• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

ಕೆಲಸ ಮಾಡದೇ ಕಾಸು ಹೊಡೆದವರಿಗೆ ಅಮಾನತು ಶಿಕ್ಷೆ!

September 8, 2026
DJ Ban Ganeshotsav organizer expresses dissatisfaction!

ಡಿಜೆ ನಿಷೇಧ: ಅಸಮಧಾನವ್ಯಕ್ತಪಡಿಸಿದ ಗಣೇಶೋತ್ಸವದ ಆಯೋಜಕ!

September 8, 2026
Ganesh Festival: Use of DJs is prohibited. No permission for loudspeakers at night either!

ಗಣೇಶ ಹಬ್ಬ: ಡಿಜೆ ಬಳಸುವ ಹಾಗಿಲ್ಲ. ರಾತ್ರಿ ಮೈಕ್’ಗೂ ಅನುಮತಿ ಇಲ್ಲ!

  • Home
  • Janamata
Wednesday, September 9, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಭೂಗಳ್ಳರ ವಿರುದ್ಧ ಪೊಲೀಸ್ ಸಮರ: ಸರ್ಕಾರಿ ಸಿಬ್ಬಂದಿ ಶಾಮೀಲಾತಿಯಲ್ಲಿ ನಡೆಯಿತು ಈ ಹಗರಣ!

Achyutkumar by Achyutkumar
Ankola Aadhaar card is a duplicate... RTC is a duplicate too!
Share on FacebookShare on WhatsappShare on Twitter
ADVERTISEMENT

ನಕಲಿ ದಾಖಲೆಗಳ ಮೂಲಕ ಅಂಕೋಲಾದಲ್ಲಿನ ಭೂಮಿಗಳನ್ನು ವಶಕ್ಕೆಪಡೆಯುತ್ತಿದ್ದ ಭೂಗಳ್ಳರು ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಉಪನೋಂದಣಿ ಕಚೇರಿ ಸಿಬ್ಬಂದಿಯೂ ಈ ವಂಚನೆಯಲ್ಲಿ ಶಾಮೀಲಾಗಿರುವುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ.

Advertisement. Scroll to continue reading.

ಅಂಕೋಲಾ ಶೇಡಿಕೇರಿಯ ಇಮ್ತಾಯಜ್ ಸಯ್ಯದ್ ಹಾಗೂ ಅವರ ಸಹೋದರ ಯಾಕೂಬ್ ಸಯ್ಯದ್ ಅವರ ಹೆಸರಿನಲ್ಲಿದ್ದ 1.14 ಎಕರೆ ಭೂಮಿ ದಿಢೀರ್ ಆಗಿ ಕುಮಟಾ ನಾಡುಮಾಸ್ಕೇರಿಯ ದೇವಿದಾಸ ನಾಗೇಶ ಗುನಗಾ ಅವರ ಹೆಸರಿಗೆ ಬದಲಾಗಿತ್ತು. ದಾಖಲೆಗಳ ಪರಿಶೀಲನೆ ಮಾಡಿದಾಗ ಗದಗದ ಹುಬ್ಬಳ್ಳಿ ರಸ್ತೆಯ ಈರಣ್ಣ ನೀಲಪ್ಪ ಶಿರಿಯಣ್ಣನವರ್ ಅವರು ಆ 1.14 ಎಕರೆ ಭೂಮಿ ತಮ್ಮದು ಎಂದು ನಕಲಿ ದಾಖಲೆ ಸೃಷ್ಠಿಸಿ ಅದನ್ನು ಮಾರಾಟ ಮಾಡಿರುವುದು ಬೆಳಕಿಗೆ ಬಂದಿತ್ತು. ಈ ಮಾರಾಟಕ್ಕೂ ಐದು ತಿಂಗಳ ಮೊದಲು ಆ ಭೂಮಿಯನ್ನು ಈರಣ್ಣ ಶಿರಿಯಣ್ಣನವರ್ ಅವರು ಸಹ ಖರೀದಿಸಿದವರಾಗಿದ್ದು, ಆಗ ಈರಣ್ಣ ಅವರಿಗೆ ಇಮ್ತಾಯಜ್ ಸಯ್ಯದ್ ಹಾಗೂ ಯಾಕೂಬ್ ಸಯ್ಯದ್ ಅವರ ಹೆಸರಿನಲ್ಲಿ ನಕಲಿ ಆಧಾರ್ ಕಾರ್ಡ ಸೃಷ್ಠಿಸಿ, ನಕಲಿ ವ್ಯಕ್ತಿಗಳ ಮೂಲಕ ಆ ಭೂಮಿ ಮಾರಾಟ ನಡೆದಿರುವುದು ಗೊತ್ತಾಗಿತ್ತು. ಈ ಭೂ ಹಗರಣದಲ್ಲಿ ಗದಗದ ಹುಬ್ಬಳ್ಳಿ ರಸ್ತೆಯ ಈರಣ್ಣ ನೀಲಪ್ಪ ಶಿರಿಯಣ್ಣನವರ್, ಕುಮಟಾ ನಾಡುಮಾಸ್ಕೇರಿಯ ದೇವಿದಾಸ ನಾಗೇಶ ಗುನಗಾ ಅವರ ಜೊತೆ ಅಂಕೋಲಾ ಅಂಬಾರಕೊಡ್ಲದ ಮಾರುತಿ ಶಿವಯ್ಯ ಗೌಡ, ಅಂಬಾರಕೊಡ್ಲದ ಸಂತೋಷ ಬುದ್ದು ಗೌಡ, ಪ್ರೀತಿ ದೇವಿದಾಸ ಗುನಗಾ, ಅಂಕೋಲಾದ ಮಹೇಶ ನಾಗಪ್ಪ ಗೌಡ, ಕುಮಟಾ ಮೂರುಕಟ್ಟೆಯ ಮಹಾಬಲೇಶ್ವರ ಗಿರಿಯಾ ನಾಯಕ, ಅಂಕೋಲಾದ ವಿನೋದ ಅಶೋಕ ನಾಯಕ, ಅಂಕೋಲಾದ ಅಮಿತ ಡಿ ನಾಯಕ ಹಾಗೂ ಇನ್ನಿತರರು ಭಾಗಿಯಾದ ಬಗ್ಗೆ ಪೊಲೀಸ್ ದೂರು ದಾಖಲಾಗಿತ್ತು.

