ಭಾರತೀಯ ನೌಕಾನೆಲೆಯಲ್ಲಿ ಹೊರ ರಾಜ್ಯದ ನೌಕರರೇ ಹೆಚ್ಚಿದ್ದು, ಆ ಬಗ್ಗೆ ಸಾಕಷ್ಟು ಆಕ್ಷೇಪವ್ಯಕ್ತವಾದ ಹಿನ್ನಲೆ ನೌಕಾನೆಲೆಯವರು ಮಹತ್ವದ ಒಪ್ಪಂದವೊoದಕ್ಕೆ ಸಹಿ ಹಾಕಿದ್ದಾರೆ. ಸ್ಥಳೀಯ ಯುವಕರಿಗೆ ತಾಂತ್ರಿಕ ಕೌಶಲ್ಯ ನೀಡಿ ಅವರಿಗೆ ಉದ್ಯೋಗ ಅವಕಾಶ ಕೊಡವ ನಿಟ್ಟಿನಲ್ಲಿ ಕೈಗಾರಿಕಾ ತರಬೇತಿ ಸಂಸ್ಥೆಗಳ ಜೊತೆ ನೌಕಾನೆಲೆಯವರು ಒಪ್ಪಂದ ಮಾಡಿಕೊಂಡಿದ್ದಾರೆ.
Advertisement. Scroll to continue reading.
ಗುರುವಾರ ಈ ಕುರಿತಾದ ಒಪ್ಪಂದಕ್ಕೆ ಅಧಿಕೃತ ಮುದ್ರೆ ಬಿದ್ದಿದೆ. ಕಾರವಾರದ ನೌಕಾ ಡಾಕ್‌ಯಾರ್ಡ್ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾರವಾರದ ಶ್ರೀ ಸೋಮನಾಥ ಐಟಿಐ ಬಿಣಗಾ, ಸರ್ಕಾರಿ ಐಟಿಐ ಬಾಡ್, ಮಲ್ಲಿಕಾರ್ಜುನ ಐಟಿಐ ಸಿದ್ದರ ಹಾಗೂ ಸರ್ಕಾರಿ ಐಟಿಐ ಅಂಕೋಲಾ ಸಂಸ್ಥೆಗಳೊAದಿಗೆ ನೌಕಾನೆಲೆಯವು ಈ ಒಪ್ಪಂದ ಮಾಡಿಕೊಂಡಿದ್ದಾರೆ. ನೌಕಾ ಡಾಕ್‌ಯಾರ್ಡ್ನ ಅಡ್ಮಿರಲ್ ಸೂಪರಿಂಟೆAಡೆAಟ್ ರಿಯರ್ ಅಡ್ಮಿರಲ್ ರವ್ನೀಶ್ ಸೇಠ್, ವಿ.ಎಸ್.ಎಂ. ಹಾಗೂ ಉತ್ತರ ಕನ್ನಡ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಿಲೇಶ್ ಸಸಿ ಸಮಕ್ಷಮದಲ್ಲಿ ಈ ಮಾತುಕಥೆ ನಡೆದಿದೆ. ಕರ್ನಾಟಕ ನೌಕಾ ಪ್ರದೇಶದ (ಕೆಎನ್‌ಎ) ನಾಗರಿಕ ಸೇನಾ ಸಹಕಾರವನ್ನು ಬಲಪಡಿಸುವ ಭಾಗವಾಗಿ ಈ ಉಪಕ್ರಮ ಕೈಗೊಳ್ಳಲಾಗಿದೆ. ಒಪ್ಪಂದದಡಿ ಸ್ಥಳೀಯ ಐಟಿಐ ವಿದ್ಯಾರ್ಥಿಗಳಿಗೆ ನೌಕಾ ಡಾಕ್‌ಯಾರ್ಡ್ನ ಅತ್ಯಾಧುನಿಕ ನಿರ್ವಹಣೆ ಮತ್ತು ಸಹಾಯಕ ವ್ಯವಸ್ಥೆಗಳು, ಆಧುನಿಕ ತಂತ್ರಜ್ಞಾನಗಳು ಹಾಗೂ ಕೈಗಾರಿಕಾ ಕಾರ್ಯವಿಧಾನಗಳ ಕುರಿತು ನೇರ ಪರಿಚಯ ದೊರೆಯಲಿದೆ. ಅಲ್ಲದೆ, ಉದ್ಯೋಗಾಧಾರಿತ ಪ್ರಾಯೋಗಿಕ ತರಬೇತಿ ಮತ್ತು ಕಾರ್ಯಸ್ಥಳದಲ್ಲಿಯೇ ಕಲಿಕೆಯ ಅವಕಾಶಗಳನ್ನು ಒದಗಿಸಲಾಗುತ್ತದೆ.
