ಗೋವಾದಲ್ಲಿ ಬೈಕ್ ಓಡಿಸುತ್ತಿದ್ದ ಕುಮಟಾದ ಅರವಿಂದ ದೇಶಭಂಡಾರಿ ಅವರು ಊರಿಗೆ ಬಂದಾಗ ತಾಯಿ ಜೊತೆ ಸಂಚಾರಕ್ಕೆ ಹೊರಟಿದ್ದಾರೆ. ದಿಢೀರ್ ಆಗಿ ಬೈಕಿ ಬ್ರೆಕ್ ಹಾಕಿದ ಪರಿಣಾಮ ನೆಲಕ್ಕೆ ಬಿದ್ಧ ಕಲಾವತಿ ದೇಶಭಂಡಾರಿ ಅವರು ನೋವು ಸಹಿಸಲಾಗದೇ ಸಾವನಪ್ಪಿದ್ದಾರೆ.
ಕುಮಟಾದ ಕುಮಟಾ ದಿವಿಗಿ ಅಂತ್ರವಳ್ಳಿಯ ಅರವಿಂದ ಚಂದ್ರಕಾAತ ದೇಶಭಂಡಾರಿ ಅವರು ವಾಸವಾಗಿದ್ದಾರೆ. 46 ವರ್ಷದ ಅವರು ಸದ್ಯ ಗೋವಾದ ಪಣಜಿಯ ಪರವರಿಯಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ಅಗಸ್ಟ 31ರಂದು ಊರಿಗೆ ಬಂದಿದ್ದ ಅವರು ತಮ್ಮ ತಾಯಿ ಕಲಾವತಿ ದೇಶಭಂಡಾರಿ ಅವರ ಜೊತೆ ಬೈಕ್ ಸಂಚಾರ ಮಾಡಿದ್ದಾರೆ. ದಿವಗಿ ಶಿಳ್ಳೆ ಘಟ್ಟ ಪ್ರದೇಶದಲ್ಲಿ ಅರವಿಂದ ದೇಶಭಂಡಾರಿ ಬೈಕ್ ಓಡಿಸಿದ್ದು, ಇಳಿಜಾರಿನಲ್ಲಿಯೂ ಅವರು ಬೈಕಿನ ವೇಗ ಕಡಿಮೆ ಮಾಡಿಲ್ಲ.
ಈ ವೇಳೆ ಆ ರಸ್ತೆಯಲ್ಲಿ ದನ ಅಡ್ಡ ಬಂದಿದ್ದು, ಆ ಜಾನುವಾರು ನೋಡಿದ ಅರವಿಂದ ದೇಶಭಂಡಾರಿ ಅವರು ದಿಢೀರ್ ಆಗಿ ಬೈಕಿನ ಬ್ರೆಕ್ ಹಾಕಿದ್ದಾರೆ. ಪರಿಣಾಮ ಬೈಕಿನಲ್ಲಿ ಹಿಂದೆ ಕೂತಿದ್ದ ಕಲವಾತಿ ದೇಶಭಂಡಾರಿ ಅವರು ನೆಲಕ್ಕೆ ಬಿದ್ದಿದ್ದಾರೆ. ಗಂಭೀರ ಗಾಯಗೊಂಡ ಕಲಾವತಿ ಅವರನ್ನು ಕುಮಟಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿದೆ. ಅದಾದ ನಂತರ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲಿಯೂ ಚೇತರಿಸಿಕೊಳ್ಳದ ಕಾರಣ ಮಂಗಳೂರಿನ ಜನಪ್ರಿಯ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸುವ ಪ್ರಯತ್ನ ನಡೆದಿದೆ. ಆದರೆ, ಇದರಿಂದ ಯಾವ ಪ್ರಯೋಜನವೂ ಆಗಿಲ್ಲ.
Advertisement. Scroll to continue reading.
ಸೆಪ್ಟೆಂಬರ್ 10ರ ರಾತ್ರಿ ಕಲಾವತಿ ದೇಶಭಂಡಾರಿ ಅವರು ತಮ್ಮ 63ನೇ ವಯಸ್ಸಿನಲ್ಲಿ ಪ್ರಾಣ ಬಿಟ್ಟಿದ್ದಾರೆ. ತಾಯಿ ಮರಣದ ಬಗ್ಗೆ ಪಾಸ್ಟಪುಡ್ ಮಾರುವ ನಾರಾಯಣ ಚಂದ್ರಕಾAತ ದೇಶಭಂಡಾರಿ ಅªರು ಪೊಲೀಸರಿಗೆ ಮಾಹಿತಿ ನೀಡಿ, ಸಹೋದರನ ವಿರುದ್ಧ ಕೇಸು ಮಾಡಿದ್ದಾರೆ.
`ನಿಧಾನವಾಗಿ ವಾಹನ ಓಡಿಸಿ’