• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Email bomb sent to Karwar court!

ಕಾರವಾರ ಕೋರ್ಟಿಗೆ ಇಮೇಲ್ ಬಾಂಬ್!

June 24, 2026
Usury racket Police raid on money lender's house!

ಬಡ್ಡಿ ದಂಧೆ: ದುಡ್ಡು ಕೊಡುವವರ ಮನೆ ಮೇಲೆ ಪೊಲೀಸ್ ದಾಳಿ!

June 24, 2026
Bolero overturns after colliding with Fortuner

ಫಾರ್ಚೂನರ್ ಡಿಕ್ಕಿಗೆ ಬೊಲೆರೋ ಪಲ್ಟಿ

  • Home
Thursday, June 25, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
Home ನಮ್ಮ ಊರು-ನಮ್ಮ ಜಿಲ್ಲೆ

ಮೂರು ತಿಂಗಳಿoದ ಕೆಲಸ ಮಾಡದ ಅಧಿಕಾರಿ: ಹೆಸ್ಕಾಂ ನಿರ್ಲಕ್ಷ್ಯಕ್ಕೆ ಎರಡು ಜೀವ ಬಲಿ!

Achyutkumar by Achyutkumar
October 20, 2025
Officer who hasn't worked for three months Two lives lost due to HESCOM negligence!
Share on FacebookShare on WhatsappShare on Twitter
ADVERTISEMENT

ಹೊನ್ನಾವರದ ಸಂತೋಷ ಗೌಡ ಅವರ ಮನೆ ಅಂಗಳದಲ್ಲಿ ಅಪಾಯಕಾರಿ ರೀತಿ ವಿದ್ಯುತ್ ತಂತಿ ಹಾದುಹೋದ ಬಗ್ಗೆ ಮೂರು ತಿಂಗಳ ಹಿಂದೆಯೇ ಅರಿವಿದ್ದರೂ ಹೆಸ್ಕಾಂ ಅಧಿಕಾರಿ ರಾಮಕೃಷ್ಣ ಭಟ್ಟ ಅವರು ಬೇಜವಬ್ದಾರಿಯಿಂದ ವರ್ತಿಸಿದ್ದು, ಪರಿಣಾಮ ಭಾನುವಾರ ರಾತ್ರಿ ಎರಡು ಜೀವ ಬಲಿಯಾಗಿದೆ. ಅಪಾಯ ಆಗುವ ಮುನ್ಸೂಚನೆ ಇದ್ದ ಬಗ್ಗೆ ಹೇಳಿದರೂ ಬಾರದ ಕಾಸರಕೋಡಿನ ಲೈನ್‌ಮೆನ್ ಅಶೋಕ ಹಾಗೂ ಸೆಕ್ಷನ್ ಆಫಿಸರ್ ಪ್ರಸಾದ ಸಹ ಇದೀಗ ಮರುಕವ್ಯಕ್ತಪಡಿಸುತ್ತಿದ್ದಾರೆ. ಸಣ್ಣ-ಪುಟ್ಟ ಕೆಲಸ ಮಾಡಿಕೊಡಲು ಸಾಧ್ಯವಾಗದ ದೊಡ್ಡ ದೊಡ್ಡ ನಾಯಕರು ಸಾವಿನ ನಂತರ ಸ್ಥಳಕ್ಕೆ ಬಂದು ಅನುಕಂಪಗಿಟ್ಟಿಸಿಕೊಳ್ಳುವ ನಿಟ್ಟಿನಲ್ಲಿ ರಾಜಕೀಯ ಮಾಡುತ್ತಿದ್ದಾರೆ!