ADVERTISEMENT

ಬೋಗ್ರಿಬೈಲು ಗ್ರಾಮದ ಸರ್ವೇ ನಂ 79ಅ4 1.14 ಎಕರೆ ಭೂಮಿ ಮೊದಲು ಪಕ್ರುದ್ಧೀನ್ ಸಯ್ಯದ್ ಅವರ ಹೆಸರಿನಲ್ಲಿತ್ತು. ಪಕ್ರಿದ್ಧೀನ್ ಸಯ್ಯದ್ ಅವರು ಆ ಭೂಮಿಯನ್ನು 2019ರಲ್ಲಿ ತಮ್ಮ ಮಕ್ಕಳ ಹೆಸರಿಗೆ ದಾನಪತ್ರದ ಮೂಲಕ ವರ್ಗಾಯಿಸಿದ್ದರು. ಶೇಡಿಕೇರಿಯ ಇಮ್ತಾಯಜ್ ಸಯ್ಯದ್ ಅವರು ಕೃಷಿ ಜೊತೆ ವ್ಯವಹಾರವನ್ನು ಮಾಡಿಕೊಂಡಿದ್ದು ಆ ಭೂಮಿ ಸರ್ವೇ ಮಾಡಿಸಿ ಕಪೌಂಡ್ ಹಾಕಲು ನಿರ್ಧರಿಸಿದ್ದರು. ಅದಕ್ಕಾಗಿ ಅರ್ಜಿ ಕೊಡಲು ಹೋದಾಗ ಪಹಣಿ ತೆಗೆಸಿದ್ದರು. ಆಗ, ಅಲ್ಲಿ ದೇವಿದಾಸ ಗುನಗಾ ಅವರ ಹೆಸರು ಕಂಡು ಕಂಗಾಲಾದರು. ಮ್ಯೂಟೇಶನ್ ದಾಖಲೆ ಪರಿಶಿಲನೆ ಮಾಡಿದಾಗ 2026ರ ಫೆಬ್ರವರಿ 13ರಂದು ನಕಲಿ ಮಾರಾಟ ಪತ್ರ ಸಿದ್ಧಪಡಿಸಿ, ಅದೇ ತಿಂಗಳ 16ರಂದು ಈರಣ್ಣ ನೀಲಪ್ಪ ಶಿರಿಯಣ್ಣನವರ್ ಎಂಬಾತರು ಆ ಭೂಮಿ ಖರೀದಿಸಿರುವುದು ಗೊತ್ತಾಯಿತು. ಆದರೆ, ಆ ಈರಣ್ಣ ಯಾರು? ಎಂದೇ ಇಮ್ತಾಯಜ್ ಅವರಿಗೆ ಗೊತ್ತಿರಲಿಲ್ಲ. ಕ್ರಯಪತ್ರದಲ್ಲಿ ನಮೂದಿಸಿದಂತೆ ಅವರು ನೀಡಿದ 12.50 ಲಕ್ಷ ರೂ ಹಣವೂ ಇಮ್ತಿಯಾಜ್ ಅವರಿಗೆ ಸಿಕ್ಕಿರಲಿಲ್ಲ. ಈರಣ್ಣ ಅವರು ಇಮ್ತಿಯಾಜ್ ಹಾಗೂ ಯಾಕೂಬ್ ಅವರ ಆಧಾರ್ ಕಾರ್ಡ ಡುಪ್ಲಿಕೇಟ್ ಮಾಡಿ, ಅವರ ಬದಲು ಬೇರೆ ವ್ಯಕ್ತಿಗಳನ್ನು ಕೂರಿಸಿ ದಸ್ತಾವೇಜು ನೋಂದಣಿ ಮಾಡಿರುವುದು ಗೊತ್ತಾಯಿತು. ಇದಕ್ಕೆ ಮಹಾಬಲೇಶ್ವರ ಗಿರಿಯಾ ನಾಯಕ, ಮಾರುತಿ ಶಿವಯ್ಯ ಗೌಡ ಎಂಬಾತರ ಸಾಕ್ಷಿ ಹಾಕಿದ್ದು, ಸ್ಥಳೀಯರು ಸಹ ಈ ಹಗರಣದಲ್ಲಿ ಭಾಗಿಯಾಗಿದ್ದು ಗಮನಕ್ಕೆ ಬಂದಿತು.

