60 ವರ್ಷ ದಾಡಿದರೂ ಮದುವೆ ಆಗಿಲ್ಲ ಎಂಬ ಕೊರಗಿನಲ್ಲಿದ್ದ ಅಪ್ಪಾಜಿ ಜೋಸೆಫ್ ಮುರುಡೇಶ್ವರದ ಬಳಿ ಆಸಿಡ್ ಕುಡಿದಿದ್ದಾರೆ. ರಾತ್ರಿ ಬೆಳಗಾಗುವುದರೊಳಗೆ ಅವರು ಸಾವನಪ್ಪಿದ್ದಾರೆ.
ಕೇರಳದ ಅಪ್ಪಾಜಿ ಜೊಸೆಪ್ ಅನೇಕ ವರ್ಷಗಳ ಹಿಂದೆಯೇ ಭಟ್ಕಳಕ್ಕೆ ಬಂದಿದ್ದರು. ಅವರಿವರ ತೋಟದ ಕೆಲಸ ಮಾಡಿಕೊಂಡಿದ್ದ ಅವರು ಭಟ್ಕಳದ ಉತ್ತರಕೊಪ್ಪ ಗಾಳಿಬೈಲಿನಲ್ಲಿ ವಾಸವಾಗಿದ್ದರು. ಅವರು ಒಂಟಿಯಾಗಿ ಜೀವಿಸಿದ್ದು, ಏಕಾಂಗಿಯಾಗಿರುವುದಕ್ಕೆ ಬೇಸರಿಸಿಕೊಳ್ಳುತ್ತಿದ್ದರು.
`ತನಗೆ ಯಾರು ಇಲ್ಲ. ಸಂಬoಧಿಕರು ಸಹ ಇಲ್ಲ’ ಎಂದು ಅವರು ಎಲ್ಲಡೆ ಹೇಳಿಕೊಂಡಿದ್ದರು. ಹೀಗಿರುವಾಗ ಕಳೆದ ಒಂದು ತಿಂಗಳ ಹಿಂದೆ ಅವರ ಒಂದು ಕಣ್ಣು ಕಾಣದ ಹಾಗಾಯಿತು. ಮದುವೆ ಆಗದ ಕೊರಗು ಸಹ ಅವರನ್ನು ಕಾಡುತ್ತಲೇ ಇತ್ತು. ಸಂಬoಧಿಕರು ಇಲ್ಲ. ಮದುವೆಯೂ ಆಗಿಲ್ಲ ಎಂಬ ನೋವಿನಲ್ಲಿದ್ದ ಅವರು ತಾವಿದ್ದ ಮಾಸ್ತಿಮನೆಯಲ್ಲಿ ಆಸಿಡ್ ಕುಡಿದರು.
ಜನವರಿ 25ರ ರಾತ್ರಿ 9ಗಂಟೆಗೆ ಸುಮಾರಿಗೆ ಅವರು ಆಸಿಡ್ ಕುಡಿದ ಬಗ್ಗೆ ಅಂದಾಜಿಸಲಾಗಿದ್ದು, ಮರುದಿನ ಬೆಳಗಾಗುವುದರೊಳಗೆ ಕೊನೆಯುಸಿರೆಳೆದಿದ್ದರು. ಭಟ್ಕಳ ಮಾರುತಿ ನಗರದ ಅಮೀತ ಭಾಸ್ಕರ್ ಶಾನಭಾಗ್ ಅವರು ಅಪ್ಪಾಜಿ ಜೋಸೆಫ್ ಅವರ ಸಾವಿನ ಬಗ್ಗೆ ಮಾಹಿತಿ ನೀಡಿದರು. ಮುರುಡೇಶ್ವರ ಪೊಲೀಸರು ಪ್ರಕರಣ ದಾಖಲಿಸಿದರು.