ಗೊತ್ತು-ಗುರಿಯಿಲ್ಲದ ವ್ಯಾಪಾರಿಗಳ ಬಗ್ಗೆ ಉತ್ತರ ಕನ್ನಡದಲ್ಲಿಯೂ ಅನೇಕರು ರೀಲ್ಸ್ ಮಾಡುತ್ತಿದ್ದು, ರೀಲ್ಸ್ ಮೂಲಕ ಬಂದ ಜಾಹೀರಾತು ನಂಬಿದ ವ್ಯಕ್ತಿಯೊಬ್ಬರು 1.95 ಲಕ್ಷ ರೂ ಕಳೆದುಕೊಂಡಿದ್ದಾರೆ. ನಂಬಿಕೆಗೆ ಅರ್ಹವಲ್ಲದ ಅಪರಿಚಿತರ ಕುರಿತು ಇನ್‌ಫ್ಲಯುಯೇನ್ಸರ್ಸ ಮಾಡಿದ ತಪ್ಪಿಗೆ ಅಮಾಯಕರು ಹಣ ಕಳೆದುಕೊಳ್ಳುತ್ತಿದ್ದಾರೆ.
ಜೊಯಿಡಾದ ರಾಮನಗರದ ರಾಮಲಿಂಗಗಲ್ಲಿಯಲ್ಲಿ ಮಂಗೇಶ ನರಸಿಂಹ ಕಾಮತ್ ಅವರು ವಾಸವಾಗಿದ್ದಾರೆ. ತಮ್ಮ 50ನೇ ವಯಸ್ಸಿನಲ್ಲಿ ಅವರು ಕಷ್ಟಪಟ್ಟು ಮನೆ ನಿರ್ಮಾಣದ ಸಾಹಸಕ್ಕೆ ಮುಂದಾಗಿದ್ದಾರೆ. ಆಗಾಗ ಅವರು ರೀಲ್ಸ್ ನೋಡುವ ಅವರಿಗೆ ಅಲ್ಲಿ ಮನೆ ನಿರ್ಮಾಣ ಸಲಹೆಗಳು ದೊರೆಯುತ್ತಿದೆ. ಜೊತೆಗೆ ವಿವಿಧ ಉತ್ಪನ್ನಗಳ ಬಗ್ಗೆ ರೀಲ್ಸ್ ಮೂಲಕ ಪ್ರಚಾರ ನಡೆಯುತ್ತಿರುವುದನ್ನು ಅವರು ನಂಬಿದ್ದಾರೆ. ಹೀಗಿರುವಾಗ ಫೇಸ್ಬುಕ್ ರೀಲ್ಸ್ ಮೂಲಕ ಬಂದ ಜಾಹೀರಾತೊಂದು ಅವರನ್ನು ಆಕರ್ಷಿಸಿದೆ.
ರೀಲಿಂಗ್, ಸ್ಲೆಡಿಂಗ್ ವರ್ಕ ಮಾಡುವ ಕುರಿತು ವ್ಯಕ್ತಿಯೊಬ್ಬರು ಮಾಡಿದ ವಿಡಿಯೋ ನೋಡಿದ ಅವರು ಆ ಕೆಲಸ ಮಾಡುವವರು ಎಂದು ಬಿಂಬಿಸಲಾದ ವ್ಯಕ್ತಿಗೆ ಫೋನ್ ಮಾಡಿದ್ದಾರೆ. ಫೋನ್ ರಿಸಿವ್ ಮಾಡಿದ ವ್ಯಕ್ತಿ ತಮ್ಮನ್ನು ಹುಬ್ಬಳ್ಳಿಯ ಪೂನಮರಾಮ ಬಿಸ್ನೋಯಿ ಎಂದು ಪರಿಚಯಿಸಿಕೊಂಡಿದ್ದಾರೆ. ಮೇ 9ರಂದು ಅವರ ನಡುವೆ ಮಾತುಕಥೆ ನಡೆದಿದ್ದು, `ತಮ್ಮ ಮನೆಗೆ ಇಂಟಿರಿಯಲ್ ರೀಲಿಂಗ್, ಸ್ಲೆöÊಡಿಂಗ್ ವರ್ಕ ಮಾಡಿಕೊಡುವಂತೆ ಮಂಗೇಶ ಕಾಮತ್ ಅವರು ಕೇಳಿಕೊಂಡಿದ್ದಾರೆ. ಈ ಕೆಲಸ ಮಾಡುವುದಕ್ಕಾಗಿ ಪೂನಮರಾಮ ಬಿಸ್ನೋಯಿ ಅವರು 5.50 ಲಕ್ಷ ರೂ ಖರ್ಚಾಗುವ ಬಗ್ಗೆ ಹೇಳಿ ವ್ಯವಹಾರ ಕುದುರಿಸಿದ್ದಾರೆ.
