ಭಟ್ಕಳ – ಹೊನ್ನಾವರ ಮಾರ್ಗದಲ್ಲಿ ಸಂಚರಿಸುತ್ತಿದ್ದ ಶ್ರೀಕುಮಾರ ಬಸ್ಸು ಬೈಕಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ ಸವಾರ ಬಸ್ಸಿನ ಅಡಿಗೆ ಬಿದ್ದು ಸಾವನಪ್ಪಿದ್ದಾರೆ.
ಜನವರಿ 26ರ ರಾತ್ರಿ ಹಾವೇರಿಯ ಶ್ರೀನಿವಾಸ ವಡ್ಡರ್ ಅವರು ಈ ಮಾರ್ಗದಲ್ಲಿ ಬಸ್ಸು ಓಡಿಸುತ್ತಿದ್ದರು. ಬೆಂಗಳೂರಿಗೆ ಹೋಗಬೇಕಿದ್ದ ಆ ಬಸ್ಸು ಭಟ್ಕಳ ಕಡೆಯಿಂದ ಮುರುಡೇಶ್ವರದ ಕಡೆ ಪ್ರಯಾಣಿಕರನ್ನು ಕರೆತರಲು ಆಗಮಿಸಿತ್ತು. ಬೇಗ ಬೆಂಗಳೂರಿಗೆ ಹೋಗಬೇಕು ಎಂಬ ಆತುರದಲ್ಲಿ ಶ್ರೀನಿವಾಸ ವಡ್ಡರ್ ಅವರು ಬಸ್ಸನ್ನು ವೇಗವಾಗಿ ಓಡಿಸುತ್ತಿದ್ದರು. ಸಭಾತಿ ಕ್ರಾಸಿನ ಡಿವೈಡರ್ ಹತ್ತಿರ ಹೋಗುತ್ತಿದ್ದ ಬೈಕಿಗೆ ಹಿಂದಿನಿoದ ಬಸ್ಸು ಗುದ್ದಿದರು.
ಆ ಬೈಕನ್ನು ತೆರ್ನಮಕ್ಕಿ ಜನತಾ ಕಾಲೋನಿಯ ಎಲೆಕ್ಟಿಶಿಯನ್ ಜೋಸೆಫ್ ಡಿಸೋಜಾ (40) ಅವರು ಓಡಿಸುತ್ತಿದ್ದು, ಬಸ್ಸು ಗುದ್ದಿದ ರಭಸಕ್ಕೆ ಅವರು ನೆಲಕ್ಕೆ ಬಿದ್ದರು. ಗಂಭೀರ ಪ್ರಮಾಣದಲ್ಲಿ ಗಾಯವಾದ ಕಾರಣ ಅವರು ಅಲ್ಲಿಯೇ ಸಾವನಪ್ಪಿದರು. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಬಸ್ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿದ್ದು, ಕಾನೂನು ಕ್ರಮ ಜರುಗಿಸಿದ್ದಾರೆ.