ಯಲ್ಲಾಪುರದ ಮಾಗೋಡಿನ ಕಡೆ ವೇಗವಾಗಿ ಬೈಕ್ ಓಡಿಸಿದ ಕಾಳಮ್ಮನಗರದ ದಾಮೋದರ ಕೋಟಾರಕರ್ ಅವರು ಎದುರಿನಿಂದ ಬರುತ್ತಿದ್ದ ಕಾರಿಗೆ ತಮ್ಮ ಬೈಕ್ ಗುದ್ದಿದ್ದಾರೆ. ಪರಿಣಾಮ ದಾಮೋದರ ಕೋಟಾರಕರ್ ಅವರ ಜೊತೆ ಬೈಕಿನಲ್ಲಿದ್ದ ಆನಂದ ಗೊಂದಲಿ ಅವರಿಗೂ ಪೆಟ್ಟಾಗಿದೆ.
ಯಲ್ಲಾಪುರದ ಕಾಳಮ್ಮನಗರದ ಗೌಂಡಿ ಕೆಲಸ ಮಾಡಿಕೊಂಡು ಆನಂದ ರಾಮಚಂದ್ರ ಗೊಂದಲಿ ಅವರು ವಾಸವಾಗಿದ್ದಾರೆ. ಅಲ್ಲಿಯೇ ಪೆಂಟಿAಗ್ ಕೆಲಸ ಮಾಡಿಕೊಂಡು ದಾಮೋದರ ದೇವರಾಯ ಕೋಟಾರಕರ್ ಅವರು ವಾಸವಾಗಿದ್ದಾರೆ. ಜನವರಿ 27ರಂದು ದಾಮೋದರ ಕೋಟಾರಕರ್ ಅವರು ಮಾಗೋಡಿನ ಕಡೆ ಬೈಕ್ ಓಡಿಸಿದ್ದು, ಆ ಬೈಕಿನಲ್ಲಿ ಆನಂದ ಗೊಂದಲಿ ಅವರು ಜೊತೆಯಾಗಿದ್ದಾರೆ. ವೇಗವಾಗಿ ಹೊರಟ ಬೈಕು ನಂದೂಳ್ಳಿ ಕಡೆಯಿಂದ ಬರುತ್ತಿದ್ದ ಮಾವಿನಗದ್ದೆಕುಮ್ರಿಯ ನಾಗಪ್ಪ ಗಿಡ್ಡಾ ಸಿದ್ದಿ ಅವರ ಕಾರಿಗೆ ಡಿಕ್ಕಿ ಹೊಡೆದಿದೆ.
ಮಾಗೋಡು ಕ್ರಾಸಿನಿಂದ 200ಮೀ ದೂರದಲ್ಲಿ ಈ ಅಪಘಾತ ನಡೆದಿದೆ. ಅಪಘಾತದ ರಭಸಕ್ಕೆ ಆನಂದ ಗೊಂದಳಿ ಅವರ ಎರಡು ಕಾಲುಗಳಿಗೆ ನೋವಾಗಿದೆ. ದಾಮೋದರ ಕೋಟಾರಕರ್ ಅವರ ಮಯ-ಮುಖಕ್ಕೆ ಗಾಯವಾಗಿದೆ. ನಾಗಪ್ಪ ಸಿದ್ದಿ ಅವರ ಕಾರಿನ ಮುಂದಿನ ಭಾಗವೂ ಜಖಂ ಆಗಿದೆ. ಈ ಬಗ್ಗೆ ನಾಗಪ್ಪ ಸಿದ್ದಿ ಅವರೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪಿಸೈ ರಾಜಶೇಖರ್ ವಂದಲಿ ಅವರು ವೇಗವಾಗಿ ವಾಹನ ಓಡಿಸಿದ ಬೈಕ್ ಸವಾರರ ಮೇಲೆ ಕಾನೂನು ಕ್ರಮ ಜರುಗಿಸಿದ್ದಾರೆ.