RTI ಅಸ್ತ್ರ ಬಳಸಿ ವಸೂಲಿಗೆ ತೆರಳಿದ್ದ ಮುಂಡಗೋಡಿನ ಮಹದೇಶ್ವರ ಲಿಂಗದಾಳ ಹಾಗೂ ಅವರ ಮಗ ವೀರೇಶ್ಕುಮಾರ ಲಿಂಗದಾಳ ಜೊತೆ ಮತ್ತೆ ಮೂವರನ್ನು ಹುಬ್ಬಳ್ಳಿ ಪೊಲೀಸರು ಬಂಧಿಸಿದ್ದಾರೆ. ಬ್ಯಾಂಕ್ ಅಧಿಕಾರಿಯೊಬ್ಬರ ಬಳಿ 1 ಕೋಟಿ ರೂ ಬೇಡಿದ ಪರಿಣಾಮ ನಾಲ್ವರು ಜೈಲು ಸೇರಿದ್ದಾರೆ.
ಮುಂಡಗೋಡದ ಕರಗಿನಕೊಪ್ಪದ ಮಹದೇಶ್ವರ ಲಿಂಗದಾಳ ಅವರು ಮೊದಲಿನಿಂದಲೂ ಇಂಥ ವಂಚನೆ ಜಾಲದಲ್ಲಿದ್ದರು. ಸಮೃದ್ಧ ಜೀವನ, ಆರ್ಎಂಪಿ ಹೇಳಿ ಬಗೆ ಬಗೆಯ ಸರಪಳಿ ಯೋಜನೆ ತಂದು ಜನರಿಗೆ ವಂಚಿಸಿದ್ದರು. ಸದ್ಯ ಮಹದೇಶ್ವರ ಲಿಂಗದಾಳ ಅವರ ಜೊತೆ ಅವರ ಮಗವೀರೇಶ್ಕುಮಾರ ಲಿಂಗದಾಳ ಸಹ ಸೇರಿಕೊಂಡು ವಸೂಲಿ ದಂಧೆ ಶುರು ಮಾಡಿದ್ದರು. ಈ ಅಪ್ಪ ಮಕ್ಕಳ ಜೊತೆ ಗದಗ ಮೂಲದ ಮಂಜುನಾಥ ಹದ್ದಣ್ಣನವರ, ಮಹಾಬಲೇಶ್ವರ ಶಿರೂರ, ಶಿವಪ್ಪ ಬೊಮ್ಮನಳ್ಳಿ ಸೇರಿ ಸರ್ಕಾರಿ ಅಧಿಕಾರಿಗಳನ್ನು ಬೆದರಿಸುವುದನ್ನೇ ಕಾಯಕವನ್ನಾಗಿಸಿಕೊಂಡಿದ್ದರು.
ಸದ್ಯ ಬ್ಯಾಂಕ್ ಅಧಿಕಾರಿಯೊಬ್ಬರಿಗೆ ಮಹಿಳೆ ಜೊತೆ ಸಂಬAಧದ ಕಥೆ ಕಟ್ಟಿ ವಸೂಲಿಗೆ ಪ್ರಯತ್ನಿಸಿದ್ದರು. 1.5 ಕೋಟಿ ರೂ ಹಣ ನೀಡುವಂತೆ ಈ ಐವರು ಬ್ಯಾಂಕ್ ಅಧಿಕಾರಿಗೆ ಬೆದರಿಸುತ್ತಿದ್ದರು. ಗೋಕುಲ ರೋಡ್ನಲ್ಲಿರುವ ಸಮೃದ್ಧಿ ಕ್ರೆಡಿಟ್ ಕೋ ಆಪ್ ಸೊಸೈಟಿ ಅಧಿಕಾರಿಗೆ ಆರೋಪಿತರು ಬೆದರಿಕೆ ಒಡ್ಡಿರುವುದನ್ನು ತಿಳಿದು ಪೊಲೀಸರು ಕಾರ್ಯಾಚರಣೆಗಿಳಿದರು. ಆ ಎಲ್ಲಾ ಆರೋಪಿತರನ್ನು ಬಂಧಿಸಿ ಅವರ ಬಳಿಯಿದ್ದ 1.70 ಲಕ್ಷ ರೂ ಹಣವನ್ನು ಜಪ್ತು ಮಾಡಿದರು.