• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

ಕೆಲಸ ಮಾಡದೇ ಕಾಸು ಹೊಡೆದವರಿಗೆ ಅಮಾನತು ಶಿಕ್ಷೆ!

September 8, 2026
DJ Ban Ganeshotsav organizer expresses dissatisfaction!

ಡಿಜೆ ನಿಷೇಧ: ಅಸಮಧಾನವ್ಯಕ್ತಪಡಿಸಿದ ಗಣೇಶೋತ್ಸವದ ಆಯೋಜಕ!

September 8, 2026
Ganesh Festival: Use of DJs is prohibited. No permission for loudspeakers at night either!

ಗಣೇಶ ಹಬ್ಬ: ಡಿಜೆ ಬಳಸುವ ಹಾಗಿಲ್ಲ. ರಾತ್ರಿ ಮೈಕ್’ಗೂ ಅನುಮತಿ ಇಲ್ಲ!

  • Home
  • Janamata
Wednesday, September 9, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಗಣೇಶ ಹಬ್ಬ: ಡಿಜೆ ಬಳಸುವ ಹಾಗಿಲ್ಲ. ರಾತ್ರಿ ಮೈಕ್’ಗೂ ಅನುಮತಿ ಇಲ್ಲ!

Achyutkumar by Achyutkumar
Ganesh Festival: Use of DJs is prohibited. No permission for loudspeakers at night either!
Share on FacebookShare on WhatsappShare on Twitter
ADVERTISEMENT

`ಉತ್ತರ ಕನ್ನಡ ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ಡಿಜೆ ಬಳಕೆಗೆ ಅವಕಾಶ ಕೊಡಲ್ಲ’ ಎಂದು ಜಿಲ್ಲಾಧಿಕಾರಿ ಕೆ ಲಕ್ಷಿಪ್ರಿಯಾ ಹೇಳಿದ್ದಾರೆ. `ಗಣೇಶ ಚತುರ್ಥಿ ಹಬ್ಬವನ್ನು ಶಾಂತಿಯುತ ಹಾಗೂ ಪರಿಸರ ಸ್ನೇಹಿ ಆಚರಣೆ ಮಾಡಬೇಕು’ ಎಂದವರು ಮನವಿ ಮಾಡಿದ್ದಾರೆ.

Advertisement. Scroll to continue reading.

ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಶಾಂತಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು `ಪ್ಲಾಸ್ಟರ್ ಆಫ್ ಪ್ಯಾರಿಸ್‌ನಿಂದ ತಯಾರಿಸಿದ ಮೂರ್ತಿಗಳ ಬಳಕೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದ್ದು, ಸಾರ್ವಜನಿಕರು ಕಡ್ಡಾಯವಾಗಿ ಪರಿಸರ ಸ್ನೇಹಿ ಗಣೇಶ ಮೂರ್ತಿಗಳು ಹಾಗೂ ಪ್ಲಾಸ್ಟಿಕ್‌ರಹಿತ ಅಲಂಕಾರಿಕ ವಸ್ತುಗಳನ್ನೇ ಬಳಸಬೇಕು. ಧ್ವನಿವರ್ಧಕ ಬಳಕೆಗೆ ಪೊಲೀಸ್ ಅನುಮತಿ ಕಡ್ಡಾಯವಾಗಿದ್ದು, ಡಿ ಜೆ.ಬಳಸುವಂತಿಲ್ಲ. ಸೌಂಡ್ ಸ್ವೀಕರ್‌ಗಳನ್ನು ವಸತಿ ಪ್ರದೇಶದಲ್ಲಿ 55 ಡೆಸಿಬಲ್ ಹಾಗೂ ಶಾಲೆ, ಆಸ್ಪತ್ರೆಗಳಂತಹ ಸೂಕ್ಷ್ಮ ವಲಯಗಳಲ್ಲಿ ಗರಿಷ್ಠ 50 ಡೆಸಿಬಲ್ ಶಬ್ದಮಿತಿಯನ್ನು ಪಾಲಿಸಬೇಕು. ರಾತ್ರಿ 10 ಗಂಟೆಯ ನಂತರ ಯಾವುದೇ ರೀತಿಯ ಧ್ವನಿವರ್ಧಕ ಬಳಕೆಗೆ ಅವಕಾಶವಿಲ್ಲ’ ಎಂದು ತಿಳಿಸಿದರು

