ಕಾರವಾರದ ಕೋಡಿಭಾಗದ ಶ್ರೀ ಬಿಂಧು ಮಾಧವ ದೇಗುಲದಲ್ಲಿ ಶ್ರಾವಣ ಮಾಸದ ವಿಶೇಷ ಹೂವಿನ ಪೂಜೆ ನಡೆದಿದ್ದು, ಈ ವೇಳೆಯಲ್ಲಿಯೇ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ನಡೆಸಲಾಗಿದೆ. ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ದೇಗುಲಕ್ಕೆ ಆಮಂತ್ರಿಸಿ ಅವರಿಗೆ ಶಾಲು ಹೊದೆಸಿ ಗೌರವಿಸಲಾಗಿದೆ.
Advertisement. Scroll to continue reading.
2025-26ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಾದ ಸುಮೀತ್ ನರೇಶ ಮೇತ್ರಿ, ವ್ರತಿಕಾ ಜಯರಾಮ ನಾಯ್ಕ, ಆಧ್ಯಾ ಅಶೋಕ ನಾಯ್ಕ ಹಾಗೂ ಪಿಯುಸಿ ವಿದ್ಯಾರ್ಥಿಗಳಾದ ಶ್ರೇಯಸ್ ಚಂದ್ರಕಾoತ ನಾಯ್ಕ, ರಂಜಿತಾ ರಾಮನಾಥ ನಾಯ್ಕ ಹಾಗೂ ಇಂಜಿನಿಯರಿoಗ್ ವಿದ್ಯಾರ್ಥಿನಿ ಮಾನಸಿ ಮಂಜುನಾಥ ನಾಯ್ಕ ಅವರು ಶೇ 90ಕ್ಕೂ ಮೇಲ್ಪಟ್ಟ ಸಾಧನೆ ಮಾಡಿದ್ದರು. ಹೀಗಾಗಿ ಅವರೆಲ್ಲರನ್ನು ಕುಳಾವಿಗಳು ದೇಗುಲಕ್ಕೆ ಆಮಂತ್ರಿಸಿದ್ದರು. ವಿಶೇಷ ಪೂಜೆ ನಂತರ ಸಾಧಕ ವಿದ್ಯಾರ್ಥಿಗಳಿಗೆ ಪ್ರಸಾದ ನೀಡಿ ಗೌರವ ಸಲ್ಲಿಸಿದರು.
ಈ ವೇಳೆ ದೇವಸ್ಥಾನದ ಅಭಿವೃದ್ಧಿಗಾಗಿ ತಮ್ಮ ಜೀವಮಾನವಿಡೀ ನಿಸ್ವಾರ್ಥವಾಗಿ ಸೇವೆ ಸಲ್ಲಿಸಿದ ದಿ ರಮೇಶ ನಾರಾಯಣ ನಾಯ್ಕ ಅವರ ಸೇವೆಯನ್ನು ಸ್ಮರಿಸಲಾಯಿತು. ಶ್ರೀ ಬಿಂದು ಮಾಧವನ ಸೇವೆಯೊಂದಿಗೆ ದೇವಸ್ಥಾನದ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸಿದ ಅವರ ಕೊಡುಗೆಯನ್ನು ಗುರುತಿಸಿ ಅವರ ಪುತ್ರ ಸುನೀಲ ರಮೇಶ ನಾಯ್ಕ ಅವರನ್ನು ಜನಶಕ್ತಿ ವೇದಿಕೆಯ ಅಧ್ಯಕ್ಷರಾದ ಮಾಧವ ನಾಯಕ ಅವರು ಸನ್ಮಾನಿಸಿ ಗೌರವಿಸಿದರು.
Advertisement. Scroll to continue reading.
ಧಾರ್ಮಿಕ ಆಚರಣೆಯ ಜೊತೆಗೆ ಶಿಕ್ಷಣ ಮತ್ತು ಸಮಾಜಸೇವೆಯ ಮಹತ್ವವನ್ನು ಸಾರಿದ ಕಾರ್ಯಕ್ರಮಕ್ಕೆ ಭಕ್ತರು ಮೆಚ್ಚುಗೆವ್ಯಕ್ತಪಡಿಸಿದರು. ಈ ಕಾರ್ಯಕ್ರಮದಲ್ಲಿ ದೇವಸ್ಥಾನದ ಮಾಲಗಾರರಾದ ರಮಾಕಾಂತ ಗಿರಿಧರ ನಾಯ್ಕ, ಆನಂದು ವಿರ್ಜಿ ನಾಯ್ಕ, ಮಾರುತಿ ನಾರಾಯಣ ನಾಯ್ಕ, ಉಮೇಶ ದೇವಿದಾಸ ನಾಯ್ಕ, ಸತಿಶ್ಚಂದ್ರ ಸದಾನಂದ ಬೇಳೂರಕರ, ತಾರಾನಾಥ ಗಂಗಾಧರ ನಾಯ್ಕ, ದೇವಸ್ಥಾನ ಕಮಿಟಿಯ ಅಧ್ಯಕ್ಷರಾದ ರವಿ ಬೇಳೂರಕರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಕೃಷ್ಣಾನಂದ ನಾಯ್ಕ ಕಾರ್ಯಕ್ರಮವನ್ನು ನಿರೂಪಿಸಿದರು.