A Negative (A-) ರಕ್ತ ಸಿಗದೇ ಸಮಸ್ಯೆ ಅನುಭವಿಸುತ್ತಿದ್ದ ಅಂಕೋಲಾದ ವೀಣಾ ಗೌಡ ಅವರಿಗೆ ಕಾರವಾರ ಉಪಹಾರ ದರ್ಶಿನಿ ಮಾಲಕ ನಂದನ ರಾವ್ ಅವರು ರಕ್ತದಾನ ಮಾಡಿದ್ದಾರೆ. `ಬ್ಲಡ್ ಡೋನರ್ಸ’ ಎಂಬ ವಾಟ್ಸಪ್ ಗುಂಪಿನ ನೆರವಿನಿಂದ ವೀಣಾ ಗೌಡ ಅವರು ಅಪಾಯದಿಂದ ಪಾರಾಗಿದ್ದಾರೆ.
ಅಂಕೋಲಾ ತಾಲೂಕಿನ ಬಡಗೇರಿ ಗ್ರಾಮದ ವೀಣಾ ಗೌಡ ಅವರು ಹಿಮೋಗ್ಲೋಬಿನ್ ಕೊರತೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಕಾರವಾರದ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಅವರು ಚಿಕಿತ್ಸೆಪಡೆಯುತ್ತಿದ್ದರು. ಅವರ ಹಿಮೋಗ್ಲೋಬಿನ್ ಪ್ರಮಾಣ 4.5ಕ್ಕೆ ಇಳಿದಿದ್ದು, ತುರ್ತಾಗಿ ರಕ್ತದ ಅವಶ್ಯಕತೆ ಇತ್ತು. ಅದರಲ್ಲಿಯೂ ವೀಣಾ ಗೌಡ ಅವರು ಅಪರೂಪದ ಒ ನೆಗೆಟಿವ್ ರಕ್ತವನ್ನು ಹೊಂದಿದ್ದರು. ಸಾಕಷ್ಟು ಹುಡುಕಾಟ ನಡೆಸಿದರೂ ಅವರಿಗೆ ಆ ರಕ್ತ ಸಿಕ್ಕಿರಲಿಲ್ಲ.
ಅಪರೂಪದ ರಕ್ತದ ಗುಂಪು ದೊರೆಯದೆ ಆತಂಕಗೊ0ಡಿದ್ದ ಅವರ ಸಂಬ0ಧಿಕರಾದ ಸುಕ್ರು ಗೌಡ ಅವರು ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ಬಿ ನಾಯಕ ಅವರನ್ನು ಸಂಪರ್ಕಿಸಿ ನೆರವು ಕೋರಿದರು. ಮಾಧವ ನಾಯಕ ಅವರು `ಬ್ಲಡ್ ಡೋನರ್ಸ್’ ವಾಟ್ಸಪ್ ಗ್ರೂಪ್ನ ವಿನಾಯಕ್ ನಾಯ್ಕ ಅವರಿಗೆ ಫೋನ್ ಮಾಡಿದರು. ಈ ಕುರಿತು ವಿನಾಯಕ ನಾಯ್ಕ ಅವರು ಮಾಹಿತಿ ಹಂಚಿಕೊ0ಡಿದ್ದು, ಅದನ್ನು ನೋಡಿದ ನಂದನ್ ರಾವ್ ಅವರು ನೇರವಾಗಿ ಆಸ್ಪತ್ರೆಗೆ ಆಗಮಿಸಿದರು. ತಮ್ಮದೂ ಎ ನೆಗೆಟಿವ್ ರಕ್ತ ಎಂದು ತಿಳಿಸಿ ಅವರು ರಕ್ತದಾನ ಮಾಡಿದರು.