ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಬ್ಬು ಬೆಳೆಗಾರರು ಹೋರಾಟ ನಡೆಸಿದ್ದು, ಈ ಹೋರಾಟಕ್ಕೆ ಹಳಿಯಾಳದಲ್ಲಿಯೂ ಭಾರೀ ಜನ ಬೆಂಬಲವ್ಯಕ್ತವಾಗಿದೆ. ರೈತರ ಹೋರಾಟಕ್ಕೆ ಅಂಗಡಿಕಾರರು ಸ್ಪಂದಿಸಿ ಸ್ವಯಂ ಪ್ರೇರಣೆಯಿಂದ ಮಳಿಗೆಗಳನ್ನು ಬಂದ್ ಮಾಡಿದ್ದಾರೆ.
`ಕಬ್ಬು ಬೆಳೆಗಾರರ ಸಂಕಷ್ಟವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಅಗತ್ಯವಿದ್ದ ಕಡೆ ಸೂಕ್ತ ಪರಿಹಾರ ಕೊಡುವುದರ ಜೊತೆ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕು’ ಎಂದು ಆಗ್ರಹಿಸಿದ್ದಾರೆ. `ಬೇಡಿಕೆ ಈಡೇರುವವರೆಗೂ ಹೋರಾಟ ನಡೆಸುವುದು ಅನಿವಾರ್ಯ’ ಎಂದು ಎಚ್ಚರಿಸಿದ್ದಾರೆ. ರೈತರ ಈ ಹೋರಾಟಕ್ಕೆ ಹಳಿಯಾಳದ ವ್ಯಾಪಾರಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಬೆಂಬಲ ನೀಡಿದ್ದಾರೆ. ಬಹುತೇಕ ಎಲ್ಲಾ ಅಂಗಡಿಕಾರರು ಈ ದಿನ ತಮ್ಮ ಅಂಗಡಿಗೆ ಬೀಗ ಹಾಕಿ ರೈತರ ಪರ ಮಾತನಾಡಿದ್ದಾರೆ.
ಹಳಿಯಾಳ ಬಂದ್ ಆದ ಹಿನ್ನಲೆ ಅನೇಕರು ಸಮಸ್ಯೆ ಅನುಭವಿಸಿದ್ದಾರೆ. ಜನ ಜೀವನದ ಮೇಲೆಯೂ ಈ ಪ್ರತಿಭಟನೆ ಪರಿಣಾಮ ಬಿದ್ದಿದ್ದು, ಹೋರಾಟದಿಂದಾಗಿ ವಿದ್ಯಾರ್ಥಿಗಳು ತೊಂದರೆ ಅನುಭವಿಸಿದ್ದಾರೆ. ತೊಂದರೆ ಅನುಭವಿಸಿದವರನ್ನು ಮಾತನಾಡಿಸಿದಾಗ ಅವರು ರೈತರ ಹೋರಾಟಕ್ಕೆ ಬೆಂಬಲವ್ಯಕ್ತಪಡಿಸಿದ್ದಾರೆ. `ಬಂದ್ ಕರೆಯಿಂದ ನಮಗೆ ಒಂದು ದಿನ ಸಮಸ್ಯೆಯಾಗಿರಬಹುದು. ಆದರೆ, ಹೋರಾಟ ನಡೆಯದಿದ್ದರೆ ರೈತರು ನಿತ್ಯ ಸಮಸ್ಯೆ ಅನುಭವಿಸಬೇಕಾದ ಪರಿಸ್ಥಿತಿಯಿದೆ’ ಎಂದು ವಿದ್ಯಾರ್ಥಿಯೊಬ್ಬರು ಹೇಳಿದ್ದಾರೆ.