Advertisement. Scroll to continue reading.
ಮಾತುಕಥೆ ಪ್ರಕಾರ ಮೇ 10ರಂದು ಮಂಗೇಶ ಕಾಮತ್ ಅವರು 45 ಸಾವಿರ ರೂ ವರ್ಗಾಯಿಸಿದ್ದಾರೆ. ಆದರೆ, ಅದಾದ ನಂತರ ಪೂನಮರಾಮ್ ಬಿಸ್ನೋಯಿ ಅವರು ಮಾತಿಗೆ ಸಿಕ್ಕಿಲ್ಲ. ಫೋನ್ ಮಾಡಿದರೂ ರಿಸಿವ್ ಮಾಡಿಲ್ಲ. ಪದೇ ಪದೇ ಫೋನ್ ಮಾಡಿದಾಗ ಸಿಕ್ಕಿದ ಪೂನಮರಾಮ ಬಿಸ್ನೋಯಿ ಅವರು `ಕೆಲಸಗಾರರು ಇಲ್ಲ. ಅವರು ಬಂದ ತಕ್ಷಣ ಕೆಲಸ ಮಾಡಿಸುವೆ’ ಎಂದಿದ್ದಾರೆ. ಅದಾದ ನಂತರ ಪೂನಮರಾಮ ಬಿಸ್ನೋಯಿ ಅವರೇ ಮತ್ತೆ ಫೋನ್ ಮಾಡಿ `ನಾಳೆಯಿಂದಲೇ ಕೆಲಸ ಶುರು ಮಾಡುವೆ. ಮತ್ತೆ 2 ಲಕ್ಷ ರೂ ಹಾಕಿ’ ಎಂದಿದ್ದಾರೆ. ಆಗ, ಪೂನಮರಾಮ ಬಿಸ್ನೋಯಿ ಅವರ ಸೂಚನೆ ಮೇರೆಗೆ ಮಂಗೇಶ ಕಾಮತ್ ಅವರು 1.45 ಲಕ್ಷ ರೂಪಾಯಿಯನ್ನು ಗೋಪಿಕಿಶನ್ ಎಂಬಾತರಿಗೆ ವರ್ಗಾಯಿಸಿದ್ದಾರೆ.
ಆದರೆ, ಈವರೆಗೂ ಮಂಗೇಶ ಕಾಮತ್ ಅವರ ಮನೆ ಕೆಲಸಕ್ಕೆ ಪೂನಮರಾಮ ಬಿಸ್ನೋಯಿ ಅವರ ಜನ ಬಂದಿಲ್ಲ. ಪೂನಮರಾಮ ಬಿಸ್ನೋಯಿ ಅವರು ಸಹ ಫೋನಿಗೆ ಸಿಗುತ್ತಿಲ್ಲ. ಚಂದದ ರೀಲ್ಸ್ ನೋಡಿ 1.95 ಲಕ್ಷ ರೂ ಕಳೆದುಕೊಂಡ ಮಂಗೇಶ ಕಾಮತ್ ಅವರು 1930 ಸೈಬರ್ ಸಹಾಯವಾಣಿಗೆ ಫೋನ್ ಮಾಡಿದ್ದಾರೆ. ತಮಗಾದ ಮೋಸದ ಬಗ್ಗೆ ದೂರು ನೀಡಿದ್ದಾರೆ. ಅದಾಗಿಯೂ ಅವರ ಹಣ ಮರಳಿ ಸಿಕ್ಕಿಲ್ಲ.
ಮೋಸ ಹೋದ ಬಗ್ಗೆ ಅರಿತ ಅವರು ರಾಮನಗರ ಪೊಲೀಸ್ ಠಾಣೆಗೆ ಬಂದು ಎಲ್ಲಾ ವಿಷಯ ಹೇಳಿದ್ದಾರೆ. ಪೊಲೀಸರು ಸಮಾಧಾನ ಮಾಡಿ, ಪ್ರಕರಣ ದಾಖಲಿಸಿದ್ದಾರೆ.