`ಅರಣ್ಯ ಹಕ್ಕು ಕಾಯ್ದೆ ಅಡಿ ಹೊಸದಾಗಿ ಸಲ್ಲಿಕೆಯಾಗುವ ಅರ್ಜಿಗಳನ್ನು ಸಹ ಸ್ವೀಕರಿಸಬೇಕು. ಸ್ವೀಕರಿಸಿದ ಅರ್ಜಿಗಳನ್ನು ನಿಯಮಾನುಸಾರ ವಿಲೇವಾರಿ ಮಾಡಬೇಕು’ ಎಂದು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯೂ ಸೂಚನೆ ಹೊರಡಿಸಿದೆ.
`ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಸಾಗುವಳಿದಾರರು ಭೂಮಿ ಹಕ್ಕಿಗೆ ಸಂಬAಧಿಸಿ ಅರ್ಜಿ ಸ್ವೀಕರಿಸಲು ಕಾಲಮಿತಿ ಇಲ್ಲ’ ಎಂದು ಅಧಿಕೃತ ಪತ್ರದಲ್ಲಿ ಉತ್ತರಿಸಲಾಗಿದೆ. ಕಾನೂನು ತಿಳುವಳಿಕೆ, ಸಾಕಷ್ಟು ಪ್ರಚಾರ, ಮಾಹಿತಿಗಳ ಕೊರತೆಯಿಂದ ರಾಜ್ಯದಲ್ಲಿ ಸಾಕಷ್ಟು ಅರಣ್ಯವಾಸಿಗಳು ಅರಣ್ಯ ಭೂಮಿ ಹಕ್ಕಿಗೆ ಅರ್ಜಿ ಸಲ್ಲಿಸುವಲ್ಲಿ ವಂಚಿತರಾಗಿದ್ದರು. ಅರ್ಜಿ ಸಲ್ಲಿಸಲು ಹಿಂದಿನ ಸರ್ಕಾರವು ಅರ್ಜಿಗಳನ್ನು ಸ್ವೀಕರಿಸಲು ಗ್ರಾಮ ಅರಣ್ಯ ಹಕ್ಕು ಸಮಿತಿಗೆ ಡಿಸೆಂಬರ್ 31, 2013ಕ್ಕೆ ಕೊನೆಯ ದಿನಾಂಕವನ್ನು ನಿಗಧಿಗೊಳಿಸಿತ್ತು. ಆದರೆ, ಇದೀಗ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರಣ್ಯವಾಸಿಗಳಿಂದ ಅರ್ಜಿ ಸ್ವೀಕರಿಸಲು ಕಾಲಮಿತಿ ನಿಗಧಿಗೊಳಿಸಿದ್ದು ಇಲ್ಲ ಎಂಬ ಅಂಶ ಹೊರಬಿದ್ದಿದೆ.
ಅರಣ್ಯ ಭೂಮಿ ಹಕ್ಕು ಹೋರಾಟಗಾರರ ಕಾರ್ಯಾಲಯದಲ್ಲಿ ಈ ಕುರಿತು ಅರಣ್ಯ ಭೂಮಿ ಹಕ್ಕು ಹೊರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಅವರು ಮಾಹಿತಿ ನೀಡಿದ್ದು, `ರಾಜ್ಯಾದ್ಯಂತ ಅರಣ್ಯ ಹಕ್ಕು ಕಾಯಿದೆಯಲ್ಲಿ ಅರಣ್ಯವಾಸಿಗಳಿಂದ ಅರ್ಜಿ ಸ್ವೀಕರಿಸುವ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿತ್ತು. ಅರಣ್ಯವಾಸಿಗಳ ಹಿತ ದೃಷ್ಟಿಯಿಂದ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯು ಸರ್ಕಾರಕ್ಕೆ ತಪ್ಪಿರುವಂತ ಅರಣ್ಯವಾಸಿಗಳಿಗೆ ಮಂಜೂರಿ ಪ್ರಕ್ರಿಯೆಗೆ ಅವಕಾಶ ನೀಡುವ ಹಿನ್ನಲೆಯಲ್ಲಿ ತಪ್ಪಿರುವಂತ ಅರಣ್ಯವಾಸಿಗಳಿಗೆ ಪುನಃ ಅವಕಾಶ ನೀಡುವಂತೆ ಲಿಖಿತ ಆಕ್ಷೇಪಣೆ ಸಲ್ಲಿಕೆಯಾಗಿತ್ತು. ಈ ಹಿನ್ನಲೆಯಲ್ಲಿ ಹೋರಾಟಗಾರರ ವಾದಕ್ಕೆ ಮಾನ್ಯತೆ ನೀಡಿದೆ’ ಎಂದು ವಿವರಿಸಿದರು.
`ಅರಣ್ಯ ಹಕ್ಕು ಕಾಯಿದೆಯಲ್ಲಿ ಅರ್ಜಿ ಸಲ್ಲಿಸದ ಅರಣ್ಯವಾಸಿಗಳಿಗೆ ಒಕ್ಕಲೆಬ್ಬಿಸುವ ಪ್ರಕ್ರಿಯೆ ಜರುಗುತ್ತೀರುವುದರಿಂದ ಇಂತಹ ಅರಣ್ಯವಾಸಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ದೊರಕಲಿದೆ. ಇದರಿಂದ ಜಿಲ್ಲಾದ್ಯಂತ ಸುಮಾರು 15 ಸಾವಿರ ಕುಟುಂಬಗಳಿಗೆ ತುರ್ತು ಜೀವಧಾನ ಸಿಕ್ಕಿದ ಹಾಗಾಗಿದೆ’ ಎಂದರು.
.