ಜೀವನಕ್ಕಾಗಿ ಸೆಂಟ್ರಿoಗ್ ಕೆಲಸ ಮಾಡಿಕೊಂಡಿದ್ದ ಗಣೇಶ ನಾಯ್ಕ ಅವರು ಅಂತರಾಷ್ಟಿಯ ಮಟ್ಟದ ಯೋಗಾಸನ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಶಿರಸಿ ಉಂಚಳ್ಳಿ ಬಳಿಯ ಕಬ್ಬೆಯ ಗಣೇಶ ನಾಯ್ಕ ಅವರ ಈ ಸಾಧನೆ ನೋಡಿದ ಸಾಮಾಜಿಕ ಅನಂತಮೂರ್ತಿ ಹೆಗಡೆ ಅವರು ಅವರ ಮನೆಗೆ ಹೋಗಿ ಸಹಾಯ ಮಾಡಿದ್ದಾರೆ.
Advertisement. Scroll to continue reading.
ತುಮಕೂರಿನಲ್ಲಿ ನಡೆದ ರಾಷ್ಟಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಗಣೇಶ ನಾಯ್ಕ ಅವರು ಪ್ರಥಮ ಬಹುಮಾನಪಡೆದಿದ್ದಾರೆ. ಆ ಆಧಾರದಲ್ಲಿ ಅವರು ಥೈಲ್ಯಾಂಡ್‌ನಲ್ಲಿ ನಡೆಯುವ ಇಂಡೋ ಥೈಲ್ಯಾಂಡ್ ವರ್ಲ್ಡ ಯೋಗಾಸನ ಚಾಂಪಿಯನ್‌ಶೀಪ್‌ಗೆ ಭಾರತವನ್ನು ಪ್ರತಿನಿಧಿಸಲು ಆಸಕ್ತರಾಗಿದ್ದಾರೆ. ಅವರ ಆ ಸಾಧನೆ ಬಗ್ಗೆ ಅರಿತು ಅನಂತಮೂರ್ತಿ ಹೆಗಡೆ ಅವರು ಗಣೇಶ ನಾಯ್ಕ ಅವರ ಮನೆಗೆ ಹೋಗಿದ್ದಾರೆ. ಸಾಧಕರನ್ನು ಗೌರವಿಸಿ ಆರ್ಥಿಕ ನೆರವು ನೀಡಿದ್ದಾರೆ.
ನಂತರ ಮಾತನಾಡಿದ ಅನಂತಮೂರ್ತಿ ಹೆಗಡೆ ಅವರು `ಬಡತನದ ನಡುವೆಯೂ ಯೋಗ ಚಾಂಪಿಯನ್‌ಶೀಪ್‌ನಲ್ಲಿ ಸಾಧನೆ ಮಾಡಿ ಹೆಮ್ಮೆ ತಂದಿರುವ ಗಣೇಶ ನಾಯ್ಕ ಅವರು ಎಲ್ಲರಿಗೂ ಸ್ಪೂರ್ತಿಯಾಗಿದ್ದಾರೆ. ಪ್ರತಿಯೊಬ್ಬರು ಯೋಗ ಮಾಡಿ ಆರೋಗ್ಯ ಕಾಪಾಡಿಕೊಳ್ಳಬೇಕು’ ಎಂದು ಕರೆ ನೀಡಿದ್ದಾರೆ. `ಯೋಗವನ್ನು ವಿಶ್ವದಲ್ಲಿ ಪರಿಚಯಿಸಿದ ಕೀರ್ತಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಸಲ್ಲುತ್ತದೆ. ನರೇಂದ್ರ ಮೋದಿಯವರ ಕರೆಗೆ 190 ದೇಶದ ಜನ ಯೋಗ ಮಾಡುತ್ತಿದ್ದಾರೆ’ ಎಂದಿದ್ದಾರೆ. ಬನವಾಸಿ ಬಿಜೆಪಿ ಮಂಡಲದ ಅಧ್ಯಕ್ಷರಾದ ರಮೇಶ ನಾಯ್ಕ ಕುಪ್ಪಳ್ಳಿ ಅವರು ಮಾತನಾಡಿ `ಯೋಗ ಎನ್ನುವಂತದ್ದು ಮೊದಲು ಭಾರತ ದೇಶದಲ್ಲಿ ಪ್ರಾಮುಖ್ಯತೆಯನ್ನು ನೀಡಲಾಗುತ್ತಿತ್ತು. ನರೇಂದ್ರ ಮೋದಿಯವರು ಅದನ್ನು ವಿಶ್ವದಾದ್ಯಂತ ಪರಿಚಯಿಸಿದ್ದಾರೆ. ಗಣೇಶ ವಿಷ್ಣು ನಾಯ್ಕ ಅವರು ಸಾಧನೆ ಜಿಲ್ಲೆಗೆ ಹಾಗೂ ರಾಜ್ಯಕ್ಕೆ ಹೆಮ್ಮೆಯ ತಂದಿದೆ’ ಎಂದಿದ್ದಾರೆ.
Advertisement. Scroll to continue reading.
ಪ್ರಮುಖರಾದ ವಿ ಎಂ ಹೆಗಡೆ ಕಬ್ಬೆ, ರಾಘವೇಂದ್ರ ಕಬ್ಬೆ, ಮಂಜುನಾಥ ನಾಯ್ಕ ಮರಿಗುಡ್ಡೆ, ವಾಮನ ನಾಯ್ಕ ಕಾನ್‌ಕೋಪ್ಪ, ಮಂಜುನಾಥ ನಾಯ್ಕ ಹಲಸಿನಕೊಪ್ಪ, ಹರೀಶ ನಾಯ್ಕ ಕುಬೇರ ಗೌಡ, ಮಂಜುನಾಥ ರಾಮ ಗೌಡ, ಚಂದ್ರು ನಾಯ್ಕ, ಬಸವಂತ ಗಂಗೆಮತ್ತ್, ದೇವಕಿ ಅಣ್ಣಪ್ಪ ಗೌಡ ಇತರರು ಇದ್ದರು.