ಹುಸುರಿ ರಸ್ತೆಯಲ್ಲಿ ಸ್ಕೂಟರ್ ಓಡಿಸಿಕೊಂಡು ಹೊರಟಿದ್ದ ಸೀಮಾಂವ್ ಫರ್ನಾಂಡಿಸ್ ಅವರಿಗೆ ವಾರದ ಹಿಂದೆ ಮಹಮದ್ ಇಸ್ಮಾಯಲ್ ಅವರ ಕಾರು ಗುದ್ದಿದ್ದು, ಸೀಮಾಂವ್ ಫರ್ನಾಂಡಿಸ್ ಅವರು ಈ ದಿನ ಮಂಗಳೂರಿನ ಕೆ ಎಸ್ ಹೆಗಡೆ ಆಸ್ಪತ್ರೆಯಲ್ಲಿ ಸಾವನಪ್ಪಿದ್ದಾರೆ. ಗಂಭೀರ ಗಾಯಗೊಂಡಿದ್ದ ಅವರಿಗೆ ನಿರಂತರ ಚಿಕಿತ್ಸೆ ನೀಡಿದರೂ ಬದುಕಿಸಿಕೊಳ್ಳಲು ಸಾಧ್ಯವಾಗಿಲ್ಲ.
Advertisement. Scroll to continue reading.
ಶಿರಸಿ ಕಸ್ತೂರಿಬಾ ನಗರದ ಹುಸುರಿ ರಸ್ತೆ ಅಂಚಿನಲ್ಲಿ ಸೀಮಾಂವ್ ಗಸ್ವಾರ್ ಫರ್ನಾಂಡಿಸ್ ಅವರು ವಾಸವಾಗಿದ್ದರು. 69 ವರ್ಷದ ಅವರು ಪೆಂಟಿoಗ್ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಅಗಸ್ಟ 20ರಂದು ರಾತ್ರಿ ಸೀಮಾಂವ್ ಫರ್ನಾಂಡಿಸ್ ಅವರು ಹುಸುರಿ ರಸ್ತೆಯಲ್ಲಿ ಸ್ಕೂಟಿ ಓಡಿಸುತ್ತಿದ್ದರು. ಕಸ್ತೂರಿಬಾ ನಗರದ ಕಡೆ ಹೊರಟ್ಟಿದ್ದ ಅವರಿಗೆ ಸ್ಕೂಟಿಯಲ್ಲಿ ಕಸ್ತೂರಿಬಾ ನಗರದ ಮಹಮದ್ ಇಸ್ಮಾಯಲ್ ಅಬ್ದುಲ್ ಖಾದರ್ ಅವರ ಕಾರು ಡಿಕ್ಕಿ ಹೊಡೆದಿತ್ತು.
Advertisement. Scroll to continue reading.
ಈ ಅಪಘಾತದಲ್ಲಿ ಸ್ಕೂಟಿ ಹಾಗೂ ಕಾರು ಎರಡೂ ಜಖಂ ಆಗಿದ್ದು, ಸೀಮಾಂವ್ ಫರ್ನಾಂಡಿಸ್ ಅವರು ಗಂಭೀರ ಪ್ರಮಾಣದಲ್ಲಿ ಗಾಯಗೊಂಡಿದ್ದರು. ತಲೆಗೆ ನೋವು ಮಾಡಿಕೊಂಡಿದ್ದ ಅವರನ್ನು ಮಂಗಳೂರು ದರಳಕಟ್ಟೆಯ ಕೆ ಎಸ್ ಹೆಗಡೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿನ ವೈದ್ಯರು ಸಾಕಷ್ಟು ಪ್ರಮಾಣದಲ್ಲಿ ಪ್ರಯತ್ನಿಸಿದರೂ ಸೀಮಾಂವ್ ಫರ್ನಾಂಡಿಸ್ ಅವರನ್ನು ಬದುಕಿಸಲು ಆಗಲಿಲ್ಲ. ಅಗಸ್ಟ 26ರಂದು ಅವರು ಕೊನೆಯುಸಿರೆಳೆದರು. ಪತಿ ಸಾವಿನ ಬಗ್ಗೆ ಜಯಂತಿ ಫರ್ನಾಂಡಿಸ್ ಅವರ ಮಾಹಿತಿ ನೀಡಿ, ಪೊಲೀಸ್ ದೂರು ದಾಖಲಿಸಿದರು.
`ಸುರಕ್ಷಿತವಾಗಿ ವಾಹನ ಓಡಿಸಿ’