Advertisement. Scroll to continue reading.
ADVERTISEMENT

ಅದಾದ ನಂತರ 2026ರ ಏಪ್ರಿಲ್ 7ರಂದು ಆ ಭೂಮಿಯನ್ನು ದೇವಿದಾಸ ಗುನಗಾ ಅವರು ಈರಣ್ಣ ಅವರಿಂದ ಖರೀದಿ ಮಾಡಿದ ಬಗ್ಗೆ ದಾಖಲೆ ಸಿಕ್ಕಿತು. ಈ ವೇಳೆ ಪ್ರೀತಿ ದೇವಿದಾಸ ಗುನಗಾ ಹಾಗೂ ಮಹೇಶ ನಾಗಪ್ಪ ಗೌಡ ಅವರು ಅದಕ್ಕೆ ಸಾಕ್ಷಿ ಹಾಕಿದ್ದರು. ಭೂ ಹಗರಣದಲ್ಲಿ ಗದಗದ ಹುಬ್ಬಳ್ಳಿ ರಸ್ತೆಯ ಈರಣ್ಣ ನೀಲಪ್ಪ ಶಿರಿಯಣ್ಣನವರ್, ಕುಮಟಾ ನಾಡುಮಾಸ್ಕೇರಿಯ ದೇವಿದಾಸ ನಾಗೇಶ ಗುನಗಾ ಅವರ ಜೊತೆ ಅಂಕೋಲಾ ಅಂಬಾರಕೊಡ್ಲದ ಮಾರುತಿ ಶಿವಯ್ಯ ಗೌಡ, ಅಂಬಾರಕೊಡ್ಲದ ಸಂತೋಷ ಬುದ್ದು ಗೌಡ, ಪ್ರೀತಿ ದೇವಿದಾಸ ಗುನಗಾ, ಅಂಕೋಲಾದ ಮಹೇಶ ನಾಗಪ್ಪ ಗೌಡ, ಕುಮಟಾ ಮೂರುಕಟ್ಟೆಯ ಮಹಾಬಲೇಶ್ವರ ಗಿರಿಯಾ ನಾಯಕ, ಅಂಕೋಲಾದ ವಿನೋದ ಅಶೋಕ ನಾಯಕ, ಅಂಕೋಲಾದ ಅಮಿತ ಡಿ ನಾಯಕ ಅವರ ಹೆಸರು ನೀಡಿ ಇಮ್ತಾಯಜ್ ಸಯ್ಯದ್ ಅವರು ಪೊಲೀಸ್ ದೂರು ದಾಖಲಿಸಿದರು. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಕಾರವಾರ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಎಸ್ ವಿ ಗಿರೀಶ್ ಅವರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತು. ತನಿಖಾ ತಂಡವು ಕಚೇರಿಯ ಸಿಸಿಟಿವಿ ದೃಶ್ಯಾವಳಿಗಳು ಹಾಗೂ ತಾಂತ್ರಿಕ ಮಾಹಿತಿಯನ್ನು ಕೂಲಂಕಷವಾಗಿ ಪರಿಶೀಲಿಸಿ ಕ್ಷಿಪ್ರ ಕಾರ್ಯಾಚರಣೆ ನಡೆಸಿದ್ದಾರೆ. ಈ ಹಗರಣದಲ್ಲಿ ಬಾಳೆಗುಳಿಯ ಮಂಜುನಾಥ ಆನಂದು ಗೌಡ, ಕೃತ್ಯಕ್ಕೆ ಸಹಕರಿಸಿದ ಅಂಕೋಲಾ ಉಪ ನೊಂದಣಾಧಿಕಾರಿಗಳ ಕಚೇರಿಯ ಡಾಟಾ ಎಂಟ್ರಿ ಆಪರೇಟರ್ ಶಂಕರ ರಾಮದಾಸ ಅಣೇಕರ, ಕೃಷ್ಣಾಪುರದ ಚೆನ್ನಪ್ಪ ಅಲಿಯಾಸ್ ರವಿ ಜಟ್ಟಿ ನಾಯ್ಕ, ಬೆಳಸೆಯ ದರ್ಶನ ನಾರಾಯನ ಗೌಡ ಹಾಗೂ ಯಂಕು ಹುಲಿಯಾ ಗೌಡ ಅವರು ಮುಖ್ಯ ಆರೋಪಿಗಳಾಗಿದ್ದಾರೆ. ಈ ಐದು ಜನರನ್ನು ಪೊಲೀಸರು ಬಂಧಿಸಿದ್ದಾರೆ.

