ಶಿರಸಿ ಎಕ್ಕಂಬಿಯ ಅಬ್ದುಲ್ ಮಜೀದ್ ಅವರು ರಸ್ತೆ ಪಕ್ಕ ಕಸ ಎಸೆದು ಗ್ರಾಮ ಪಂಚಾಯತಗೆ 5 ಸಾವಿರ ರೂ ಹಣ ಕಟ್ಟಿದ್ದಾರೆ. ದುಡ್ಡು ಕೊಡಲು ಅನುಮಾನ ಮಾಡಿದ ಅಬ್ದುಲ್ ಮಜೀದ್ ಅವರಿಂದ ಉಂಚಳ್ಳಿ ಗ್ರಾಮ ಪಂಚಾಯತ ಅಧಿಕಾರಿಗಳು ದಂಡ ವಸೂಲಿ ಮಾಡಿದ್ದಾರೆ.
Advertisement. Scroll to continue reading.
ಉಂಚಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಬ್ಬೆ ಗ್ರಾಮದ ಬಳಿ ರಸ್ತೆ ಬದಿಯಲ್ಲಿ ಥರ್ಮೋಕೋಲ್ ಸೇರಿದಂತೆ ತ್ಯಾಜ್ಯ ಕಸವನ್ನು ಬೇಕಾಬಿಟ್ಟಿಯಾಗಿ ಎಸೆಯಾಗಿತ್ತು. ಈ ಬಗ್ಗೆ ಜನ ಗ್ರಾಮ ಪಂಚಾಯತಗೆ ದೂರು ನೀಡಿದ್ದರು. ಪದೇ ಪದೇ ಅಲ್ಲಿ ಕಸ ಎಸೆಯಲಾಗುತ್ತಿದ್ದು, ಕಸ ಎಸೆಯುವವರ ಪತ್ತೆಗೆ ಅಧಿಕಾರಿಗಳು ವಿಶೇಷ ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ ಎಕ್ಕಂಬಿಯ ಅಬ್ದುಲ್ ಮಜೀದ್ ಅವರು ಕಸ ಎಸೆಯುವಾಗಲೇ ಸಿಕ್ಕಿಬಿದ್ದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹರ್ಷ ರಾಥೋಡ್ ಅವರು ಸಿಬ್ಬಂದಿಯೊAದಿಗೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಬಳಿಕ ಅಬ್ದುಲ್ ಮಜೀದ್ ಅವರನ್ನು ಕರೆಸಿ ವಿಚಾರಣೆ ನಡೆಸಿದರು. ಮೊದಲು ಕಸ ಎಸೆದ ಬಗ್ಗೆ ಅಬ್ದುಲ್ ಮಜೀದ್ ಅವರು ಒಪ್ಪಿಕೊಳ್ಳಲಿಲ್ಲ. ವಿವಿಧ ದಾಖಲೆ ತೋರಿಸಿದಾಗ ಒಪ್ಪಿಕೊಂಡರು. ದಂಡ ಪಾವತಿಸುವಂತೆ ಸೂಚಿಸಿದಾಗ ಪ್ರಭಾವಿಗಳಿಂದ ಫೋನ್ ಮಾಡಿಸುವ ಸಾಹಸ ಮಾಡಿದರು. ಆದರೆ, ಅಧಿಕಾರಿಗಳು ಅದಕ್ಕೆ ಬಗ್ಗಲಿಲ್ಲ. ಜನ ಸಹ ಅಧಿಕಾರಿಗಳ ನಿರ್ಣಯದ ಪರವಾಗಿದ್ದರಿಂದ ಅನಿವಾರ್ಯವಾಗಿ ಅಬ್ದುಲ್ ಮಜೀದ್ ಅವರು ದಂಡ ಕಟ್ಟಿದರು.
Advertisement. Scroll to continue reading.
`ರಸ್ತೆ ಬದಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುತ್ತದೆ. ಜಾಗೃತಿ ಮೂಡಿಸುವ ಉದ್ದೇಶಕ್ಕಾಗಿ ತಪ್ಪು ಮಾಡಿದವರಿಂದ ದಂಡ ವಸೂಲಿ ಮಾಡಲಾಗಿದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.