ಮಳಲಗಾoವ್ ಭಾಗದ ಕೆಲ ರೈತರ ಭೂಮಿಯಲ್ಲಿ ನಿರ್ದಿಷ್ಟ ಚಿಹ್ನೆಗಳು ಕಂಡು ಬಂದಿದ್ದು, ಅದನ್ನು ನೋಡಿದ ಜನ ಕಂಗಾಲಾಗಿದ್ದಾರೆ. ಯಾವ ಉದ್ದೇಶಕ್ಕಾಗಿ ಯಾರು ಈ ಚಿಹ್ನೆ ಹಾಕಿದರು? ಎನ್ನುವ ಬಗ್ಗೆ ಚರ್ಚೆ ನಡೆದರೂ ಅದಕ್ಕೆ ಉತ್ತರ ಸಿಕ್ಕಿಲ್ಲ.
ಸದ್ಯ ಉತ್ತರ ಕನ್ನಡ ಜಿಲ್ಲೆಯಲ್ಲಿ ಕೆಳಮಟ್ಟದಲ್ಲಿ ಲಘು ವಿಮಾನಗಳ ಹಾರಾಟ ಜೋರಾಗಿದೆ. ಅದರಿಂದ ಜನ ಆತಂಕಕ್ಕೆ ಒಳಗಾಗಿದ್ದು, `ಕೇಂದ್ರ ಸರ್ಕಾರ ಖನಿಜ ಸಂಶೋಧನೆಗಾಗಿ ಲಘು ವಿಮಾನ ಹಾರಾಟ ನಡೆಸಿದೆ’ ಎಂದು ಜಿಲ್ಲಾಡಳಿತ ಸ್ಪಷ್ಟನೆ ನೀಡಿದೆ. ಅದರ ನಡುವೆ ಇದೀಗ ರೈತರ ಜಮೀನಿನಲ್ಲಿ + ಆಕಾರದ ಚಿಹ್ನೆಗಳು ಕಂಡುಬoದಿವೆ. ಅದರೊಂದಿಗೆ ಕೆಲ ಸಂಖ್ಯೆಗಳು ಇದ್ದು, ಅವು ಸಾರ್ವಜನಿಕರಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಶಿರಸಿಯ ಮಳಲಗಾಂವ ಸೇರಿದಂತೆ ಕೆಲವು ಭಾಗಗಳಲ್ಲಿ ರೈತರ ಖಾಸಗಿ ಜಮೀನುಗಳಲ್ಲಿ ನಿರ್ದಿಷ್ಟ ಚಿಹ್ನೆಗಳನ್ನು ಹಾಕಲಾಗಿದೆ. ಅಲ್ಲಲ್ಲಿ ಸಿಮೆಂಟ್ ಕಂಬಗಳನ್ನೂ ಅಳವಡಿಸಿರುವುದು ಕಂಡುಬoದಿದೆ. ಆದರೆ ಈ ಗುರುತುಗಳನ್ನು ಯಾರು ಹಾಕಿದ್ದಾರೆ? ಯಾವ ಉದ್ದೇಶಕ್ಕಾಗಿ ಹಾಕಲಾಗಿದೆ? ಎಂಬ ಮಾಹಿತಿ ರೈತರಿಗೆ ಇಲ್ಲ. ಯಾವುದೇ ಪೂರ್ವ ಮಾಹಿತಿ ನೀಡದೆ ಅಪರಿಚಿತರು ಜಮೀನಿನಲ್ಲಿ ಗುರುತು ಹಾಕಿ ಹೋಗಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ. ಇತ್ತೀಚಿನ ಲಘು ವಿಮಾನಗಳ ಹಾರಾಟಕ್ಕೂ ಈ ಗುರುತುಗಳಿಗೂ ಸಂಬAಧವಿದೆಯೇ? ಎಂಬ ಅನುಮಾನವೂ ಜನರನ್ನು ಕಾಡುತ್ತಿದೆ.
ಜಮೀನುಗಳಲ್ಲಿ ಹಾಕಿರುವ ಗುರುತುಗಳು ಭೂ ಸರ್ವೆಗೆ ಸಂಬAಧಿಸಿದ್ದೇ? ಯಾವುದಾದರೂ ಯೋಜನೆಗಾಗಿ ಸ್ಥಳ ಗುರುತಿಸುವ ಕಾರ್ಯ ನಡೆಯುತ್ತಿದೆಯೇ? ಅಥವಾ ಭೂಸ್ವಾಧೀನ ಪ್ರಕ್ರಿಯೆಯ ಭಾಗವೇ? ಎಂಬ ಪ್ರಶ್ನೆಗಳು ರೈತರನ್ನು ಕಾಡುತ್ತಿವೆ. `ಒಂದು ವೇಳೆ ಸರ್ಕಾರಿ ಯೋಜನೆ ಅಥವಾ ಸರ್ವೆ ಕಾರ್ಯ ನಡೆಯುತ್ತಿದ್ದರೆ, ಅದಕ್ಕೆ ಸಂಬoಧಿಸಿದ ಇಲಾಖೆ, ಉದ್ದೇಶ ಮತ್ತು ಕಾರ್ಯವಿಧಾನದ ಬಗ್ಗೆ ಸ್ಥಳೀಯರಿಗೆ ಮಾಹಿತಿ ನೀಡಬೇಕಿತ್ತು’ ಎಂಬುದು ರೈತರ ಅಭಿಪ್ರಾಯ. `ಆಡಳಿತದಲ್ಲಿರುವವರು ಕೂಡಲೇ ಸ್ಥಳ ಪರಿಶೀಲನೆ ನಡೆಸಿ, ಗುರುತು ಹಾಕಿರುವುದರ ಹಿಂದಿನ ಉದ್ದೇಶವನ್ನು ಬಹಿರಂಗಪಡಿಸಬೇಕು’ ಎಂದು ಅಲ್ಲಿನವರು ಆಗ್ರಹಿಸಿದ್ದಾರೆ.