ADVERTISEMENT

ಹೊನ್ನಾವರ ಕಾಸರಕೋಡ ಬಟ್ಟೆ ವಿನಾಯಕ ಕೇರಿಯಲ್ಲಿ ಸಂತೋಷ ಗೌಡ ಹಾಗೂ ಸೀತು ಗೌಡ ದಂಪತಿ ತಮ್ಮ ಇಬ್ಬರು ಮಕ್ಕಳ ಜೊತೆ ವಾಸವಾಗಿದ್ದರು. ಅವರ ಮನೆ ಮುಂದೆ ಹಾದುಹೋದ ವಿದ್ಯುತ್ ತಂತಿ ಅಪಾಯಕಾರಿ ಸ್ಥಿತಿಯಲ್ಲಿದ್ದ ಬಗ್ಗೆ ಅವರು ಮೂರು ತಿಂಗಳ ಹಿಂದೆ ಮಾಹಿತಿ ನೀಡಿದ್ದರು.ಈ ಬಗ್ಗೆ ಗ್ರಾ ಪಂ ಸದಸ್ಯ ಚಂದ್ರಹಾಸ ಗೌಡ ಅವರಿಗೆ ವಿಷಯ ಮುಟ್ಟಿಸಿದ್ದು, ಚಂದ್ರಹಾಸ ಗೌಡ ಅವರು ಸಮಸ್ಯೆ ಬಗ್ಗೆ ಹೆಸ್ಕಾಂ ಅಭಿಯಂತರ ರಾಮಕೃಷ್ಣ ಭಟ್ಟ ಅವರಿಗೆ ಫೋನ್ ಮಾಡಿದ್ದರು. ಜೊತೆಗೆ ವಿದ್ಯುತ್ ತಂತಿಯ ಅಪಾಯ ತಪ್ಪಿಸುವಂತೆ ಕಾಸರಕೋಡಿನ ಲೈನ್‌ಮೆನ್ ಅಶೋಕ ಹಾಗೂ ಸೆಕ್ಷನ್ ಆಫಿಸರ್ ಪ್ರಸಾದ ಅವರಿಗೂ ಚಂದ್ರಹಾಸ ಗೌಡ ಅವರು ಮನವಿ ಮಾಡಿದ್ದರು.

ಆದರೆ, ಸರ್ಕಾರಿ ಸಂಬಳಪಡೆಯುವ ಈ ಸಿಬ್ಬಂದಿ – ಅಧಿಕಾರಿ ಅದರ ಜೊತೆ ಬೇರೆ ನಿರೀಕ್ಷೆಯಲ್ಲಿದ್ದ ಕಾರಣ ಸುರಕ್ಷತಾ ಕ್ರಮ ಅನುಸರಿಸಿರಲಿಲ್ಲ. ಅಪಾಯದ ಬಗ್ಗೆ ಅರಿವಿದ್ದರೂ ಜನರ ಜೀವ ಉಳಿಸುವ ಕೆಸ ಮಾಡಿರಲಿಲ್ಲ. `ಅವರಿಗೆ ಅಷ್ಟು ಅರ್ಜಂಟ್ ಇದ್ದರೆ ಏನಾದರೂ ಕೊಟ್ಟು ಕೆಲಸ ಮಾಡಿಸಿಕೊಳ್ಳುತ್ತಾರೆ’ ಎಂದು ಎಂಜಲು ಕಾಸಿಗೆ ಆಸೆಪಡುತ್ತಿದ್ದರು. ಹೀಗಾಗಿಯೇ ಮೂರು ತಿಂಗಳು ಕಳೆದರೂ ಅಪಾಯಕಾರಿ ಸ್ಥಿತಿಯಲ್ಲಿದ್ದ ತಂತಿ ಬದಲಿಸುವ ಕೆಲಸಕ್ಕೆ ಯಾರೂ ಹೋಗಿರಲಿಲ್ಲ. ತುರ್ತು ದುರಸ್ಥಿಯನ್ನು ಮಾಡಿರಲಿಲ್ಲ. ಸ್ಥಳೀಯ ಜನಪ್ರತಿನಿಧಿಯಾಗಿರುವ ಚಂದ್ರಹಾಸ ಗೌಡ ಅವರು ಸಹ ಪದೇ ಪದೇ ಫೋನ್ ಮಾಡಿ ಒತ್ತಾಯಿಸುವುದನ್ನು ಬಿಟ್ಟಿರಲಿಲ್ಲ. ಆದರೆ, ಅವರ ಮಾತಿಗೆ ಹೆಸ್ಕಾಂ ಅಧಿಕಾರಿಗಳು ಮಾತ್ರ ಬೆಲೆ ಕೊಡಲಿಲ್ಲ.

