ತೆಲಂಗಾರಿನ ವಿಘ್ನೇಶ್ವರ ನಾಯ್ಕ ಅವರು ಒಂದು ಬಾಲ್ ಪೆನ್ ಹಾಗೂ ಕಾಗದದ ಚೂರುಗಳನ್ನಿರಿಸಿಕೊಂಡು ಅಂಕಿ-ಸoಖ್ಯೆ ಆಟವಾಡಿಸುತ್ತಿದ್ದು, ಪಿಸೈ ರಾಜಶೇಖರ ವಂದಲಿ ಅವರು ಆ ಆಟಕ್ಕೆ ತಡೆ ಒಡ್ಡಿದ್ದಾರೆ. ಇಡಗುಂದಿಯ ಶ್ರೇಯಸ್ ಚಿಕನ್ ಎದುರು ನಡೆಯುತ್ತಿದ್ದ ಮಟ್ಕಾ ಆಡಿಸುತ್ತಿದ್ದ ವಿಘ್ನೇಶ್ವರ ನಾಯ್ಕ ಅವರ ಬಳಿಯಿದ್ದ ಬಾಲ್ ಪೆನ್ ಹಾಗೂ ಚೀಟಿಗಳನ್ನು ಪೊಲೀಸರು ಜಪ್ತು ಮಾಡಿದ್ದಾರೆ.
Advertisement. Scroll to continue reading.
ಯಲ್ಲಾಪುರದ ತೆಲಂಗಾರಿನ ಮಾರ್ಕೇಜಡ್ಡಿಯಲ್ಲಿ ವಿಘ್ನೇಶ್ವರ ವೆಂಕಟ್ರಮಣ ನಾಯ್ಕ ಅವರು ವಾಸವಾಗಿದ್ದಾರೆ. 39 ವರ್ಷದ ಅವರು ವ್ಯಾಪಾರಿಯಾಗಿದ್ದು, ಅಂಕಿ-ಸAಖ್ಯೆಗಳ ಆಟ ಆಡಿಸಿ ಅಡ್ಡದಾರಿ ಮೂಲಕ ದುಡ್ಡು ಮಾಡುತ್ತಿದ್ದಾರೆ. ಅದರಂತೆ, ಅಗಸ್ಟ 28ರಂದು ಅವರು ಇಡಗುಂದಿಯ ಶ್ರೇಯಸ್ ಚಿಕನ್ ಎದುರು ನಿಂತು ಅಲ್ಲಿಗೆ ಬರುವ ಜನರಿಗೆ ಮಟ್ಕಾ ಆಟ ಆಡುವಂತೆ ಪ್ರೇರೇಪಿಸಿದ್ದಾರೆ. 1ರೂಪಾಯಿ ಹೂಡಿಕೆ ಮಾಡಿದ ಅದೃಷ್ಠವಂತರಿಗೆ 80ರೂ ನೀಡುವುದಾಗಿ ಹೇಳಿ 270ರೂ ಸಂಗ್ರಹಿಸಿದ್ದಾರೆ.
Advertisement. Scroll to continue reading.
ಮಧ್ಯಾಹ್ನ 1.35ರ ವೇಳೆಗೆ ಈ ವಿಷಯ ಪೊಲೀಸರಿಗೆ ಗೊತ್ತಾಗಿದೆ. ಪಿಸೈ ರಾಜಶೇಖರ ವಂದಲಿ ಅವರು ತಮ್ಮ ತಂಡದೊAದಿಗೆ ದಾಳಿ ನಡೆಸಿ, ಆ ಕಾನೂನುಬಾಹಿರ ಕ್ರೀಡೆ ನಿಲ್ಲಿಸಿದ್ದಾರೆ. ವಿಘ್ನೇಶ್ವರ ನಾಯ್ಕ ಅವರು ಜನರಿಂದ ಸಂಗ್ರಹಿಸಿದ್ದ ಹಣದ ಜೊತೆ ಅವರ ಬಳಿಯಿದ್ದ ಪೆನ್ನು-ಪೆಪರನ್ನು ವಶಕ್ಕೆಪಡೆದಿದ್ದಾರೆ. ಜೂಜಾಟಗಳಿಂದ ಜನರ ಜೀವನ ಹಾಳಾಗುತ್ತಿರುವ ಬಗ್ಗೆ ಅರಿವು ಮೂಡಿಸಿದ ಪೊಲೀಸರು ವಿಘ್ನೇಶ್ವರ ನಾಯ್ಕ ಅವರ ವಿರುದ್ಧ ಕೇಸು ದಾಖಲಿಸಿದ್ದಾರೆ.