಹೊಡೆದಿದ್ದಾರೆ.
Advertisement. Scroll to continue reading.
ಶಿರಸಿಯ ನೆಗ್ಗು ಬಳಿಯ ಗೋಳಿಯಲ್ಲಿ ಹಾರುಗಾರ್ ಗ್ರೂಪ್ ಗ್ರಾಮಗಳ ಸೇವಾ ಸಹಕಾರಿ ಸಂಘ ಕಾರ್ಯ ನಿರ್ವಹಿಸುತ್ತಿದೆ. ಆ ಸೊಸೈಟಿಯಲ್ಲಿ ನೆಗ್ಗುವಿನ ವಿನಾಯಕ ಭಟ್ಟ ಅಡ್ಲೇಮನೆ ಅವರು ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದರು. ಸದ್ಯ ಶಿರಸಿ ಗಾಂಧೀನಗರದಲ್ಲಿರುವ ರಾಮಚಂದ್ರ ಪರಮೇಶ್ವರ ಹೆಗಡೆ ಟೊಣ್ಣೆಮನೆ ಅವರು ಲೆಕ್ಕಾಧಿಕಾರಿಯಾಗಿದ್ದರು. ಅವರಿಬ್ಬರು ಸೇರಿ ದುಡ್ಡು ಹೊಡೆಯುವ ಯೋಜನೆ ರೂಪಿಸಿದ್ದು, ಒಟ್ಟಿಗೆ ಕೂತು ಕೋಟ್ಯಂತರ ರೂ ಹಣ ದುರುಪಯೋಗ ಮಾಡಿದರು. ಈ ಹಣ ಹೊಡೆಯುವುದಕ್ಕಾಗಿ ಅವರಿಬ್ಬರು ಸೇರಿ ಅನೇಕ ಕಾಗದ ಪತ್ರಗಳನ್ನು ಡುಪ್ಲಿಕೇಟ್ ಮಾಡಿ ಸಿಕ್ಕಿಬಿದ್ದರು.
Advertisement. Scroll to continue reading.
ಸದ್ಯ ಹಾರುಗಾರ್ ಗ್ರೂಪ್ ಗ್ರಾಮಗಳ ಸೇವಾ ಸಹಕಾರಿ ಸಂಘಕ್ಕೆ ರಾಮಾ ಮಾಬ್ಲ ಗೌಡ ಅವರು ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದಾರೆ. ವಿನಾಯಕ ಭಟ್ಟ ಹಾಗೂ ರಾಮಚಂದ್ರ ಹೆಗಡೆ ಅವರು ಮಾಡಿದ ಅಪರಾತಪರಗಳನ್ನೆಲ್ಲ ಅವರು ಲೆಕ್ಕ ಮಾಡಿದ್ದಾರೆ. 2021ರ ಏಪ್ರಿಲ್ 4ರಿಂದ 2024ರ ಮಾರ್ಚ 31ರವರೆಗೆ ಅವರಿಬ್ಬರು ಸೇರಿ 10,54,11,662ರೂ ಕೊಳ್ಳೆ ಹೊಡೆದಿರುವುದನ್ನು ಅವರು ಕಂಡು ಹಿಡಿದಿದ್ದಾರೆ. ಸುಳ್ಳು ಠರಾವು, ನಕಲಿ ಕಾಗದಪತ್ರಗಳನ್ನು ಸಿದ್ಧಪಡಿಸಿ ಸಾರ್ವಜನಿಕ ಹಣವನ್ನು ಸ್ವಂತಕ್ಕೆ ಬಳಸಿಕೊಂಡ ಕಾರಣ ಅವರಿಬ್ಬರ ವಿರುದ್ಧವೂ ರಾಮಾ ಗೌಡ ಅವರು ಕಾನೂನು ಹೋರಾಟ ಶುರು ಮಾಡಿದ್ದಾರೆ.
ಆಡಳಿತ ಮಂಡಳಿಗೂ ಮೋಸ ಮಾಡಿದ ವಿನಾಯಕ ಭಟ್ಟ ಅಡ್ಲೇಮನೆ ಹಾಗೂ ರಾಮಚಂದ್ರ ಹೆಗಡೆ ಟೊಣ್ಣೆಮನೆ ಅವರ ಬಗ್ಗೆ ವಿವಿಧ ದಾಖಲೆ ಸಂಗ್ರಹಿಸಿದ ರಾಮಾ ಗೌಡ ಅವರು ಅದನ್ನು ಪೊಲೀಸರಿಗೆ ನೀಡಿದ್ದಾರೆ. ಅವರಿಬ್ಬರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ದೂರು ನೀಡಿದ್ದಾರೆ.