ADVERTISEMENT

`ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿಯ ಪ್ರತಿಷ್ಠಾಪನೆ, ಮೆರವಣಿಗೆ ಮತ್ತು ಧ್ವನಿವರ್ಧಕಗಳ ಬಳಕೆಯ ಅನುಮತಿಗೆ ಸಾರ್ವಜನಿಕರು ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಲು ಸ್ಥಳೀಯ ಸಂಸ್ಥೆ ಹಾಗೂ ಗ್ರಾಮ ಪಂಚಾಯತಿ ಮಟ್ಟದಲ್ಲಿ ಏಕಗವಾಕ್ಷಿ ವ್ಯವಸ್ಥೆ ಮಾಡಲಾಗಿದೆ. ಅಗತ್ಯವಿರುವ ಎಲ್ಲಾ ಇಲಾಖೆಗಳ ನಿರಾಪೇಕ್ಷಣಾ ಪತ್ರಗಳನ್ನು ಇಲ್ಲಿಂದಲೇ ಪಡೆಯಲು ಸಾಧ್ಯವಿದೆ. ಜಿಲ್ಲೆಯಲ್ಲಿ ಒಟ್ಟು 1,492 ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಗುತ್ತಿದ್ದು, ಸೂಕ್ತ ಸ್ಥಳೀಯ ಅನುಮತಿಗಳೊಂದಿಗೆ ಮೆರವಣಿಗೆ ನಡೆಸಲು ಸೂಚಿಸಲಾಗಿದೆ’ ಎಂದರು. `ಗಣೇಶ ಮೂರ್ತಿಗಳ ವಿಸರ್ಜನೆ ನಡೆಯುವ ಸ್ಥಳಗಳಲ್ಲಿ ಜೆಸಿಬಿ, ಅಗ್ನಿಶಾಮಕ ದಳ, ಹೆಸ್ಕಾಂ ಸಿಬ್ಬಂದಿ ಹಾಗೂ ಪರಿಣಿತ ಈಜುಗಾರರನ್ನು ನಿಯೋಜಿಸಲಾಗಿದ್ದು, ಜಿಲ್ಲೆಯ 50ಕ್ಕೂ ಹೆಚ್ಚು ಅಧಿಕೃತ ಸ್ಥಳಗಳಲ್ಲಿ ಪಟಾಕಿ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರು ಅಧಿಕೃತ ಮಳಿಗೆಗಳಿಂದ ಹಸಿರು ಪಟಾಕಿಗಳನ್ನು ಮಾತ್ರ ಖರೀದಿಸಬೇಕು’ ಎಂದು ಸೂಚಿಸಿದರು.

