ಭಟ್ಕಳದ ಗುರು ನಾಯ್ಕ ಅವರು ಹುಡುಗಿಯೊಬ್ಬರ ಫೋಟೋವನ್ನು ತಮ್ಮ ವಾಟ್ಸಪ್ ಸ್ಟೇಟಸ್’ಗೆ ಹಾಕಿಕೊಂಡಿದ್ದು, ಅದನ್ನು ನೋಡಿದ ತಿರುಮಲ ನಾಯ್ಕ ಅವರು ಆ ಹುಡುಗಿಯ ಅಣ್ಣನಿಗೆ ಸುದ್ದಿ ಮುಟ್ಟಿಸಿದ್ದಾರೆ. ಇದನ್ನು ಸಹಿಸದ ಗುರು ನಾಯ್ಕ ಅವರು ಧನಂಜಯ ನಾಯ್ಕ ಹಾಗೂ ನಿತಿನ್ ಮುರುಡೇಶ್ವರ ಅವರ ನೆರವುಪಡೆದು ತಿರುಮಲ ನಾಯ್ಕ ಅವರಿಗೆ ಹೊಡೆದಿದ್ದಾರೆ.
Advertisement. Scroll to continue reading.
ಭಟ್ಕಳದ ಶಾರದಾಹೊಳೆ ಬಳಿ ತಿರುಮಲ ವೆಂಕಟೇಶ ನಾಯ್ಕ ಅವರು ವಾಸವಾಗಿದ್ದಾರೆ. 28 ವರ್ಷದ ಅವರು ಶಿಲ್ಪಿಯಾಗಿ ಬದುಕು ಕಟ್ಟಿಕೊಂಡಿದ್ದಾರೆ. ಕಳೆದ ಜನವರಿಯಲ್ಲಿ ತಿರುಮಲ ನಾಯ್ಕ ಅವರು ವಾಟ್ಸಪ್ ನೋಡುವಾಗ ಅವರಿಗೆ ಮುಟ್ಟಳ್ಳಿಯ ಗುರು ಮಾಧವ ನಾಯ್ಕ ಅವರು ಹುಡುಗಿಯೊಬ್ಬರ ಫೋಟೋ ಹಾಕಿಕೊಂಡಿರುವುದು ಕಾಣಿಸಿದೆ. ಆ ಹುಡುಗಿ ಸ್ನೇಹಿತ ಧನರಾಜ್ ಅವರ ತಂಗಿ ಎಂಬುದು ತಿರುಮಲ ನಾಯ್ಕ ಅವರಿಗೆ ಗೊತ್ತಾಗಿದೆ. ಹೀಗಾಗಿ ತಿರುಮಲ ನಾಯ್ಕ ಅವರು ಧನರಾಜ್ ಅವರ ಬಳಿ ಈ ವಿಷಯ ಹೇಳಿದ್ದಾರೆ.
ಇದೇ ವಿಷಯ ಗುರು ನಾಯ್ಕ ಅವರಿಗೆ ಗೊತ್ತಾಗಿದೆ. ಸ್ಟೇಟಸ್ ವಿಷಯವನ್ನು ಹೇಳಿದ ಕಾರಣ ತಿರುಮಲ ನಾಯ್ಕ ಅವರ ವಿರುದ್ಧ ಸೇಡು ತೀರಿಸಿಕೊಳ್ಳಲು ಗುರು ನಾಯ್ಕ ಕಾದಿದ್ದಾರೆ. ಅಗಸ್ಟ 30ರಂದು ಸಂಜೆ ಉತ್ತರಕೊಪ್ಪ ರಸ್ತೆಯ ಹಡಾಳ್ ರಸ್ತೆ ಯಲ್ಲಿ ಅಲೆದಾಡುತ್ತಿದ್ದ ತಿರುಮಲ ನಾಯ್ಕ ಅವರನ್ನು ಗುರು ನಾಯ್ಕ ಅವರು ಅಡ್ಡಗಟ್ಟಿದ್ದಾರೆ. ಮುಟ್ಟಳ್ಳಿಯ ಧನಂಜಯ ಜಟ್ಟಪ್ಪ ನಾಯ್ಕ, ಮುರುಡೇಶ್ವರದ ನಿತಿನ್ ಅವರ ಜೊತೆ ನೀಲಿ ಬಣ್ಣದ ಕಾರಿನಲ್ಲಿ ಬಂದ ಗುರು ನಾಯ್ಕ ಏಕಾಏಕಿ ತಿರುಮಲ ನಾಯ್ಕ ಅವರ ಮೇಲೆ ದಾಳಿ ಮಾಡಿದ್ದಾರೆ.
Advertisement. Scroll to continue reading.
ತಿರುಮಲ ನಾಯ್ಕ ಅವರ ಶರ್ಟ ಕಾಲರ್ ಹಿಡಿದು ಗಲಾಟೆ ಮಾಡಿದ ಆ ಮೂವರು ಅವರ ಮುಖಕ್ಕೆ ಹೊಡೆದು ನೋವು ಮಾಡಿದ್ದಾರೆ. ಈ ಬಗ್ಗೆ ತಿರುಮಲ ನಾಯ್ಕ ಅವರು ಪೊಲೀಸರ ಬಳಿ ದೂರಿ, ಕೇಸು ದಾಖಲಿಸಿದ್ದಾರೆ.