ಎರಡುವರೆ ವರ್ಷದ ಅವಧಿಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಜನ ಸೈಬರ್ ವಂಚನೆಯಿoದ 26 ಕೋಟಿ ರೂ ಕಳೆದುಕೊಂಡಿದ್ದಾರೆ. ಆ ಪೈಕಿ ಈವರೆಗೆ 1.85 ಕೋಟಿ ರೂ ಹಣವನ್ನು ಮಾತ್ರ ಪೊಲೀಸರು ವಂಚಕರ ಖಾತೆಯಿಂದ ಜಪ್ತು ಮಾಡಿದ್ದಾರೆ.
ಪೊಲೀಸ್ ಇಲಾಖೆಯು ಸೈಬರ್ ವಂಚನೆ ಕುರಿತು ನಿರಂತರವಾಗಿ ಜಾಗೃತಿ ಮೂಡಿಸುತ್ತಿದೆ. ಅದಾಗಿಯೂ, ಜನ ಮೋಸ ಹೋಗುವುದು ಮಾತ್ರ ತಪ್ಪಿಲ್ಲ. ಎರಡುವರೆ ವರ್ಷದಲ್ಲಿ 237 ಜನ ಸೈಬರ್ ಪೊಲೀಸ್ ಠಾಣೆಗೆ ಹಾಜರಾಗಿ ತಾವು ಮೋಸ ಹೋಗಿರುವ ವಿಧಾನ ವಿವರಿಸಿದ್ದಾರೆ. ಅದರಲ್ಲಿ ಬಹುತೇಕರು ಕಡಿಮೆ ಅವಧಿಯಲ್ಲಿ ಹೆಚ್ಚಿನ ಹಣ ಮಾಡುವ ಆಸೆಗೆ ಬಿದ್ದು, ಇದ್ದ ಹಣವನ್ನು ಕಳೆದುಕೊಂಡವರಾಗಿದ್ದಾರೆ.
ಉದ್ಯೋಗದ ಆಮೀಷ, ಷೇರು ಮಾರುಕಟ್ಟೆಯಲ್ಲಿನ ಹೂಡಿಕೆ, ನಕಲಿ ಯೋಜನೆ ಹಾಗೂ ಪೊಲೀಸರ ಹೆಸರಿನಲ್ಲಿ ಫೋನ್ ಮಾಡಿ ವಂಚಕರು ಹಣ ಲಪಟಾಯಿಸುತ್ತಿದ್ದಾರೆ. ಕೈವೈಸಿ ನವೀಕರಣ, ಬ್ಯಾಂಕ್ ಅಧಿಕಾರಿಗಳೆಂದು ನಂಬಿಸುವಿಕೆ, ಓಟಿಪಿ ಪಡೆಯುವ ಮೂಲಕವೂ ಅನೇಕರ ಹಣ ಎಗರಿಸಿದ್ದಾರೆ. ಸಾರ್ವಜನಿಕರು ಸೈಬರ್ ವಂಚನೆಗೊಳಗಾದ ಬಳಿಕ ತಕ್ಷಣ ದೂರು ದಾಖಲಿಸಿದರೆ ಹಣವನ್ನು ತಡೆಹಿಡಿಯುವ ಅಥವಾ ಮರಳಿ ಪಡೆಯುವ ಸಾಧ್ಯತೆ ಹೆಚ್ಚಿರುತ್ತದೆ. ಆದರೆ ಬಹುತೇಕ ಮಂದಿ ವಂಚನೆ ನಡೆದ ಕೆಲ ದಿನಗಳ ಬಳಿಕ ಪೊಲೀಸರನ್ನು ಸಂಪರ್ಕಿಸುವುದರಿAದ ಹಣದ ಪತ್ತೆ ಮತ್ತು ವಾಪಸ್ ಪಡೆಯುವುದು ದೊಡ್ಡ ಸವಾಲಾಗಿದೆ. ಸಾಕಷ್ಟು ಜನ ಮುಜುಗರದಿಂದಲೂ ದೂರು ನೀಡಲು ವಿಳಂಬ ಮಾಡುತ್ತಿರುವುದರಿಂದ ವಂಚನೆ ಜಾಲ ವಿಸ್ತರವಾಗಿದೆ.
Advertisement. Scroll to continue reading.
ಉತ್ತರ ಕನ್ನಡ ಜಿಲ್ಲೆಯಲ್ಲಿ ಹೆಚ್ಚು ಓದಿದವರೇ ಈ ವಂಚನೆಗೆ ಒಳಗಾಗಿದ್ದಾರೆ. ಅದರಲ್ಲಿಯೂ ನಿವೃತ್ತಿ ಹೊಂದಿದವರ ಬ್ಯಾಂಕ್ ಖಾತೆ ಗುರಿಯಾಗಿರಿಸಿ ವಂಚಕರು ಹಣ ಹೊಡೆದಿದ್ದಾರೆ.
Advertisement. Scroll to continue reading.
Advertisement. Scroll to continue reading.