ಶಿರಸಿಯ ಬಂಕನಾಳ, ದಾಸನಕೊಪ್ಪ, ಅಂಡಗಿ, ಕೊರ್ಲಕಟ್ಟ, ಹಲಗದ್ದ ಮೊದಲಾದ ಕಡೆ ಕಸ್ತೂರಿ ರಂಗನ್ ವರದಿ ಕುರಿತು ಜನ ಜಾಗೃತಿ ಸಭೆ ನಡೆದಿದೆ. ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಈ ಸಭೆ ನಡೆಸಿದೆ.
Advertisement. Scroll to continue reading.
`ನದಿ ತಿರುವು ಯೋಜನೆ, ಪಂಪ್ ಸ್ಟೋರೆಜ್ ಯೋಜನೆ, ಅಣು ಘಟಕಗಳ ವಿಸ್ತರಣೆ ಸೇರಿ ಅನೇಕ ಯೋಜನೆಗಳಗೆ 64 ಸಾವಿರ ಹೆಕ್ಟೇರ್ ಅರಣ್ಯ ಕೊಡುವ ಪ್ರಸ್ತಾಪ ಸರ್ಕಾರದ ಮುಂದಿದೆ. ಹೀಗಿರುವಾಗ ಅದಕ್ಕೆ ಕಸ್ತೂರಿ ರಂಗನ್ ವರದಿಯಲ್ಲಿ ಪ್ರಸ್ತಾಪವಾದ ಸೂಕ್ಷ ಪ್ರದೇಶ ಅಡ್ಡಿಯಾಗುವುದಿಲ್ಲವೇ?’ ಎಂದು ಈ ಸಭೆಯಲ್ಲಿ ನ್ಯಾಯವಾದಿ ರವೀಂದ್ರ ನಾಯ್ಕ ಅವರು ಪ್ರಶ್ನಿಸಿದ್ದಾರೆ. `ಜನರ ಬದುಕಿಗೆ ಸಮಸ್ಯೆಯಾಗುವ ಯಾವ ಯೋಜನೆಯೂ ಜಿಲ್ಲೆಗೆ ಬೇಡ. ಅಂಥ ಯಾವ ಘೋಷಣೆಯೂ ಅಗತ್ಯವಿಲ್ಲ’ ಎಂದವರು ಹೇಳಿದ್ದಾರೆ.
Advertisement. Scroll to continue reading.
ಸೆಪ್ಟೆಂಬರ್ 5ರಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯಿಂದ ಶಿರಸಿಯಲ್ಲಿ ರ‍್ಯಾಲಿ ಆಯೋಜಿಸಲಾಗಿದ್ದು, ಕಸ್ತೂರಿ ರಂಗನ್ ವರದಿಗೆ ಆಕ್ಷೇಪ ಸಲ್ಲಿಸುವ ಬಗ್ಗೆ ಚಿಂತಿಸಲಾಗಿದೆ. ಅದರ ಭಾಗವಾಗಿ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯವರು ಎಲ್ಲಡೆ ಜನ ಜಾಗೃತಿ ನಡೆಸುತ್ತಿದ್ದಾರೆ. `ಜನ ಜೀವನಕ್ಕೆ ಮಾರಕವಾಗುವ ಕರಡು ಕಸ್ತೂರಿ ರಂಗನ್ 7ನೇ ಅಧಿಸೂಚನೆಯಲ್ಲಿ ಪ್ರಸ್ತಾಪವಾಗಿದ್ದು, ಜನ ವಿರೋಧಿ ಮತ್ತು ಪರಿಸರ ನಾಶಕ್ಕೆ ಕಾರಣವಾಗಿರುವ ಬೇಡ್ತಿ, ಶರಾವತಿ ಪಂಪ್ ಸ್ಟೋರೇಜ್ , ಕೈಗಾ ಅಣುಸ್ಥಾವರ, ಕಾಳಿ ಹೈಡ್ರೋ ಪ್ರೋಜೆಕ್ಟಗೆ ಮುಂತಾದ ಯೋಜನೆಗಳಿಗೆ ಅರಣ್ಯ ಪ್ರದೇಶವನ್ನು ಸರ್ಕಾರವು ಬಿಡುಗಡೆ ಮಾಡಿದೆ. ನೈಸರ್ಗಿಕ ಅರಣ್ಯ ಪ್ರದೇಶವನ್ನು ಯೋಜನೆಗಳಿಗೆ ಸರ್ಕಾರವು ಅರಣ್ಯ ಪ್ರದೇಶವನ್ನು ಹಸ್ತಾಂತರಿಸಿ ಈಗ ಜನ ಸಾಮಾನ್ಯರ ಬದಕಿಗೆ ಸಮಸ್ಯೆಯಾಗುವಂತೆ ಅತೀ ಸೂಕ್ಷö ಪ್ರದೇಶವೆಂದು ಗುರುತಿಸುವುದು ವಿಷಾಧಕರ’ ಎಂದು ರವೀಂದ್ರ ನಾಯ್ಕ ಅವರು ಹೇಳಿದ್ದಾರೆ.
`ಮುಂಡಗೋಡ ತಾಲೂಕಿನಲ್ಲಿ 600 ಹೆಕ್ಟರ್ ಭೂಮಿಯನ್ನ ಟೀಬೇಟಿಯನ್ ಕಾಲೋನಿಗೆ ಭೂಮಿಯನ್ನ ಕೊಡುವಾಗ ಇಲ್ಲದ ಅತೀ ಸೂಕ್ಷ ಪ್ರದೇಶದ ನೀತಿ ಕುರಿತು ಚಿಂತಿಸದ ಸರ್ಕಾರ ಜಿಲ್ಲೆಯ 80 ಸಾವಿರ ಅರಣ್ಯವಾಸಿ ಕುಟುಂಬಗಳಿಗೆ 19 ಸಾವಿರ ಹೆಕ್ಟೇರ್ ಭೂಮಿ ನೀಡಲು ಹಿಂದೇಟು ಹಾಕುವುದು ಸಮಂಜಸವಲ್ಲ’ ಎಂದವರು ಆಕ್ಷೇಪಿಸಿದ್ದಾರೆ. ಪ್ರಮುಖರಾದ ನೆಹರು ನಾಯ್ಕ ಬಿಳೂರು, ಎಮ್ ಆರ್ ನಾಯ್ಕ ಕಂಡ್ರಾಜಿ, ಸ್ವಾತಿ ಜೈನ್, ಕಿರಣ ಭಟ್, ಚಂದ್ರು ನಾಯ್ಕ, ಶಿವಣ್ಣ ಮಾಳಂಜಿ, ಟಿಪ್ಪು ಕಾಯಗುಡ್ಡಿ, ಚಂದ್ರಣ ಕಂಡ್ರಾಜಿ, ನಾರಾಯಣಪ್ಪ ಉಮ್ಮುಡಿ, ಶಿವು ಗೌಡ ಕೊಟೇಕೊಪ್ಪ , ರಾಮಣ್ಣ ಕಲಕರಡಿ, ಮಲ್ಲೇಶಿ ಸಂತೋಳ್ಳಿ ಮುಂತಾದವರು ಉಪಸ್ಥಿತರಿದ್ದರು.