ಭಾನುವಾರ ರಾತ್ರಿ ದಿಢೀರ್ ಆಗಿ ಅಪಾಯಕಾರಿ ರೀತಿಯಲ್ಲಿದ್ದ ವಿದ್ಯುತ್ ತಂತಿ ತುಂಡಾಗಿ ಬಿದ್ದಿತು. ಅದನ್ನು ಗಮನಿಸದೇ ತಂತಿ ಸ್ಪರ್ಶಿಸಿದ ಸಂತೋಷ ಗೌಡ ಹಾಗೂ ಸೀತು ಗೌಡ ಅಲ್ಲಿಯೇ ತಮ್ಮ ಪ್ರಾಣಬಿಟ್ಟರು. ಅವರ ಮಗ ನಾಗರಾಜ ಗೌಡ ಸಹ ವಿದ್ಯುತ್ ಆಘಾತದಿಂದ ಆಸ್ಪತ್ರೆ ಸೇರಿದರು. ಈ ವೇಳೆ ವಿದ್ಯುತ್ ಸರಬರಾಜು ಸ್ಥಗಿತಗೊಳಿಸುವಂತೆ ಅಲ್ಲಿದ್ದ ಗಣಪತಿ ಗೌಡ ಅವರು ಹೆಸ್ಕಾಂ ಗ್ರಿಡ್’ಗೆ ಫೋನ್ ಮಾಡಿದರು. ಆದರೆ, ಅಲ್ಲಿಯೂ ಫೋನ್ ಸ್ವೀಕರಿಸುವವರು ಸಹ ಗತಿಯಿರಲಿಲ್ಲ. ಹೀಗಾಗಿ ಸಂತೋಷ ಗೌಡ ಹಾಗೂ ಸೀತು ಗೌಡ ಸಾವಿನ ನಂತರವೂ ವಿದ್ಯುತ್ ಆಘಾತ ಅನುಭವಿಸಿದರು. ಸಣ್ಣಪುಟ್ಟ ಕೆಲಸಗಳನ್ನು ಮಾಡಿಕೊಡಲು ಸಾಧ್ಯವಾಗದ ದೊಡ್ಡ ದೊಡ್ಡ ನಾಯಕರು ಸೋಮವಾರ ಆಸ್ಪತ್ರೆಗೆ ದೌಡಾಯಿಸಿದರು. ಆಡಳಿತ ಪಕ್ಷದಲ್ಲಿರುವವರು ನೊಂದವರಿಗೆ ಸಾಂತ್ವಾನ ಹೇಳಿದರು. ವಿರೋಧ ಪಕ್ಷದಲ್ಲಿರುವವರು ಸರ್ಕಾರದ ನಡೆಯನ್ನು ಖಂಡಿಸಿದರು. ಆದರೆ, ಎರಡು ಜೀವ ಹೋದರೂ ಅದಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳುವ ಜವಾಬ್ದಾರಿ ತೆಗೆದುಕೊಳ್ಳುವವರು ಯಾರೂ ಕಾಣಲಿಲ್ಲ. ಅಕ್ಕ-ಬಾವನ ಶವದ ಮುಂದೆ ಮಲ್ಲಾಮಸ್ತಿಕೇರಿಯ ಆಟೋ ಚಾಲಕ ಸುಬ್ರಾಯ ಗೌಡ ಕಣ್ಣೀರು ಸುರಿಸುತ್ತಿದ್ದರು.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Email bomb sent to Karwar court!

ಕಾರವಾರ ಕೋರ್ಟಿಗೆ ಇಮೇಲ್ ಬಾಂಬ್!

June 24, 2026
Usury racket Police raid on money lender's house!

ಬಡ್ಡಿ ದಂಧೆ: ದುಡ್ಡು ಕೊಡುವವರ ಮನೆ ಮೇಲೆ ಪೊಲೀಸ್ ದಾಳಿ!

June 24, 2026
Bolero overturns after colliding with Fortuner

ಫಾರ್ಚೂನರ್ ಡಿಕ್ಕಿಗೆ ಬೊಲೆರೋ ಪಲ್ಟಿ

June 24, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

3
✋99804 99383