ಕದಿಯುವುದಕ್ಕಾಗಿಯೇ ಗೋಕರ್ಣಕ್ಕೆ ಬರುತ್ತಿದ್ದ ನಾಲ್ಕು ಮಹಿಳೆಯರು ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ. ಒಂದೇ ಕುಟುಂಬದ ಆ ನಾಲ್ವರನ್ನು ಬಂಧಿಸಿದ್ದಾರೆ.
Advertisement. Scroll to continue reading.
Advertisement. Scroll to continue reading.
ಗೋಕರ್ಣದ ಮಹಾಗಣಪತಿ ಮಂದಿರದಲ್ಲಿ ಮಂಗಳವಾರ ಪರ್ಸ ಕಳ್ಳತನ ನಡೆದಿತ್ತು. ದೇವರ ದರ್ಶನಕ್ಕೆ ಬಂದಿದ್ದ ಮುಂಜುಳಾ ಶಿಂಧೆ ಅವರು ಪರ್ಸ ಕಳೆದುಕೊಂಡಿದ್ದರು. ಭಕ್ತರ ಸೋಗಿನಲ್ಲಿ ಬಂದಿದ್ದ ಗದಗ ಬೆಟಗೇರಿಯ ಭೀಮವ್ವ ಹನುಮಂತಪ್ಪ ಮುಟಗಾರ (60), ಶಾಂತಾ ರಾಮಪ್ಪ ಮುಟಗಾರ (62), ಶುಭಾ ರಾಯಪ್ಪ ಮುಟಗಾರ (43) ಕುಮಾರಿ ಮುಟಗಾರ (43) ಅವರು ಈ ಪರ್ಸ ಕದ್ದಿದ್ದರು. ಬುಧವಾರದೊಳಗೆ ಪೊಲೀಸರು ಈ ಎಲ್ಲರನ್ನು ಬಂಧಿಸಿದರು. ಬಂಧಿತರೆಲ್ಲರೂ ಒಂದೇ ಕುಟುಂಬದವರಾಗಿದ್ದಾರೆ.
ಪಿಐ ಶ್ರೀಧರ ಎಸ್ ಆರ್ ಅವರ ಜೊತೆ ಪಿಸೈ ಸುನಿಲ್, ಎಸೈ ಲಕ್ಷಿö್ಮÃ ಗುನಗ, ಹವಾಲ್ದಾರ ಜಟ್ಟಪ್ಪ ನಾಯ್ಕ, ರಾಜೇಶ ನಾಯ್ಕ, ಸಿಬ್ಬಂದಿ ಶ್ರೀಕಾಂತ ಕೆ, ಸೋನಿಕಾ ರೆಡ್ಡಿ, ವಿನುತಾ ನಾಯ್ಕ, ಸಂಧ್ಯಾ ಭಂಡಾರಿ, ಸಾಧನಾ ನಾಯ್ಕ, ಶ್ರವಣಕುಮಾರ ಈ ಕಾರ್ಯಾಚರಣೆಯಲ್ಲಿದ್ದರು. ವಿಚಾರಣೆ ವೇಳೆ ಈ ಕಳ್ಳಿಯರು ಧರ್ಮಸ್ಥಳ, ಆಂಧ್ರದ ತಿರುಪತಿ, ತಮಿಳಯನಾಡಿನ ದೇವಾಲಯದಲ್ಲಿ ಕಳ್ಳತನ ಮಾಡಿರುವುದು ಗೊತ್ತಾಗಿದೆ.
Advertisement. Scroll to continue reading.