ಕಾರವಾರ ನೌಕಾನೆಲೆ ಅಧಿಕಾರಿಗಳಿಬ್ಬರು ದಿಢೀರ್ ಆಗಿ ನಾಪತ್ತೆಯಾಗಿದ್ದಾರೆ. ಒಬ್ಬಾರದ ಮೇಲೆ ಒಬ್ಬರಂತೆ ಕಾಣೆಯಾಗುತ್ತಿರುವುದು ಅಲ್ಲಿನವರಲ್ಲಿಯೂ ಆತಂಕ ಮೂಡಿಸಿದೆ.
ಅಗಸ್ಟ 27ರಂದು ನೌಕಾನೆಲೆಯಲ್ಲಿ ಸೇಲರ್ ಆಗಿ ಕೆಲಸ ಮಾಡಿಕೊಂಡಿದ್ದ ಕುರುಬಾ ದಿನೇಶ ಕುಮಾರ ಅವರು ಕಾಣೆಯಾಗಿದ್ದರು. ಆಂಧ್ರಪ್ರದೇಶದ ಅನಂತಪುರ ಬಳಿಯ ಕುಂಟಿಮಡ್ಡಿಯ ಅವರು ಮಧ್ಯಾಹ್ನ 2 ಗಂಟೆಯವರೆಗೂ ಅರ್ಗಾ ನೇವಲ್ ಬೇಸ್ ಒಳಗೆ ಇದ್ದು, ಅದಾದ ನಂತರ ಅವರು ಎಲ್ಲಿ ಹೋದರು? ಎಂಬುದೇ ಗೊತ್ತಾಗಿರಲಿಲ್ಲ. ಸಾಕಷ್ಟು ಶೋಧ ನಡೆಸಿದರೂ ಕುರುಬಾ ದಿನೇಶ ಕುಮಾರ ಅವರ ಸುಳಿವು ಸಿಕ್ಕಿರಲಿಲ್ಲ. ಈ ಹಿನ್ನಲೆ ಅವರ ಪತ್ತೆಗಾಗಿ ಪೊಲೀಸರು ಕಾರ್ಯಾಚರಣೆ ಶುರು ಮಾಡಿದ್ದು, ಈವರೆಗೂ ಅವರ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಇನ್ನೂ 28 ವರ್ಷದ ಕುರುಬಾ ದಿನೇಶ ಕುಮಾರ್ ಅವರು ಹೇಗೆ ನಾಪತ್ತೆ ಆದರು? ಅವರು ಈಗ ಎಲ್ಲಿದ್ದಾರೆ? ಏನು ಮಾಡುತ್ತಿದ್ದಾರೆ? ಎಂಬುದೆಲ್ಲವೂ ಪ್ರಶ್ನೆಯಾಗಿಯೇ ಉಳಿದಿದೆ.
ಈ ನಡುವೆ ಅಗಸ್ಟ 26ರಂದು ಸಹ ನೇವಲ್ ಬೇಸಿನಲ್ಲಿದ್ದ ಮತ್ತೊಬ್ಬರು ಕಾಣೆಯಾದ ಬಗ್ಗೆ ಮಾಹಿತಿ ಬಂದಿದೆ. ಶಿರವಾಡ ನಾರಗೇರಿಯ ಮನೋಜ ರೀಪು ನಾಯ್ಕ ಅವರು ನೇವಲ್‌ಬೇಸ್ ಒಳಗೆ ಸಿವಿಲಿಯನ್ ಆಗಿದ್ದು, ಅವರು ಕಳೆದ ಒಂದು ವಾರದಿಂದ ಕಾಣಿಸುತ್ತಿಲ್ಲ. ಅಗಸ್ಟ 26ರ ಬೆಳಗ್ಗೆ 5 ಗಂಟೆಗೆ ಅಂಕೋಲಾದ ಬಾಳೆಗುಳಿಗೆ ಹೋಗಿ ಬರುವುದಾಗಿ ಹೇಳಿದ್ದ ಅವರು ಅಂಕೋಲಾದಲ್ಲಿಯೂ ಕಾಣಿಸಿಲ್ಲ. ಮರಳಿ ಮನೆಗೆ ಸಹ ಬಂದಿಲ್ಲ. ಸದ್ಯ ಪೊಲೀಸರು ಮನೋಜ ನಾಯ್ಕ ಅವರ ಹುಡುಕಾಟ ಶುರು ಮಾಡಿದ್ದಾರೆ.
ಕಾಣೆಯಾದ ಇಬ್ಬರ ಫೋಟೋಗಳನ್ನು ಬಿಡುಗಡೆ ಮಾಡಿದ ಅಧಿಕಾರಿಗಳು ಅವರ ಪತ್ತೆಗೆ ಸಾರ್ವಜನಿಕರ ಸಹಾಯ ಯಾಚಿಸಿದ್ದಾರೆ. ಈ ಫೋಟೋದಲ್ಲಿರುವವರು ಕಾಣಿಸಿದರೆ ಇಲ್ಲಿ ಫೋನ್ ಮಾಡಿ: 9480805230 ಅಥವಾ 08382-222443
Advertisement. Scroll to continue reading.
Advertisement. Scroll to continue reading.
Advertisement. Scroll to continue reading.