Advertisement. Scroll to continue reading.
ADVERTISEMENT

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ ಎನ್ ಅವರು ಮಾತನಾಡಿ `ಗಣೇಶ ಚತುರ್ಥಿ ಹಬ್ಬವನ್ನು ಶಾಂತಿಯುತವಾಗಿ ಹಾಗೂ ಕಾನೂನು ಚೌಕಟ್ಟಿನಲ್ಲಿ ಆಚರಿಸಲು ಪೊಲೀಸ್ ಇಲಾಖೆಯಿಂದ ವ್ಯಾಪಕ ಬಂದೋಬಸ್ತ್ ಮತ್ತು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಭಟ್ಕಳ ಉಪವಿಭಾಗ 392, ಕಾರವಾರ ಹಾಗೂ ಅಂಕೋಲಾ ತಾಲೂಕುಗಳಲ್ಲಿ 131, ಶಿರಸಿ ಉಪವಿಭಾಗ 668, ದಾಂಡೇಲಿ, ಹಳಿಯಾಳ ಹಾಗೂ ಜೋಯಿಡಾ 301 ಸೇರಿದಂತೆ ಒಟ್ಟು 1,492 ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಗುತ್ತಿದೆ. ಕಳೆದ ಬಾರಿಯ ಗಣೇಶೋತ್ಸವ ಹಾಗೂ ಮೆರವಣಿಗೆ ವೇಳೆ ಗಲಾಟೆ, ಅಶಾಂತಿ ಸೃಷ್ಟಿಸಿದ್ದ ಆರೋಪಿಗಳು ಮತ್ತು ಗಲಭೆಕೋರರ ವಿರುದ್ಧ ಬಿ.ಎನ್.ಎಸ್ ಕಾಯ್ದೆಯಡಿ ಪ್ರಿವೆಂಟಿವ್ ಆಕ್ಷನ್ ರಿಪೋರ್ಟ್ ದಾಖಲಿಸಿ ಕಟ್ಟುನಿಟ್ಟಿನ ಬಾಂಡ್ ಓವರ್ ಮಾಡಿಸಲಾಗಿದೆ’ ಎಂದರು.

`ಜಿಲ್ಲೆಯ ಶೇ 95ರಷ್ಟ್ಟು ಗಣೇಶ ಮೂರ್ತಿಗಳು 11ನೇ ದಿನದ ಒಳಗಾಗಿ ವಿಸರ್ಜನೆಯಾಗಲಿವೆ. ಗರಿಷ್ಠ ಸಂಖ್ಯೆಯ ವಿಸರ್ಜನೆಗಳು 5ನೇ ದಿನ (449) ಹಾಗೂ 11ನೇ ದಿನ (143) ನಡೆಯಲಿದ್ದು, ಹೆಚ್ಚುವರಿ ಭದ್ರತೆಗಾಗಿ 400 ಗೃಹರಕ್ಷಕರು, 15 ಡಿ.ಎ.ಆರ್ ತುಕಡಿ ಮತ್ತು ಕೆ.ಎಸ್.ಆರ್.ಪಿ ತುಕಡಿಗಳನ್ನೂ ಮತ್ತು ಸ್ಥಳೀಯ ಪೊಲೀಸ್ ಠಾಣೆಯ ಸಿಬ್ಬಂದಿಗಳನ್ನೂ ಕೂಡ ಅಗತ್ಯವಿರುವಡೆಗಳಲ್ಲಿ ನಿಯೋಜಿಸಲಾಗುತ್ತದೆ. ಎಲ್ಲರೂ ಮೆರವಣಿಗೆ ಹಾಗೂ ಸಭಾಂಗಣಗಳಲ್ಲಿ ನಿಗದಿಪಡಿಸಿದ ಶಬ್ದಮಿತಿಯನ್ನು ಕಡ್ಡಾಯವಾಗಿ ಪಾಲಿಸಬೇಕು. ಶಬ್ದಮಾಲಿನ್ಯ ನಿಯಂತ್ರಿಸಲು ಸಾರ್ವಜನಿಕ ದೂರುಗಳು ಬಂದ ತಕ್ಷಣ ಪೊಲೀಸ್ ಸಿಬ್ಬಂದಿ ಕ್ರಮ ಕೈಗೊಳ್ಳಲಿದ್ದಾರೆ. ಅಲ್ಲದೆ ಮಾಲಿನ್ಯ ನಿಯಂತ್ರಣ ಮಂಡಳಿಯ ಸಿಬ್ಬಂದಿ ಜೊತೆಗೂಡಿ ಪೊಲೀಸರು ರಾಂಡಮ್ ಆಗಿ ಧ್ವನಿವರ್ಧಕಗಳ ಶಬ್ದಮಿತಿಯನ್ನು ತಪಾಸಣೆ ನಡೆಸಲಿದ್ದಾರೆ. ಹಬ್ಬದ ಅವಧಿಯಲ್ಲಿ ಯಾವುದೇ ತುರ್ತು ಪರಿಸ್ಥಿತಿ ಅಥವಾ ದೂರುಗಳನ್ನು ತಕ್ಷಣವೇ ನಿರ್ವಹಿಸಲು ಅಗ್ನಿಶಾಮಕ ಹಾಗೂ ವೈದ್ಯಕೀಯ ಸಿಬ್ಬಂದಿ ಒಳಗೊಂಡ ಕ್ವಿಕ್ ರೆಸ್ಪಾನ್ಸ್ ಟೀಮ್ ಸದಾ ಸಜ್ಜಾಗಿರಲಿದೆ. ಮೆರವಣಿಗೆಯಲ್ಲಿ ಡಿ.ಜೆ. ಬದಲಿಗೆ ಸ್ಥಳೀಯ ಕಲಾವಿದರು ಕಲಾತಂಡಗಳಿAದ ಜಿಲ್ಲೆಯ ಕಲೆ ಸಂಸ್ಕೃತಿಯನ್ನು ಬಿಂಬಿಸುವ ಕಾರ್ಯಕ್ರಮ ಆಯೋಜಿಸಬಹುದಾಗಿದೆ’ ಎಂದರು.

