ಡಿಜೆ ಬಳಕೆ ನಿಷೇಧಿಸಿ ಜಿಲ್ಲಾಡಳಿತ ಹೊರಡಿಸಿದ ಸೂಚನೆ ವಿರುದ್ಧ ಗಣೇಶೋತ್ಸವ ಸಮಿತಿಯವರು ಆಕ್ಷೇಪವ್ಯಕ್ತಪಡಿಸಿದ್ದಾರೆ. `ಕರಾವಳಿ ಉತ್ಸವಕ್ಕೆ ಡಿಜೆ ಬಳಸಲು ಅವಕಾಶ ನೀಡಲಾಗಿದ್ದು, ಗಣೇಶ ಉತ್ಸವಕ್ಕೆ ಏಕೆ ಈ ನಿಷೇಧ?’ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ.
Advertisement. Scroll to continue reading.
ಜಿಲ್ಲಾಧಿಕಾರಿ ಸಭಾಭವನದಲ್ಲಿ ಮಂಗಳವಾರ ಗಣೇಶೋತ್ಸವ ಹಿನ್ನಲೆ ಶಾಂತಿ ಸಭೆ ನಡೆದಿದ್ದು, ಜಿಲ್ಲಾಧಿಕಾರಿ ಕೆ ಲಕ್ಷಿಪ್ರಿಯಾ ಅವರು `ಡಿಜೆ ಬಳಕೆ ಮಾಡುವ ಹಾಗಿಲ್ಲ’ ಎಂದು ಸೂಚಿಸಿದರು. ಜಿಲ್ಲಾಡಳಿತದ ಈ ನಿರ್ಧಾರದ ವಿರುದ್ಧ ಟೋಲ್‌ನಾಕಾ ಗಣೇಶೋತ್ಸವ ಸಮಿತಿಯ ಆಯೋಜಕ ಆನಂದು ರಾಮಾ ನಾಯ್ಕ ಅವರು ಕೆಂಡಾಮoಡಲರಾದರು. `ಕರಾವಳಿ ಉತ್ಸವದಂತಹ ಸರ್ಕಾರಿ ಕಾರ್ಯಕ್ರಮಗಳಲ್ಲಿ ಡಿಜೆ ತಂಡದವರನ್ನು ಆಮಂತ್ರಿಸಲಾಗುತ್ತದೆ. ಜಿಲ್ಲಾಡಳಿತದವರು ಅದಕ್ಕೆ ಅನುಮತಿ ನೀಡುತ್ತಾರೆ. ಆದರೆ, ವರ್ಷಕ್ಕೊಮ್ಮೆ ಬರುವ ಗಣೇಶೋತ್ಸವಕ್ಕೆ ಮಾತ್ರ ಇಂಥ ನಿಷೇಧ ಹೇರಲಾಗುತ್ತದೆ’ ಎಂದು ಖಾರವಾಗಿ ಮಾತನಾಡಿದರು. `ಗಣೇಶ ವಿಸರ್ಜನಾ ಮೆರವಣಿಗೆಯ 1 ದಿನದ ಮಟ್ಟಿಗಾದರೂ ಡಿಜೆಗೆ ಅನುಮತಿ ಕೊಡಬೇಕು’ ಎಂದು ಪಟ್ಟುಹಿಡಿದರು.
`ಡಿಜೆ ಬಳಕೆಯನ್ನು ಬ್ಯಾನ್ ಮಾಡುವ ಬದಲು ಡಿಜೆ ಉಪಕರಣಗಳನ್ನು ತಯಾರಿಸುವ ಕಂಪನಿಗಳನ್ನು ಸರ್ಕಾರ ಬ್ಯಾನ್ ಮಾಡಬೇಕು’ ಎಂದು ಆನಂದು ನಾಯ್ಕ ಅವರು ಆಕ್ರೋಶವ್ಯಕ್ತಪಡಿಸಿದರು. `ಡಿಜೆ ವ್ಯವಸ್ಥೆಯನ್ನು ನಂಬಿಕೊoಡಿರುವ ಮಾಲೀಕರು ಸುಮಾರು 30 ಲಕ್ಷ ರೂಪಾಯಿಗಳ ಬೃಹತ್ ಬಂಡವಾಳ ಹೂಡಿರುತ್ತಾರೆ. ಇವರಲ್ಲಿ ಬಹುತೇಕರು ಬಡವರಾಗಿದ್ದು, ಇಂದಿನ ಕಠಿಣ ಆರ್ಥಿಕ ಪರಿಸ್ಥಿತಿಯಲ್ಲಿ ಡಿಜೆ ಉದ್ಯಮವನ್ನು ಮುನ್ನಡೆಸಿಕೊಂಡು ಹೋಗುವುದು ಕಷ್ಟವಾಗಿದೆ’ ಎಂದವರು ವಿವರಿಸಿದರು. ಇದಕ್ಕೆ ಪೊಲೀಸ್ ಅಧೀಕ್ಷಕ ದೀಪನ್ ಎಂ ಎನ್ ಅವರು ಪ್ರತಿಕ್ರಿಯಿಸಿ `ಗಣೇಶ ಚತುರ್ಥಿ ಹಬ್ಬವನ್ನು ಶಾಂತಿಯುತವಾಗಿ ಆಚರಿಸಬೇಕು. ಡಿಜೆ ಬದಲು ಸ್ಥಳೀಯ ಕಲಾವಿದರು ಹಾಗೂ ಕಲಾತಂಡಗಳಿAದ ಜಿಲ್ಲೆಯ ಕಲೆ ಸಂಸ್ಕೃತಿಯನ್ನು ಬಿಂಬಿಸುವ ಕಾರ್ಯಕ್ರಮ ಆಯೋಜಿಸುವ ಬಗ್ಗೆ ಚಿಂತಿಸಬೇಕು’ ಎಂದು ಹೇಳಿದರು.
Advertisement. Scroll to continue reading.