ಕುಮಟಾ ಮೂಲದ ಶಿಕ್ಷಕರೊಬ್ಬರು ಸಿದ್ದಾಪುರದಲ್ಲಿ ಸಾವನಪ್ಪಿದ್ದಾರೆ. ಬ್ಯಾಡ್ಮಿಟನ್ ಆಡುವಾಗ ಕುಸಿದು ಬಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿಲ್ಲ.
ಕುಮಟಾದ ಗೋಕರ್ಣ ಬಳಿಯ ಗೋನೆಹಳ್ಳಿ ಕಡಿಮೆಯ ಸುಬ್ರಹ್ಮಣ್ಯ ಪರಮೇಶ್ವರ ಗೌಡ ಅವರು ಸಿದ್ದಾಪುರದಲ್ಲಿ ಶಿಕ್ಷಕರಾಗಿದ್ದರು. 47 ವರ್ಷದ ಅವರು ಹಾರ್ಸಿಕಟ್ಟಾದ ಅಶೋಕ ಪ್ರೌಢಶಾಲೆಯಲ್ಲಿ ಸಹಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು. ಅವರ ಪತ್ನಿ ಸ್ಮಿತಾ ಗೌಡ ಅವರು ಸಹ ಅದೇ ಶಾಲೆಯಲ್ಲಿ ಕಲಿಸುತ್ತಿದ್ದರು. ಈ ದಂಪತಿ ಸಿದ್ದಾಪುರ ಹೊಸೂರಿನ ಮಾಸ್ತಮ್ಮ ನಿಲಯದಲ್ಲಿ ವಾಸವಾಗಿದ್ದರು. ಸುಬ್ರಹ್ಮಣ್ಯ ಗೌಡ ಅವರು ಎಲ್ಲಡೆ `ಸುಬ್ಬಣ್ಣಿ’ ಎಂದೇ ಪರಿಚಿತರಾಗಿದ್ದರು.
ಸುಬ್ರಹ್ಮಣ್ಯ ಗೌಡ ಅವರು ಕ್ರೀಡೆಗಳ ಬಗ್ಗೆ ಅಪಾರ ಆಸಕ್ತಿವಹಿಸಿದ್ದರು. ಕ್ರಿಕೆಟ್, ಬ್ಯಾಡ್ಮಿಟನ್ ಸೇರಿ ವಿವಿಧ ಆಟಗಳಲ್ಲಿ ಪರಿಣಿತಿಪಡೆದಿದ್ದರು. ಪ್ರತಿ ದಿನ ಅವರು ಬ್ಯಾಡ್ಮಿಟನ್ ಆಡುತ್ತಿದ್ದರು. ಇದಕ್ಕಾಗಿ ಅವರು ಎಪಿಎಂಸಿ ಬಳಿಯ ಅಡಿಕೆಮನೆಗೆ ಹೋಗುತ್ತಿದ್ದರು. ಸಂಜೆ ತಾಸುಗಳ ಕಾಲ ಸ್ನೇಹಿತರ ಜೊತೆ ಬ್ಯಾಡ್ಮಿಟನ್ ಆಡಿ ಮನೆಗೆ ಮರಳುತ್ತಿದ್ದರು. ಅದರಂತೆ, ಅಗಸ್ಟ 13ರ ಸಂಜೆಯೂ ಅವರು ಅಲ್ಲಿ ಆಟವಾಡಲು ಹೋಗಿದ್ದರು.
ರಾತ್ರಿ 8.30ರ ವೇಳೆಗೆ ಬಾಡ್ಮಿಟನ್ ಆಡುವಾಗಲೇ ಸುಬ್ರಹ್ಮಣ್ಯ ಗೌಡ ಅವರು ಕುಸಿದು ಬಿದ್ದರು. ತಕ್ಷಣ ಅವರನ್ನು ಸಿದ್ದಾಪುರ ಸರ್ಕಾರಿ ಆಸ್ಪತ್ರೆಗೆ ಕರೆತರಲಾಯಿತು. ಆದರೆ, ಅಷ್ಟರೊಳಗೆ ಅವರು ಸಾವನಪ್ಪಿದ್ದರು.
`ಆರೋಗ್ಯದ ಕಡೆ ಜೋಪಾನ’