ಶಿರಸಿಯ ಕೃಷ್ಣ ಗೌಡ ಅವರು ಹೊನ್ನಾವರದಲ್ಲಿ ಸ್ಕೂಟಿ ಸಂಚರಿಸಿದ್ದು, ಆ ಸ್ಕೂಟಿ 40 ಅಡಿ ಆಳದ ಕಂದಕಕ್ಕೆ ಬಿದ್ದಿದೆ. ಪರಿಣಾಮ ಕೃಷ್ಣ ಗೌಡ ಅವರು ಸಾವನಪ್ಪಿದ್ದಾರೆ. ಅವರ ಜೊತೆಯಿದ್ದ ಮಂಜುನಾಥ ಗೌಡ ಅವರು ಕಂದಕದಲ್ಲಿ ಬಿದ್ದರೂ ಪ್ರಾಣ ಉಳಿಸಿಕೊಂಡಿದ್ದಾರೆ.
ಶಿರಸಿ ಸಂಪಖoಡ ಗದ್ದೆಮನೆ ಜಾನ್ಮನೆಯಲ್ಲಿ ಕೃಷ್ಣ ಮಾತು ಗೌಡ ಅವರು ವಾಸವಾಗಿದ್ದರು. 50 ವರ್ಷದ ಅವರು ಕೂಲಿ ಕೆಲಸ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದರು. ಕೃಷ್ಣ ಗೌಡ ಅವರ ಜೊತೆ ಅದೇ ಊರಿನ ಮಂಜುನಾಥ ಈರಾ ಗೌಡ ಅವರು ಸಹ ಕೂಲಿ ಕೆಲಸಕ್ಕ ಬೇರೆ ಬೇರೆ ಊರುಗಳಿಗೆ ಹೋಗುತ್ತಿದ್ದರು. ಅವರಿಬ್ಬರು ಹೊನ್ನಾವರಕ್ಕೆ ಹೋಗಿದ್ದು, ಅಕ್ಟೊಬರ್ 5ರಂದು ಅವರು ಅರೆಅಂಗಡಿ-ಜಕ್ಕೋಳ್ಳಿ ರಸ್ತೆಯಲ್ಲಿ ಸ್ಕೂಟಿಯಲ್ಲಿ ಸಂಚರಿಸುತ್ತಿದ್ದರು.
ಆ ಸ್ಕೂಟಿಯನ್ನು ಕೃಷ್ಣ ಗೌಡ ಅವರು ಓಡಿಸುತ್ತಿದ್ದರು. ಮಂಜುನಾಥ ಗೌಡ ಅವರು ಹಿಂದೆ ಕುಳಿತಿದ್ದರು. ಚಿಕ್ಕೊಳ್ಳಿಯ ಬಂಗಾರಗುAಡಿ ಘಟ್ಟದ ಹತ್ತಿರ ಸ್ಕೂಟಿ ನಿಯಂತ್ರಣ ತಪ್ಪಿತು. ತಿರುವಿನಿಂದ ಕೂಡಿದ ಇಳಿಜಾರಿನಲ್ಲಿ ಸ್ಕೂಟಿ ಕಂದಕದ ಕಡೆ ಮುಖ ಮಾಡಿತು. 40 ಅಡಿ ಆಳಕ್ಕೆ ಹೋಗಿ ಸ್ಕೂಟಿ ಬಿದ್ದಿತು. ಈ ಅಪಘಾತದಲ್ಲಿ ಕೃಷ್ಣ ಗೌಡ ಅವರು ಸಾವನಪ್ಪಿದರು. ಮಂಜುನಾಥ ಗೌಡ ಅವರು ಗಾಯಗೊಂಡು ಆಸ್ಪತ್ರೆ ಸೇರಿದರು. ಮಂಜುನಾಥ ಗೌಡ ಅವರ ತೊಡೆ, ಹೊಟ್ಟೆಗೆ ಗಾಯಗಳಾದವು. ಸ್ಕೂಟಿ ಸಂಪೂರ್ಣವಾಗಿ ಜಖಂ ಆಯಿತು.