ದೇವರನ್ನೇ ಪ್ರಶ್ನೆ ಮಾಡುವ ಹುಲೆಕಲ್ ನಟರಾಜ್ ಅವರು ಈ ದಿನ ಹೊನ್ನಾವರದ ಬಂಗಾರಮಕ್ಕಿ ಕ್ಷೇತ್ರಕ್ಕೆ ಬಂದಿದ್ದಾರೆ. ಮೂಡನಂಬಿಕೆಗಳ ವಿರುದ್ಧ ನಿರಂತರ ಅರಿವು ಅಭಿಯಾನ ನಡೆಸುತ್ತಿರುವ ಅವರು ಮಾರುತಿ ಗುರೂಜಿ ಅವರ ಜೊತೆ ವೇದಿಕೆ ಹಂಚಿಕೊoಡಿದ್ದಾರೆ. ನಂತರ ಅಲ್ಲಿ ನಡೆದ ಸಭೆಯಲ್ಲಿಯೂ ಮುಖ್ಯ ಭಾಷಣ ಮಾಡಿದ್ದಾರೆ.
Advertisement. Scroll to continue reading.
ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷ ಹುಲಿಕಲ್ ನಟರಾಜ್ ಅವರು ತಮ್ಮ ತಂಡದೊoದಿಗೆ ಬಂಗಾರಮಕ್ಕಿಯ ಪರಿಸರ ವೀಕ್ಷಣೆ ಮಾಡಿದ್ದಾರೆ. ನಂತರ ಪರಿಸರ ಸಂರಕ್ಷಣೆಯ ಅಗತ್ಯವನ್ನು ಪ್ರತಿಪಾದಿಸಿದ ಅವರು ಶ್ರೀಕ್ಷೇತ್ರ ಬಂಗಾರಮಕ್ಕಿಯಲ್ಲಿ ನಡೆಯುತ್ತಿರುವ ಪಶ್ಚಿಮ ಘಟ್ಟ ಸಂರಕ್ಷಣೆಯ ಕಾರ್ಯಕ್ಕೆ ತಮ್ಮ ಬೆಂಬಲವ್ಯಕ್ತಪಡಿಸಿದ್ದಾರೆ. `ಪಶ್ಚಿಮ ಘಟ್ಟ ನಮ್ಮ ಪಾಲಿಗೆ ಕೇವಲ ಒಂದು ಭೌಗೋಳಿಕ ಪ್ರದೇಶವಲ್ಲ. ಇದು ನಮ್ಮ ನೀರು, ಕಾಡು, ಜೀವವೈವಿಧ್ಯ ಮತ್ತು ಬದುಕಿನ ಮೂಲ. ಪ್ರಕೃತಿಯ ಬಗ್ಗೆ ಅರಿವು ಮೂಡಿಸುವ ಇಂತಹ ಸಂವಾದಗಳು ಸಮಾಜದಲ್ಲಿ ಇನ್ನಷ್ಟು ನಡೆಯಬೇಕು. ವಿಶೇಷವಾಗಿ ಯುವಜನರು ಮತ್ತು ವಿದ್ಯಾರ್ಥಿಗಳು ಪ್ರಕೃತಿಯನ್ನು ಅರಿತು, ಅದರ ಸಂರಕ್ಷಣೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು’ ಎಂದು ಅವರು ಹೇಳಿದ್ದಾರೆ.
Advertisement. Scroll to continue reading.
ಬಂಗಾರಮಕ್ಕಿಯಲ್ಲಿ ‘ಪಶ್ಚಿಮ ಘಟ್ಟ – ಪ್ರಕೃತಿಯ ಜೀವಂತ ಪ್ರಯೋಗಶಾಲೆ’ ಎಂಬ ಆಶಯದೊಂದಿಗೆ ಪಶ್ಚಿಮ ಘಟ್ಟದ ಜೀವವೈವಿಧ್ಯ ಮತ್ತು ಪರಿಸರ ವ್ಯವಸ್ಥೆಯ ಕುರಿತು ವಿಶೇಷ ಚಿಂತನ – ಮಂಥನ ಕಾರ್ಯಕ್ರಮ ನಡೆದಿದ್ದು, ಉಭಯಜೀವಿ ಸಂಶೋಧಕರಾದ ಅಮಿತ ಹೆಗಡೆ ಅವರು ಉಭಯಜೀವಿಗಳ ಅದ್ಭುತ ಜಗತ್ತು, ವಿಶೇಷವಾಗಿ ಕಪ್ಪೆಗಳ ಬದುಕು, ಅವುಗಳ ಧ್ವನಿ ಸಂಕೀರ್ಣತೆ, ಸಂತಾನೋತ್ಪತ್ತಿ ಹಾಗೂ ಜೀವನಕ್ರಮಗಳ ಕುರಿತು ಮಾಹಿತಿ ಹಂಚಿಕೊAಡಿದ್ದಾರೆ. ಪಶ್ಚಿಮ ಘಟ್ಟ, ಕರಾವಳಿ, ದ್ವೀಪಸಮೂಹ ಹಾಗೂ ಬಯಲುಸೀಮೆಯ ವಿವಿಧ ಪ್ರದೇಶಗಳಲ್ಲಿ ನಡೆಸಿದ ತಮ್ಮ ಅಧ್ಯಯನದ ಅನುಭವಗಳನ್ನು ಹಂಚಿಕೊAಡ ಅವರು ಪರಿಸರ ವ್ಯವಸ್ಥೆಯ ಸಮತೋಲನದಲ್ಲಿ ಉಭಯಜೀವಿಗಳ ಮಹತ್ವವನ್ನು ವಿವರಿಸಿದ್ದಾರೆ. ಇದೇ ಸಂದರ್ಭದಲ್ಲಿ ‘ಮಣ್ಣು ಬಂಗಾರಕ್ಕಿAತ ಶ್ರೇಷ್ಠ’ ಎಂಬ ಆಶಯದೊಂದಿಗೆ ಪರಿಸರ ಚಿಂತಕ ಹಾಗೂ ಸಂರಕ್ಷಣಾ ಕಾರ್ಯಕರ್ತ ಅಖಿಲೇಶ್ ಚಿಪ್ಪಳಿ ಅವರು ‘ಮಣ್ಣು ಮತ್ತು ಸೂಕ್ಷ್ಮಾಣು ಜೀವಿಗಳು’ ಎಂಬ ವಿಷಯದ ಕುರಿತು ಮಾತನಾಡಿದ್ದಾರೆ.