ವಿಚಾರಣೆ ವೇಳೆ ಆರೋಪಿಗಳು ಕೃತ್ಯವೆಸಗಿರುವುದನ್ನು ಒಪ್ಪಿಕೊಂಡಿದ್ದಾರೆ. ಆರೋಪಿತರನ್ನು ಪೊಲೀಸರು ನ್ಯಾಯಾಲಯಕ್ಕೆ ಒಪ್ಪಿಸಿದ್ದು, ನ್ಯಾಯಾಲಯ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದೆ. ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ್ ಎಂ ಎನ್ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಜಿ. ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆದಿದೆ. ಅಂಕೋಲಾ ಪಿಐ ಚಂದ್ರಶೇಖರ ಮಠಪತಿ, ಪಿಎಸೈ ಗುರುನಾಥ ಹಾದಿಮನಿ, ವಿಶ್ವನಾಥ ನಿಂಗೋಳ್ಳಿ, ಲಲಿತಾ ರಜಪೂತ ಹಾಗೂ ಸಿಬ್ಬಂದಿಗಳಾದ ಮೊಹಮ್ಮದ್‌ಶಫಿ ಶೇಖ್, ಮಹಾದೇವ ಸಿದ್ದಿ, ಗಿರೀಶ ಲಮಾಣಿ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

ಕೆಲಸ ಮಾಡದೇ ಕಾಸು ಹೊಡೆದವರಿಗೆ ಅಮಾನತು ಶಿಕ್ಷೆ!

September 8, 2026
DJ Ban Ganeshotsav organizer expresses dissatisfaction!

ಡಿಜೆ ನಿಷೇಧ: ಅಸಮಧಾನವ್ಯಕ್ತಪಡಿಸಿದ ಗಣೇಶೋತ್ಸವದ ಆಯೋಜಕ!

September 8, 2026
Ganesh Festival: Use of DJs is prohibited. No permission for loudspeakers at night either!

ಗಣೇಶ ಹಬ್ಬ: ಡಿಜೆ ಬಳಸುವ ಹಾಗಿಲ್ಲ. ರಾತ್ರಿ ಮೈಕ್’ಗೂ ಅನುಮತಿ ಇಲ್ಲ!

September 8, 2026
ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!