ಭಟ್ಕಳದ ಹೆದ್ದಾರಿ ಪಕ್ಕ ನಿಂತಿದ್ದ ಕುಮಾದ ವ್ಯಕ್ತಿಯೊಬ್ಬರಿಗೆ ಕಾರು ಡಿಕ್ಕಿ ಹೊಡೆದಿದೆ. ಹೀಗಾಗಿ ಕುಮಟಾದ ಪರಮೇಶ್ವರ ದೇವಾಡಿಗ ಅವರು ಸಾವನಪ್ಪಿದ್ದಾರೆ.
ಕುಮಟಾದ ಪರಮೇಶ್ವರ ರಾಮ ದೇವಾಡಿಗ (62) ಅವರು ಭಟ್ಕಳದ ಮುಂಡಳ್ಳಿಯಲ್ಲಿ ವಾಸವಾಗಿದ್ದರು. ತಮ್ಮ ಆಪ್ತರ ಮನೆಯಲ್ಲಿ ಅವರು ಜೀವನ ನಡೆಸುತ್ತಿದ್ದರು. ಗುರುವಾರ ಭಟ್ಕಳ ರಾಷ್ಟ್ರೀಯ ಹೆದ್ದಾರಿ-66ರಲ್ಲಿ ರಸ್ತೆ ಬದಿಯಲ್ಲಿ ನಿಂತಿದ್ದ ಅವರಿಗೆ ಕಾರು ಡಿಕ್ಕಿ ಹೊಡೆದಿದ್ದು, ಜಾಲಿ ಕ್ರಾಸ್ ನಡೆದ ದುರಂತದಲ್ಲಿ ಅವರು ಕೊನೆಯಾದರು.
ಪರಮೇಶ್ವರ ದೇವಾಡಿಗ ಅವರು ಅವರು ಸಂಬoಧಿಕರೊಬ್ಬರೊAದಿಗೆ ಮಾತನಾಡುತ್ತಾ ರಸ್ತೆ ಬದಿಯಲ್ಲಿ ನಿಂತಿದ್ದರು. ಈ ವೇಳೆ ಶಿರೂರಿನಿಂದ ಹೊನ್ನಾವರದತ್ತ ತೆರಳುತ್ತಿದ್ದ ಕಾರು ಏಕಾಏಕಿ ಅವರಿಗೆ ಡಿಕ್ಕಿ ಹೊಡೆಯಿತು. ಡಿಕ್ಕಿಯ ಪರಿಣಾಮ ಪರಮೇಶ್ವರ ಅವರಿಗೆ ಗಂಭೀರ ಗಾಯಗಳಾಗಿದ್ದು, ತಕ್ಷಣ ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಅದರಿಂದ ಪ್ರಯೋಜನ ಆಗಲಿಲ್ಲ.
Advertisement. Scroll to continue reading.
ಪರಮೇಶ್ವರ ಅವರು ಅಪಘಾತ ಸಂಭವಿಸುವ ಕೇವಲ ಎರಡು ದಿನಗಳ ಹಿಂದಷ್ಟೇ ಭಟ್ಕಳದ ಖಾಸಗಿ ಆಸ್ಪತ್ರೆಯೊಂದರಲ್ಲಿ ವಾಚ್‌ಮನ್ ಆಗಿ ಕೆಲಸಕ್ಕೆ ಸೇರಿದ್ದರು. ಜೀವನಕ್ಕಾಗಿ ಕೆಲಸ ಅರೆಸಿ ಪಕ್ಕದ ತಾಲೂಕಿಗೆ ಹೋಗಿದ್ದ ಅವರು ಅಲ್ಲಿಯೇ ಕೊನೆಯಾದರು.