Advertisement. Scroll to continue reading.
ರಿಯರ್ ಅಡ್ಮಿರಲ್ ರವ್ನೀಶ್ ಸೇಠ್ ಅವರು ಮಾತನಾಡಿ ಕೌಶಲ್ಯಯುತ ಮಾನವ ಸಂಪನ್ಮೂಲ ಬೆಳೆಸುವ ಅಗತ್ಯದ ಬಗ್ಗೆ ತಿಳಿಸಿದ್ದಾರೆ. `ಈ ಎಂಒಯು ಮೂಲಕ ದೊರೆಯುವ ಉನ್ನತ ಮಟ್ಟದ ತರಬೇತಿ ಮತ್ತು ಕಲಿಕಾ ಅವಕಾಶಗಳನ್ನು ಐಟಿಐಗಳು ಸಮರ್ಪಕವಾಗಿ ಬಳಸಿಕೊಳ್ಳಬೇಕು’ ಎಂದವರು ಕರೆ ನೀಡಿದ್ದಾರೆ. `ತರಗತಿಯಲ್ಲಿ ಪಡೆಯುವ ಜ್ಞಾನಕ್ಕೂ ಕೈಗಾರಿಕಾ ಕ್ಷೇತ್ರದಲ್ಲಿ ದೊರೆಯುವ ಪ್ರಾಯೋಗಿಕ ಅನುಭವಕ್ಕೂ ಇರುವ ಅಂತರವನ್ನು ಇಂತಹ ಸಹಯೋಗಗಳು ಕಡಿಮೆ ಮಾಡಲಿವೆ. ಕಾರವಾರದ ಸ್ಥಳೀಯ ಯುವಕರಿಗೆ ನೌಕಾ ಡಾಕ್‌ಯಾರ್ಡ್ನಂತಹ ಅತ್ಯಾಧುನಿಕ ಕಾರ್ಯಸ್ಥಳದಲ್ಲಿ ಕಲಿಕೆಯ ಅವಕಾಶ ದೊರೆಯುವುದು ಕೌಶಲ್ಯಾಭಿವೃದ್ಧಿಗೆ ಮಹತ್ವದ ಹೆಜ್ಜೆಯಾಗಿದೆ’ ಎಂದವರು ಹೇಳಿದ್ದಾರೆ. `ಈ ಸಹಯೋಗವು ಯುವಕರ ಕೌಶಲ್ಯಾಭಿವೃದ್ಧಿ, ಉದ್ಯೋಗ ಸೃಷ್ಟಿ ಹಾಗೂ ಪ್ರದೇಶದ ತಾಂತ್ರಿಕ ಮಾನವ ಸಂಪನ್ಮೂಲದ ಗುಣಮಟ್ಟ ಸುಧಾರಣೆಗೆ ನೆರವಾಗಲಿದೆ. ಸ್ಕಿಲ್ ಇಂಡಿಯಾ ಅಭಿಯಾನ ಹಾಗೂ ನಾಗರಿಕ-ಸೇನಾ ಸಹಕಾರದ ಉದ್ದೇಶಗಳಿಗೆ ಇದು ಮತ್ತಷ್ಟು ಬಲ ನೀಡಲಿದೆ’ ಎಂದು ಅಧಿಕಾರಿಗಳು ವಿಶ್ವಾಸವ್ಯಕ್ತಪಡಿಸಿದ್ದಾರೆ.