ಗಣಪತಿ ಮೆರವಣಿಗೆ ಸಾಗುವ ರಸ್ತೆಗಳಲ್ಲಿ ಅಗತ್ಯ ಭದ್ರತೆ ನೀಡುವಂತೆ ಮತ್ತು ಗುಂಡಿಗಳಿAದ ಕೂಡಿರುವ ರಸ್ತೆಯನ್ನು ಸರಿಪಡಿಸುವಂತೆ ಆಯೋಜಕರು ಕೋರಿದರು. ಅಗತ್ಯವಿರುವಡೆಗಳನ್ನು ತಾತ್ಕಾಲಿಕ ದುರಸ್ತಿ ಕಾರ್ಯಗಳನ್ನು ಕೈಗೊಳ್ಳಲು ಸಂಬAಧಪಟ್ಟ ಇಲಾಖೆಗಳಿಗೆ ಸೂಚನೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು. ಸಭೆಯಲ್ಲಿ ಕಾರವಾರ ಉಪ ವಿಭಾಗಾಧಿಕಾರಿ ರಮ್ಯಾ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ, ಭಟ್ಕಳ ವಿಭಾಗದ ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾನು ಗುಪ್ತ ಹಾಗೂ ವಿವಿಧ ಇಲಾಖೆಗಳ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳು, ವಿವಿಧ ತಾಲೂಕುಗಳಿಂದ ಆಗಮಿಸಿದ್ದ ಸಾರ್ವಜನಿಕರು ಶಾಂತಿ ಸಭೆಯಲ್ಲಿ ಭಾಗವಹಿಸಿದ್ದರು.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

ಕೆಲಸ ಮಾಡದೇ ಕಾಸು ಹೊಡೆದವರಿಗೆ ಅಮಾನತು ಶಿಕ್ಷೆ!

September 8, 2026
DJ Ban Ganeshotsav organizer expresses dissatisfaction!

ಡಿಜೆ ನಿಷೇಧ: ಅಸಮಧಾನವ್ಯಕ್ತಪಡಿಸಿದ ಗಣೇಶೋತ್ಸವದ ಆಯೋಜಕ!

September 8, 2026
Ganesh Festival: Use of DJs is prohibited. No permission for loudspeakers at night either!

ಗಣೇಶ ಹಬ್ಬ: ಡಿಜೆ ಬಳಸುವ ಹಾಗಿಲ್ಲ. ರಾತ್ರಿ ಮೈಕ್’ಗೂ ಅನುಮತಿ ಇಲ್ಲ!

September 8, 2026
ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!