ಚಹಾ ಹಾಗೂ ಸಿಗರೇಟಿನ ಬಾಕಿ ಹಣ ಕೇಳಿದ ವಿಚಾರಕ್ಕೆ ವ್ಯಕ್ತಿಯೊಬ್ಬ ಚಹಾ ಅಂಗಡಿ ಮಾಲೀಕನ ತಲೆಗೆ ಕಲ್ಲಿನಿಂದ ಹೊಡೆದು ಗಾಯಗೊಳಿಸಿದ್ದು, ಆರೋಪಿ ವಿರುದ್ದ ರಾಮನಗರ ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ.
ಕರಂಬಳದ ಅನಮೋಡ ನಿವಾಸಿ ನಿತೇಶ ಗೋಪಾಲ ಗಾವಡೆ (32) ಅವರು ರಾಮನಗರದ ಶಿವಾಜಿ ವೃತ್ತದಲ್ಲಿ ‘ಜಗದಂಬಾ ಟೀ ಸ್ಟಾಲ್’ ನಡೆಸುತ್ತಿದ್ದಾರೆ. ರಾಮನಗರದ ಕೆಪಿಸಿ ಕಾಲೋನಿ ನಿವಾಸಿ ವಿಠ್ಠಲ ಗವಳಿ ಎಂಬಾತ ಅಂಗಡಿಗೆ ಬಂದು ಚಹಾ ಕುಡಿದು ಸಿಗರೇಟು ಸೇದುತ್ತಿದ್ದು, ಈ ಸಂಬAಧ ರೂ 50 ಬಾಕಿ ಕೊಟ್ಟಿರಲಿಲ್ಲ. ಅಕ್ಟೋಬರ್ 7ರಂದು ರಾತ್ರಿ ಸುಮಾರು 10.30ರ ವೇಳೆಗೆ ವಿಠ್ಠಲ ಗವಳಿ ಅವರು ಬೈಕ್ನಲ್ಲಿ ಅಂಗಡಿಯ ಬಳಿ ಬಂದಿದ್ದಾರೆ. ಇದೇ ಸಂದರ್ಭದಲ್ಲಿ ನಿತೇಶ ಮಾರವಾಡಿ ಅಂಗಡಿಯಿAದ ಸಾಮಾನುಗಳನ್ನು ತೆಗೆದುಕೊಂಡು ತಮ್ಮ ಅಂಗಡಿಯತ್ತ ಬರುತ್ತಿದ್ದರು. ಆಗ ಬಾಕಿ ಹಣ ಕೇಳಿದ ಅವರು, ತಮಾಷೆಗೆ ಬೈಕ್ನ ಚಾವಿಯನ್ನು ತೆಗೆದುಕೊಂಡಿದ್ದಾರೆ.
ವಿಠ್ಠಲ ಬೈಕ್ನ ಚಾವಿಯನ್ನು ಕೇಳಿದಾಗ ನಿತೇಶ ಅವರು ಸ್ವಲ್ಪ ಸಮಯ ಚಾವಿ ನೀಡದೆ ಬಳಿಕ ವಾಪಸ್ ನೀಡಿದ್ದಾರೆ. ನಂತರ ನಿತೇಶ ಅವರು ತಮ್ಮ ಅಂಗಡಿಯತ್ತ ಬರುತ್ತಿದ್ದಾಗ ವಿಠ್ಠಲ ರಸ್ತೆಯಲ್ಲಿದ್ದ ಕಲ್ಲನ್ನು ತೆಗೆದುಕೊಂಡು ಎಸೆದ ಬಗ್ಗೆ ದೂರಲಾಗಿದೆ. ಕಲ್ಲು ನಿತೇಶ ಅವರ ತಲೆಯ ಹಿಂಭಾಗಕ್ಕೆ ಬಡಿದು ಗಾಯವಾಗಿದ್ದು, ರಕ್ತಸ್ರಾವವಾಗಿದೆ. ತಮಾಷೆ ಮಾಡಿದ್ದಕ್ಕೆ ಕಲ್ಲಿನಿಂದ ಹೊಡೆಯುವುದೇಕೆ? ಎಂದು ನಿತೇಶ ಪ್ರಶ್ನಿಸಿದಾಗ ವಿಠ್ಠಲ ಅವಾಚ್ಯವಾಗಿ ನಿಂದಿಸಿದ ಬಗ್ಗೆ ದೂರಲಾಗಿದೆ.